ಬಳ್ಳಾರಿಯಲ್ಲಿ ಪೂಜ್ಯ ಪಂಡಿಂತ್ ಮಠಂ ಗುರುಪ್ರಸಾದ್ ರಚಿತ ಉಮಾ ಮಹೇಶ್ವರ ಪಂಚಾಂಗ ಬಿಡುಗಡೆ ಕಾರ್ಯಕ್ರಮ
Release program of Uma Maheshwar panchang written by Pujya Pandit Matham Guruprasad in Bellary
ಬಳ್ಳಾರಿ 07: ಕಲ್ಚರಲ್ ಆಕ್ಟಿವೀಟೀಸ್ ಅಸೋಸಿಯೇಷನ್ (ರಿ) ವತಿಯಿಂದ ಸದ್ಗುರು ಸದಾನಂದ ಆಶ್ರಮ ಆಧ್ಯಾತ್ಮಿಕ ಮತ್ತು ಧ್ಯಾನಕೇಂದ್ರ (ರಿ), ಶ್ರೀ ಕ್ಷೇತ್ರ, ಸದ್ಗುರು ಕಾಲೋನಿ, ಮೋಕಾರಸ್ತೆ, ಬಳ್ಳಾರಿಯಲ್ಲಿ ಪೂಜ್ಯ ಪಂಡಿಂತ್ ಮಠಂ ಗುರುಪ್ರಸಾದ್ ರಚಿತ ಉಮಾ ಮಹೇಶ್ವರ ಪಂಚಾಂಗ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪೂಜ್ಯ ಶ್ರೀ ಗುರುಚರಣಾನಂದಗಿರಿ ಮಾತಾಜಿ (ಶರಣಮ್ಮ ತಾಯಿಯವರು) ಕೊಕ್ಕರಚೇಡು, ಪೂಜ್ಯ ವಿವೇಕಾನಂದ ಸ್ವಾಮಿ , ಸದ್ಗುರು ಸದಾನಂದ ಆಶ್ರಮ ಬಳ್ಳಾರಿ ರವರು ವಹಿಸಿದ್ದರು.
ನಾಗರಾಜ .ಕೆ.ಎ.ಎಸ್., ಆಡಳಿತ ಆಧಿಕಾರಿ ಮತ್ತು ವಿಶೇಷ ಭೂ ಸ್ವಾಧೀನ ಅಧಿಕಾರಿ, ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ಬೆಂಗಳೂರು ರವರು ದೀಪ ಬೆಳಗಿಸುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡುತ್ತಾ ಪಂಚಾಂಗವು ದಿನನಿತ್ಯದ ಪರಿಚಯವನ್ನು ತಿಳಿಸುತ್ತದೆ. ಇದು ನಮ್ಮ ಸಂಸ್ಕೃತಿಯ ಅನಾಧಿಕಾಲದಿಂದಲೂ ನಡೆದುಬಂದ ದಾರಿಯಾಗಿದೆ. ನಮ್ಮ ಪಂಚಾಂಗ ರಚನೆಯ ಮಾದರಿ ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದು ತಿಳಿಸಿದರು.
ಉಮಾ ಮಹೇಶ್ವರ ಪಂಚಾಂಗವನ್ನು ಬಳ್ಳಾರಿ ಮಹಾನಗರ ಪಾಲಿಕೆ ಮಹಾಪೌರರಾದ ಶ್ರೀ ಪಿ. ಗಾದೆಪ್ಪ ರವರು ಬಿಡುಗಡೆಗೊಳಿಸಿ ಮಾತನಾಡುತ್ತಾ ನಮ್ಮ ಸಂಪ್ರದಾಯ ಪದ್ದತಿಗಳು ವಿಶ್ವಕ್ಕೆ ಮಾದರಿ ಎಂದು “ಸಂಸ್ಕಾರದ ಜೀವನ ಸಂತಸದ ಜೀವನ”ಎಂದು ತಿಳಿಸಿದರು. ಮಾತಶ್ರೀಯವರು ತಮ್ಮ ಆಶೀರ್ವಚನದಲ್ಲಿ ನಂಬಿಕೆ, ಶ್ರದ್ಧೆ , ಭಕ್ತಿ, ನಮ್ಮನ್ನು ಮುಕ್ತಿಯೆಡೆಗೆ ನಡೆಸುತ್ತದೆ. ಅಚಲವಾದ ನಂಬಿಕೆಯಿಂದ ಏನಾದರೂ ಸಾಧಿಸಬಹುದು. ಸೇವೆಯೆ ನಿಮ್ಮ ಗುರಿಯಾಗಿರಲಿ ಎಂದು ತಿಳಿಸಿದರು.
