ಲೋಕದರ್ಶನವರದಿ
ದಾವಣಗೆರೆ: ಮನುಷ್ಯನ ವ್ಯಕ್ತಿತ್ವ ವಿಕಾಸಕ್ಕೆ ಉನ್ನತ ಗುರಿ ಮತ್ತು ಧ್ಯೇಯ ಅಡಿಪಾಯ. ಸತ್ಯದ ತಳಹದಿಯ ಮೇಲೆ ಮನುಷ್ಯ ಬಾಳಿ ಬದುಕಬೇಕು. ಧರ್ಮ ಮತ್ತು ವಿಜ್ಞಾನದ ಸಮನ್ವಯದಿಂದ ಬದುಕು ಉಜ್ವಲಗೊಳ್ಳಲು ಸಾಧ್ಯವಾಗುತ್ತದೆ ಎಂದು ಬಾಳೆಹೊನ್ನೂರು ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ನಗರದ ಸಕರ್ಾರಿ ಹೈಸ್ಕೂಲ ಆವರಣದಲ್ಲಿ ಆಯೋಜಿಸಿದ ರಂಭಾಪುರಿ ಜಗದ್ಗುರುಗಳ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ 2ನೇ ದಿನದ ಸಾನ್ನಿಧ್ಯವನ್ನು ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಧರ್ಮ ಮತ್ತು ವಿಜ್ಞಾನ ಪರಸ್ಪರ ಪೂರಕ. ವಿಜ್ಞಾನ ಮನುಷ್ಯನಿಗೆ ವೇಗವನ್ನು ನೀಡುತ್ತದೆ. ಧರ್ಮ ಮನುಷ್ಯನಿಗೆ ಮಾರ್ಗವನ್ನು ತೋರುತ್ತದೆ. ಧರ್ಮದ ಬಳಿ ಮಾರ್ಗವಿದೆ ವೇಗವಿಲ್ಲ. ವಿಜ್ಞಾನದಲ್ಲಿ ವೇಗವಿದೆ ಮಾರ್ಗವಿಲ್ಲ. ವೇಗ ಇಲ್ಲದ ಧರ್ಮದಲ್ಲಿ ಸಾಕಷ್ಟು ಜಡತ್ವ ಬರಬಹುದು. ಅತಿ ವೇಗದ ವಿಜ್ಞಾನದಿಂದ ಸಂಕಷ್ಟ ತರಬಹುದು. ಹಾಗಾಗಿ ಮನುಷ್ಯ ಜೀವನದಲ್ಲಿ ಧರ್ಮ ಮತ್ತು ವಿಜ್ಞಾನದ ಸಮತೋಲನದ ಸಮನ್ವಯದಿಂದ ಮುನ್ನಡೆಯುವ ಅವಶ್ಯಕತೆಯಿದೆ. ಒಂದು ಭವ್ಯ ಕಟ್ಟಡದಲ್ಲಿ ಎರಡು ಬಗೆಯ ಕಲ್ಲುಗಳನ್ನು ಕಾಣಬಹುದು. ಒಂದು ಬುನಾದಿಯ ಕಲ್ಲುಗಳು ಇನ್ನೊಂದು ಗೋಡೆಯ ಕಲ್ಲುಗಳು. ಸುಂದರವಾದ ಗೋಡೆ ಕಲ್ಲು ಕಂಡು ಮನುಷ್ಯ ಮೆಚ್ಚುಗೆ ವ್ಯಕ್ತಪಡಿಸುತ್ತಾನೆ. ಆದರೆ ಬುನಾದಿಯ ಕಲ್ಲುಗಳನ್ನು ಮರೆಯುತ್ತಾನೆ. ಆ ಭವ್ಯ ಕಟ್ಟಡ ಬಲವಾದ ಬುನಾದಿಯ ಕಲ್ಲುಗಳಿಂದ ನಿಂತಿದೆ ಎಂಬುದನ್ನು ಜನ ಮರೆಯುತ್ತಾರೆ. ಅದರಂತೆ ಧರ್ಮದ ಮೂಲ ಆದರ್ಶಗಳನ್ನು ಮರೆಯದೇ ಪರಿಪಾಲಿಸಿಕೊಂಡು ಬರುವಲ್ಲಿ ಜೀವನದ ಉತ್ಕರ್ಷಣೆಯಿದೆ ಎಂಬುದನ್ನು ಯಾರೂ ಮರೆಯಬಾರದು. ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರ ತತ್ವ ಸಿದ್ಧಾಂತಗಳು ಮತ್ತು ಶಿವಶರಣರ ಸಾಮಾಜಿಕ ಚಿಂತನಗಳು ಬದುಕಿ ಬಾಳುವ ಜನಾಂಗಕ್ಕೆ ಬೆಳಕು ತೋರಲಿವೆ ಎಂದರು.
ಮೈಸೂರಿನ ಪಂಚಾಚಾರ್ಯ ಪ್ರಭಾ ವಾರ ಪತ್ರಿಕೆ ವಿಶೇಷಾಂಕ ಬಿಡುಗಡೆ ಮಾಡಿದ ಬಿಜೆಪಿ ಯುವ ಘಟಕದ ಪ್ರಧಾನ ಕಾರ್ಯದಶರ್ಿ ಬಿ.ವೈ.ವಿಜಯೇಂದ್ರ ಮಾತನಾಡಿ ಮಾನವ ಜೀವನಕ್ಕೆ ಧರ್ಮ ದಿಕ್ಸೂಚಿ. ಧರ್ಮದ ಆದರ್ಶ ಚಿಂತನಗಳನ್ನು ಪರಿಪಾಲಿಸಿಕೊಂಡು ಬಾಳಿದರೆ ಜೀವನದಲ್ಲಿ ಶ್ರೇಯಸ್ಸು ಕಾಣಲು ಸಾಧ್ಯ. ಈ ನಾಡಿನ ಗುರು ಪೀಠಗಳು ಸತ್ಯ ಸಂಸ್ಕೃತಿ ಬೆಳೆಸುತ್ತ ಸಮಾಜದ ಉತ್ತಮ ಕಾರ್ಯ ಮಾಡುತ್ತಿವೆ.
