ಧಾರ್ಮಿಕ ಕಾರ್ಯಗಳಿಂದ ಮಾತ್ರ ನೆಮ್ಮದಿ: ಕಸಾಪ ಮಾಜಿ ಅಧ್ಯಕ್ಷ ಬಳಿಗೇರ

ಲೋಕದರ್ಶನ ವರದಿ

ಶಿರಹಟ್ಟಿ 20:  ಒತ್ತಡದ ಬದುಕಿನಲ್ಲಿನ ಜೀವನದಲ್ಲಿ ಸಮಯ ಮತ್ತು ನೆಮ್ಮದಿಗಳು ಇಲ್ಲದೇ ಪರಿತಪಿಸುವ ಕಾಲದಲ್ಲಿ ನೆಮ್ಮದಿಗಾಗಿ ಹೋತೊರೆಯುತ್ತಿರುವ ಸಮಾಜಕ್ಕೆ ಧಾಮರ್ಿಕ ಕಾರ್ಯಗಳಿಂದ ಮಾತ್ರ ನೆಮ್ಮದಿ ದೊರಕಲು ಸಾಧ್ಯ ಎಂದು ಕಸಾಪ ಮಾಜಿ ಅಧ್ಯಕ್ಷ ಶಿಕ್ಷಕ ಕೆ.ಎ.ಬಳಿಗೇರ ಹೇಳಿದರು. 

ಅವರು ತಾಲೂಕಿನ ಮಾಗಡಿ ಗ್ರಾಮದ ಶ್ರೀ ಉಡಚಮ್ಮ ದೇವಿ ದೇವಸ್ಥಾನದಲ್ಲಿ ಕ್ಷೇತ್ರ ಧರ್ಮಸ್ಥಳಗ್ರಾಮಾಭಿವೃದ್ದಿ ಯೋಜನೆ ಶಿರಹಟ್ಟಿ ಮತ್ತು ಪ್ರಗತಿ ಬಂಧು ಸ್ವ-ಸಹಾಯಯ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ಜರುಗಿದ ಸಾಮೂಹಿಕ ವರಮಹಾಲಕ್ಷ್ಮೀ ಮತ್ತು ಒಕ್ಕೂಟಗಳ ಉದ್ಘಾಟನೆ ಹಾಗೂ ಧಾರ್ಮಿಕ ಸಭೆಯಲ್ಲಿ ಉಪನ್ಯಾಸದಲ್ಲಿ ಮಾತನಾಡಿದರು. 

ಮಹಿಳೆಯರು ಆಥರ್ಿಕವಾಗಿ ಸಬಲರಾಗಬೇಕು. ಆದರೆ ದೇಶೀಯ ಆಚರಣೆಗಳನ್ನು ಮರೆಯಬಾರದು, ಸ್ವಾಭಿಮಾನದ ಬದುಕನ್ನು ರೂಪಿಸಿಕೊಂಡು ಸ್ವಾಲವಂಬನೆಯ ಜೀವನ ನಡೆಸುವುದಕ್ಕೆ ಮುಂದಾಗಬೇಕು. ಧರ್ಮಸ್ಥಳದ ಗ್ರಾಮಾಭಿವೃದ್ದಿ ಯೋಜನೆಈಗಾಗಲೇ ಸಾಕಷ್ಟು ಜನಪರವಾದ ಮತ್ತು ಬಡವರ ಏಳಿಗೆಯನ್ನು ಬಯಸುವ ಯೋಜನೆಗಳಿಂದಾಗಿ ಸಾಕಷ್ಟು ಬಡ ಕುಟುಂಬಗಳು ಆಥರ್ಿಕವಾಗಿ ಸುಸ್ಥಿತಿಯನ್ನು ಹೊಂದಿರುವುದು ಜನಮಾತಾಗಿದೆ. ಧಾಮರ್ಿಕ ಆಚರಣೆಗಳೊಂದಿಗೆ  ಆರ್ಥಿಕವಾಗಿ ಪ್ರಗತಿಯ ವಿಚಾರ ನಿಜಕ್ಕೂ ಶ್ಲಾಘನೀಯವಾಗಿದೆ. ಇಂದು 350 ಕ್ಕೂ ಹೆಚ್ಚು ಮಹಿಳೆಯರನ್ನು ವರಮಹಾಲಕ್ಷ್ಮೀ ಪೂಜೆಯಲ್ಲಿ ಭಾಗಿಯಾಗಿಸಿ ಅವರಿಗೆಲ್ಲ ಧನ್ಯತೆ ಭಾವವನ್ನು ಮೂಡಿಸಿದ್ದಾರೆ. ಇಂತಹ ಧಾಮರ್ಿಕ ಕಾರ್ಯಗಳಿಂದಾಗಯೇ ನಮ್ಮ ಭಾಗದಲ್ಲಿ ಪ್ರವಾಹಗಳಾಗಿಲ್ಲ. ಎಲ್ಲವೂ ಸೌಖ್ಯತೆಯಿಂದ ಬಾಳುತ್ತಿದ್ದೇವೆ. ಧಾಮರ್ಿಕ ಆಚರಣೆಗಳಿಂದ ಮನಸಿ ದುಗುಡತೆಗಳನ್ನು ದೂರ ಮಾಡಿಕೊಂಡು, ಹಗುರವಾದ ಮನಸ್ಸಿನಿಂದ ಮುಂದಿನ ಕಾರ್ಯಕ್ಕೆ ಅಣಿಯಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು. 

