ಆಚಾರ್ಯ ನಿಯಮಸಾಗರ ಮಹಾರಾಜರಿಂದ ಧರ್ಮಸಂಸ್ಕಾರ

ಕಾಗವಾಡ ಜೈನ ಮಂದಿರದಲ್ಲಿ ಆಚಾರ್ಯ ನಿಯಮಸಾಗರ ಮಹಾರಾಜರು ಶ್ರಾವಕರಿಗೆ ಧರ್ಮಸಂಸ್ಕಾರ ಮಾಡುತ್ತಿರುವ ದೃಶ್ಯ.

ಕಾಗವಾಡ 23: ಯಾವ ರೀತಿ ನೀರಿನ ಶುದ್ಧತೆಯ ಅದರ ಧರ್ಮವೆನಿಸುತ್ತದೆಯೋ ಮತ್ತು ನೀರಿನ ಅಶುದ್ಧತೆಯು ಅದು ಅದರ ಅಧರ್ಮವೆನಿಸುತ್ತದೆಯೋ ಹಾಗೆಯೇ ಆತ್ಮವನ್ನು ಶುದ್ಧಗೊಳಿಸುವುದಕ್ಕೆ ಧರ್ಮವೆನ್ನುತ್ತಾರೆ. ಅಂದರೆ ಆತ್ಮನ ಶುದ್ಧ ಅವಸ್ಥೆಯು ಶುದ್ಧ-ಧರ್ಮವೆನಿಸುತ್ತದೆ, ಮತ್ತು ಅದರ ಅಶುದ್ಧ ಅವಸ್ಥೆಯು ಅಧರ್ಮವೆನಿಸುತ್ತದೆ ಎಂದು ಆಚಾರ್ಯ ನಿಯಮಸಾಗರ ಮುನಿ ಮಹಾರಾಜರು ಳಿದರು.

ಕಾಗವಾಡದ ಭಗವಾನ್ ನೇಮಿನಾಥ ಜೈನ ಮಂದಿರದಲ್ಲಿ ದಿಗಂಬರ ಜೈನಾಚಾರ್ಯ ಸಂತಶಿರೋಮನಿ ಆಚಾರ್ಯ ವಿದ್ಯಾಸಾಗರಜಿ ಪರಮಶಿಷ್ಯರಾದ ನಿಯಮಸಾಗರ ಮುನಿ ಮಹಾರಾಜರು ಕಾಗವಾಡದಲ್ಲಿ ಜೈನ ಶ್ರಾವಕ ಶ್ರಾವಿಕೆಯರಿಗೆ 'ಸಮ್ಯಗ್ಜ್ಞಾನ ಸಂಸ್ಕಾರ'ದ ಧಮರ್ೊಪದೇಶ ಮಾಡುತ್ತಿದ್ದಾರೆ.

ಶ್ರಾವಕ ಶ್ರಾವಿಕೆಯರಿಗೆ ಜೈನ ಧರ್ಮದಲ್ಲಿಯ ಪರಮೇಷ್ಠಿ, ಮಂಗಲ, ಅಭಿವಾದನ, ಅಭಿವಾದನ ಶಬ್ದಗಳ ಅರ್ಥ, ಶ್ರಾವಕ, ಮರಣ, ಸಂಹನನ, ಮುನಿ ಪರಿಗ್ರಹ, ಪಾತ್ರರು, ದಾನ ಫಲ ಬಗ್ಗೆ ವಿವರವಾದ ಮಾಹಿತಿ ನೀಡುತ್ತಿದ್ದಾರೆ. ಇದನ್ನು ಶ್ರವಣ ಮಾಡಲು ಕಾಗವಾಡ ಹಾಗೂ ಪರಿಸರದ ಶ್ರಾವಕ ಶ್ರಾವಿಕೆಯರು ಪಾಲ್ಗೊಳ್ಳುತ್ತಿದ್ದಾರೆ.

ಕಾಗವಾಡದಲ್ಲಿ ಆಚಾರ್ಯ ವಿದ್ಯಾಸಾಗರಜಿ ಮಹಾರಾಜರ ಶಿಷ್ಯರಾದ ನಿಯಮಸಾಗರ, ಪ್ರಬೋಧಸಾಗರ, ವೃಷಭಸಾಗರ, ಅಭಿನಂದನಸಾಗರ, ಸುಪಾಶ್ರ್ವಸಾಗರ ಮುನಿ ಮಹಾರಾಜರು ಧರ್ಮಸಂಸ್ಕಾರ ಮಾಡುತ್ತಿದ್ದಾರೆ.

ಕಾಗವಾಡ ಜೈನ ಸಮಾಜ ಮಂಡಳದ ಹಿರಿಯ ಸದಸ್ಯರು, ಶ್ರಾವಕ ಶ್ರಾವಿಕೆಯರು, ಯುವಕರು ಸ್ವಾಮೀಜಿಗಳನ್ನುಅದ್ದೂರಿಯಾಗಿ ಸ್ವಾಗತಿಸಿ, ಬರಮಾಡಿಕೊಂಡು ಗ್ರಾಮದಲ್ಲಿ ಧರ್ಮಸಂಸ್ಕಾರ ಮುಂದುವರೆಸಿದ್ದಾರೆ.