ಶ್ರೀ ರಂಭಾಪುರಿ ಪೀಠದ 121ನೇ ಜಗದ್ಗುರುಗಳಾದ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳವರ ನಿರಂತರ ಧರ್ಮ ಜಾಗೃತಿ ಕಾರ್ಯ ನಮ್ಮೆಲ್ಲರಿಗೆ ಆನೆಯ ಬಲ ತಂದು ಕೊಟ್ಟಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಶ್ರೀ ಲಂಕಾದಲ್ಲಿ ಮುಕ್ಕೋಟಿ ಲಿಂಗ ಸ್ಥಾಪಿಸಿದ ಕುರುಹುಗಳನ್ನು ಕಾಣಬಹುದಾಗಿದೆ. ರಾಜಕೀಯ ಕ್ಷೇತ್ರಕ್ಕೆ ಧರ್ಮದ ಮಾರ್ಗದರ್ಶನವಾಗಿದೆ. ಸಮಾಜ ಮತ್ತು ವ್ಯವಸ್ಥೆ ದಿಕ್ಕು ತಪ್ಪಿದಾಗ ಶ್ರೀ ಜಗದ್ಗುರುಗಳು ಟೊಂಕ ಕಟ್ಟಿ ನಿಂತಿದ್ದನ್ನು ಮರೆಯುವಂತಿಲ್ಲ ಎಂದರು.
ದಾವಣಗೆರೆ ಕವಿ ಗುರುರಾಜ ಪಾಟೀಲ ಧರ್ಮ-ವಿಜ್ಞಾನ ಚಿಂತನ ಕುರಿತು ಉಪನ್ಯಾಸವನ್ನಿತ್ತರು. ಕಾಮರ್ಿಕ ಧುರೀಣರ ಕಾ|| ಹೆಚ್.ಕೆ. ರಾಮಚಂದ್ರಪ್ಪ, ವಿಶ್ವ ಹಿಂದೂ ಪರಿಷತ್ನ ಮುನಿಯಪ್ಪ, ಮಹಾನಗರಪಾಲಿಕೆ ಆಯುಕ್ತ ಮಂಜುನಾಥ ಬಳ್ಳಾರಿ ಪಾಲ್ಗೊಂಂಡು ನುಡಿ ನಮನ ಸಲ್ಲಿಸಿದರು.
ತಾವರೆಕರೆ ಡಾ|| ಅಭಿನವ ಸಿದ್ಧಲಿಂಗ ಶ್ರೀಗಳು, ಅಕ್ಕಿಆಲೂರು ಚಂದ್ರಶೇಖರ ಶ್ರೀಗಳು, ಹೊಟ್ಯಾಪುರ ಗಿರಿಸಿದ್ಧೇಶ್ವರ ಶ್ರೀಗಳು, ಕೂಡ್ಲಿಗಿಯ ಪ್ರಶಾಂತ ಶ್ರೀಗಳಿಗೆ ಗೌರವ ಶ್ರೀ ರಕ್ಷೆಯಿತ್ತು ಶ್ರೀ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು. ದಾವಣಗೆರೆ ಎಸ್.ಎಸ್. ವೈದೈಕೀಯ ಮಹಾವಿದ್ಯಾಲಯದ ನಿದೇರ್ಶಕರಾದ ಡಾ|| ಎನ್.ಕೆ. ಕಾಳಪ್ಪನವರ ಅವರನ್ನು ಮೊದಲ್ಗೊಂಡು ಹಲವಾರು ಗಣ್ಯರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರು ರಕ್ಷೆ ನೀಡಿ ಆಶೀರ್ವದಿಸಿದರು. ಆವರಗೊಳ್ಳದ ಓಂಕಾರ ಶ್ರೀಗಳು ನೇತೃತ್ವ ವಹಿಸಿದ್ದರು. ರಾಂಪುರದ ವಿಶ್ವೇಶ್ವರ ಶ್ರೀಗಳು ನುಡಿ ತೋರಣ ಕಟ್ಟಿ ಸಮಾರಂಭಕ್ಕೆ ಮೆರಗು ತಂದರು. ನಗರದ ಕುಮಾರಿ ನವ್ಯ ನಟರಾಜ ಬಾಳಿಮಠ ಇವರಿಂದ ಭರತ ನಾಟ್ಯ ಪ್ರದಶರ್ಿಸಿದರು.
ದಾವಣಗೆರೆ ಡಿ.ವಿ.ಆರಾಧ್ಯಮಠ, ಸ್ವಾಗತಿಸಿದರು. ಬಾಳೆಹೊನ್ನೂರು ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದವರಿಂದ ವೇದಘೋಷ, ರಾಣೆಬೆನ್ನೂರಿನ ಗಿರಿಜಾದೇವಿ ಮ. ದುರ್ಗದಮಠ ಇವರಿಂದ ನಿರೂಪಣೆ, ರಾಜ್ಯ ಪ್ರಶಸ್ತಿ ಪುರಸ್ಕೃತ ವೀರೇಶ ಕಿತ್ತೂರ ಇವರಿಂದ ಸಂಗೀತ ಜರುಗಿತು. ಸಮಾರಂಭದ ಕೊನೆಯಲ್ಲಿ ಆಕರ್ಷಕ ನಜರ್ ಸಮರ್ಪಣೆ ಜರುಗಿತು.