   ಕಾರ್ಯಕ್ರಮವನ್ನು ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕರಾದ ಶಿವಾನಂದ ಆಚಾರ್ಯ ಉದ್ಘಾಟಿಸಿ ಮಾತನಾಡಿ, ಸಾಮೂಹಿಕವಾಗಿ ದೇವರ ಪ್ರಾರ್ಥನೆಯನ್ನು ಮಾಡುವುದರಿಂದ ಸದಸ್ಯರಲ್ಲಿ ಹೊಂದಾಣಿಗೆ ಮನೋಭಾವನೆ ಮತ್ತು ನಮ್ಮೆಲ್ಲರ ಪ್ರಾರ್ಥನೆ ದೇವರಿಗೆ ಬೇಗನೆ ತಲುಪುತ್ತದೆ. ಜೊತೆಗೆ ಸಿದ್ದಿಯೂ ಕೂಡಾ ಬೇಗನೆ ಕಲ್ಪಿತವಾಗುತ್ತದೆ. ಪರಸ್ಪರ ಭಕ್ತಿಯನ್ನು ಹಂಚಿಕೆಯಾಗುವುದರಿಂದ ಎಲ್ಲಾ ಸಮುದಾಯದ ಜನರಿಗೂ ಕೂಡಾ ಪೂಜೆಯ ಸಮಾನ ಅವಕಾಶಗಳು ಲಭ್ಯವಾಗುತ್ತದೆ. ಇಂತಹ ಅವಕಾಶಗಳನ್ನು ಎಲ್ಲರೂ ಪಡೆದುಕೊಂಡು ಧನ್ಯತೆಯ ಭಾವವನ್ನು ಮೆರೆಯಬೇಕು. ಸ್ತ್ರೀಯರಿಂದ ಪೂಜೆ ಪುನಸ್ಕಾರಗಳು ನಡೆಯುವುದರಿಂದ ಆ ಸಂಸ್ಕಾರ ಮಕ್ಕಳಿಗೆ ವಗರ್ಾಂತರವಾಗಿ ದೇಶೀಯ ಸಂಸ್ಕೃತಿ ಉಳಿಯಲು ಸಾಧ್ಯವಾಗುತ್ತದೆ ಎಂದು ಹೇಳಿದರು. 

ಕಾರ್ಯಕ್ರಮವನ್ನು ಮಾಗಡಿ ಗ್ರಾಮ ಪಂಚಾಯತಿಯ ಅಧ್ಯಕ್ಷೆ ಶಿವಕ್ಕ  ಹಿರೇಮಠಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾಪಮ ಸದಸ್ಯ ಮಂಜುನಾತ ಜೋಗಿ, ತಾಪಂ ಮಾಜಿ ಅಧ್ಯಕ್ಷ ಅಶೋಕ ಪಲ್ಲೇದ, ಮಾಂತೇಶ ದಶಮನಿ, ವಾಯ್.ಎಸ್.ಪಾಟೀಲ್, ಯೋಜನಾಧಿಕಾರಿ ಎಸ್. ಶಿವಣ್ಣ, ಶಂಕ್ರಯ್ಯ ಹಿರೇಮಠ, ಪ್ರಕಾಶ ಹೋರಿ, ವೀರಯ್ಯ ಮಠಪತಿ, ಶೇಖಣ್ಣ ಬಡ್ನಿ, ರಾಚನಗೌಡ್ರ ಅಜ್ಜನಗೌಡ್ರ, ಶಿವರಾಜಗೌಡ ಪಾಟೀಲ್, ಮುಂತಾದವರು ಉಪಸ್ಥಿತರಿದ್ದರು.