ವರದಿ - ರಾಸುಗಳ ಪ್ರದರ್ಶನ, ಉಚಿತ ಪಶು ಚಿಕಿತ್ಸಾ ಶಿಬಿರ ಮತ್ತು ಜಾಗೃತಿ ಅಭಿಯಾನ ಕಾರ್ಯಕ್ರಮ

Report - Exhibition of Heifers, Free Veterinary Treatment Camp and Awareness Campaign Programme

ವರದಿ - ರಾಸುಗಳ ಪ್ರದರ್ಶನ, ಉಚಿತ ಪಶು ಚಿಕಿತ್ಸಾ ಶಿಬಿರ ಮತ್ತು ಜಾಗೃತಿ ಅಭಿಯಾನ ಕಾರ್ಯಕ್ರಮ  

ಗದಗ.24 : ಪಶುವೈದ್ಯಕೀಯ ಮಹಾವಿದ್ಯಾಲಯ, ಗದಗನ ತೃತೀಯ ವರ್ಷದ ಬಿ.ವಿ.ಎಸ್ಸಿ. ್ಘ ಎ.ಹೆಚ್‌., ವಿಸ್ತರಣಾ ಶಿಕ್ಷಣ ವಿದ್ಯಾರ್ಥಿಗಳ ಪ್ರಾಯೋಗಿಕ ತರಗತಿಯಡಿ, ಪಶುವೈದ್ಯಕೀಯ ಮಹಾವಿದ್ಯಾಲಯ, ಗದಗ, ಪಶುವೈದ್ಯ ಸೇವಾ ಇಲಾಖೆ, ಶಿರಹಟ್ಟಿ, ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ, ಕೊಂಚಿಗೇರಿ, ಧಾರವಾಡ ಹಾಲು ಒಕ್ಕೂಟ ಇವರ ಸಹಯೋಗದಲ್ಲಿ ರಾಸುಗಳ ಪ್ರದರ್ಶನ, ಉಚಿತ ಪಶು ಚಿಕಿತ್ಸಾ ಶಿಬಿರ ಮತ್ತು ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ದಿನಾಂಕ 19-02-2025 ರಂದು ಕೊಂಚಿಗೇರಿ ಗ್ರಾಮದಲ್ಲಿ ಆಯೋಜಿಸಲಾಗಿತ್ತು.  ರಾಸುಗಳ ಪ್ರದರ್ಶನದಲ್ಲಿ ವಿವಿಧ ಬಗೆಯ ಆಕಳು, ಎಮ್ಮೆ ಮತ್ತು ಎತ್ತುಗಳನ್ನು ಪ್ರದರ್ಶಿಸಲಾಯಿತು. ವಿವಿಧ ವಿಭಾಗಗಲ್ಲಿ ಶ್ರೇಷ್ಠ ರಾಸುಗಳಿಗೆ ಆಕರ್ಷಕ ಬಹುಮಾನ ನೀಡಲಾಯಿತು. ಬಹುಮಾನವನ್ನು ಗ್ರಾಮದ ಪಶುವೈದ್ಯರಾದ ಡಾ. ಗಜರಾಜ ಶಿ. ರಣತೂರ, ಜಂಟಿ ನಿರ್ದೇಶಕರು, ಕೆ.ಎಂ.ಎಫ್‌., ವಿಜಯಪುರ ಇವರು ಪ್ರಾಯೋಜಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಕೊಂಚಿಗೇರಿ ಗ್ರಾಮದ ರೈತರು ಪಶುವೈದ್ಯಕೀಯ ಮಹಾವಿದ್ಯಾಲಯದ ಮಾರ್ಗದರ್ಶನ ಪಡೆದು ಪಶುಪಾಲನೆಯಲ್ಲಿ ಇನ್ನೂ ಹೆಚ್ಚಿನ ಸಾಧನೆಗೈಯಬೇಕೆಂದು ಕರೆ ನೀಡಿದರು.ಪಶುಚಿಕಿತ್ಸಾ ಶಿಬಿರದಲ್ಲಿ ರೈತರ ಸುಮಾರು 150 ಜಾನುವಾರುಗಳ ವಿವಿಧ ಕಾಯಿಲೆಗಳು ಮತ್ತು ಸಮಸ್ಯೆಗಳಿಗೆ ನುರಿತ ತಜ್ಞ ಪಶುವೈದ್ಯರಿಂದ ಚಿಕಿತ್ಸೆ ಮತ್ತು ಸಲಹೆ ನೀಡಲಾಯಿತು. ಪಶುವೈದ್ಯಕೀಯ ಮತ್ತು ಪಶು ಸಂಗೋಪನೆಯ ವಿವಿಧ ವಿಷಯಗಳ ಕುರಿತು ಜಾಗೃತಿ ಮೂಡಿಸಲು ಪ್ರದರ್ಶನ ಏರಿ​‍್ಡಸಲಾಗಿತ್ತು. ಈ ಪ್ರದರ್ಶನವು ರೈತರಿಗೆ ಅಷ್ಟೇ ಸೀಮಿತವಾಗದೇ ಶಾಲಾ ವಿದ್ಯಾರ್ಥಿಗಳು ಹಾಗೂ ಇತರೆ ನಾಗರಿಕರಿಗೂ ಒಂದು ಕುತೂಹಲದ ಮತ್ತು ಜ್ಞಾನಾರ್ಜನೆಯ ಕೇಂದ್ರವಾಗಿ ಮೂಡಿಬಂದಿತು.ಕಾರ್ಯಕ್ರಮವನ್ನು ಪಶುವೈದ್ಯಕೀಯ ಮಹಾವಿದ್ಯಾಲಯದ ಡೀನ್‌ರವರಾದ ಡಾ ಬಿ ರಾಮಚಂದ್ರ ಇವರ ನೇತೃತ್ವದಲ್ಲಿ ಡಾ. ಶಿವಕುಮಾರ ಕ. ರಡ್ಡೇರ, ಡಾ. ವಿನಯ್ ಪಿ. ಟಿಕಾರೆ ಮತ್ತು ಡಾ. ಶ್ರೇಯಾಂಶ್ ಹೊಸೂರೆ ಇವರು ನಡೆಸಿಕೊಟ್ಟರು. ತಜ್ಞರಾದ ಡಾ.ಪಂಚಶೀಲ್, ಡಾ. ಮಹೇಶ ಅಕಾಸಿ ಭಾಗವಹಿಸಿದ್ದರು. ಧಾರವಾಡ ಹಾಲು ಒಕ್ಕೂಟದ ನಿರ್ದೇಶಕರಾದ ಶ್ರೀ ನಿಂಗರಾಜಗೌಡ ಪಾಟೀಲ ಅವರು ಅತಿಥಿಗಳಾಗಿ ಆಗಮಿಸಿದ್ದರು. ಸದರಿ ಕಾರ್ಯಕ್ರಮದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸುತ್ತಾ ಅವರು ಕೊಂಚಿಗೇರಿ ಗ್ರಾಮದ ರೈತರು ಹೈನುಗಾರಿಕೆಯಲ್ಲಿ ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಿಕೊಂಡು ಇನ್ನೂ ಹೆಚ್ಚಿನ ಸಾಧನೆಗೈಯಲಿ ಎಂದು ಹೇಳಿದರು. ಧಾರವಾಡ ಹಾಲು ಒಕ್ಕೂಟದ ಉಪವ್ಯವಸ್ಥಾಪಕರಾದ ಡಾ. ಪ್ರಸನ್ನ ಪಟ್ಟೇದ, ವಿಸ್ತರಣಾಧಿಕಾರಿಗಳಾದ ಶ್ರೀ ಮಂಜುನಾಥ ಜುಮ್ಮಣ್ಣವರ, ಪಶುವೈದ್ಯ ಇಲಾಖೆಯ ಪಶುವೈದ್ಯಾಧಿಕಾರಿಗಳಾದ ಡಾ. ಶಿವಸಾಗರ ಇವರು ಪಾಲ್ಗೊಂಡಿದ್ದರು. ಗ್ರಾಮದ ಕೃತಕ ಗರ್ಭಧಾರಣಾ ಕಾರ್ಯಕರ್ತ ಶ್ರೀ ಈರಣ್ಣ ಎಮ್‌. ಪಾಟೀಲ ಕಾರ್ಯಕ್ರಮ ಆಯೋಜನೆಯಲ್ಲಿ ಮುಖ್ಯ ಪಾತ್ರ ವಹಿಸಿದ್ದರು. ಗ್ರಾಮದ ಹಿರಿಯರಾದ ಶ್ರೀ ಪರಯ್ಯ ವಿಭೂತಿ ಮಠ, ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಶ್ರೀಮತಿ ರೇಖಾ ನಡುವಲಕೇರಿ, ಹಾಲು ಸಹಕಾರ ಸಂಘದ ಅಧ್ಯಕ್ಷರಾದ ಶ್ರೀಮತಿ ರತ್ನಮ್ಮ ಕೊಡಬಾಳರವರು ಸೇರಿದಂತೆ ಕೊಂಚಿಗೇರಿ ಗ್ರಾಮದ ಹಿರಿಯರು, ರೈತರು, ರೈತ ಮಹಿಳೆಯರು ಉಪಸ್ಥಿತರಿದ್ದರು.