ವಿವೇಕನಾನಂದ ಪೂಜ್ಯರು ಸತ್ಕಾರ್ಯದಲ್ಲಿ ಪಾಲ್ಗೊಳ್ಳಬೇಕು. ಹಾಗೂ ಸದಾ ನಾವುಗಳು ಸೇವಾ ಹಸ್ತದಿಂದ ಸರ್ವರಲ್ಲಿ ವಿಶ್ವಾಸಗಳಿಸಬೇಕು. ಧ್ಯಾನದಿಂದ ಏಕಾಗ್ರತೆಯನ್ನು ಸಾಧಿಸಿರಿ ಎಂದು ಕರೆನೀಡಿದರು. ಪಂಚಾಂಗ ರಚಿತರು ಮಾತನಾಡುತ್ತಾ ಪಂಚಾಂಗ ದರ್ಶಿಕೆ ಮಾನವನ ನಡೆನುಡಿಗೆ ಮಾರ್ಗದರ್ಶನ, ಪದ್ದತಿಯ ಜೀವನಕ್ಕೆ ಉತ್ತಮ ಹಾದಿ ತಮ್ಮೆಲ್ಲರ ಸಹಕಾರದಿಂದ ನಾನು ಈ ಕಾರ್ಯಮಾಡುತ್ತಿದ್ದೇನೆ ಎಂದು ಹೇಳಿದರು.
ಅಧ್ಯಕ್ಷರು ಮಾತನಾಡಿ ನಾವು ಈ ಕಾರ್ಯಕ್ರಮ ಹಮ್ಮಿಕೊಳ್ಳುವುದು ತಮ್ಮೇಲ್ಲರ ಸಹಕಾರ ಸದಾಕಾಲ ಇದೇ ರೀತಿಯಿಂದ ಇದ್ದರೆ ಮುಂದಿನ ದಿನಗಳಲ್ಲಿ ಹತ್ತು ಹಲವಾರು ಕಾರ್ಯಕ್ರಮಗಳನ್ನು ಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳುತ್ತೇವೆ. ಎಲ್ಲದಕ್ಕೂ ಪ್ರೇರಣೆ ನಮ್ಮ ಗೌರವಾಧ್ಯಕ್ಷರಾದ ಶೀಲಾಬ್ರಹ್ಮಯ್ಯನವರು. ಸದರಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾಽಽ ಯಶವಂತಭೂಪಾಲ, ಶ್ರೀ ಕೆ.ಎಂ. ಶಿವಮೂರ್ತಿ, ಟಿ.ಎಂ. ರಾಜಶೇಖರ ದೀನ್, ಕೆ.ಎ. ರಾಮಲಿಂಗಪ್ಪ, ಶ್ರೀ ಗುರುಸಿದ್ಧಸ್ವಾಮಿ, ಬಸರೆಡ್ಡಿ, ಎಂ. ಶಿವಾಜಿರಾವ್, ಡಾಽಽ ಕುಪ್ಪಗಲ್ಲು ವೀರೇಶಪ್ಪ, ಎಸ್. ಲೋಕೇಶ್, ಜಯರಾಮಚಂದ್ರರೆಡ್ಡಿ ಹಾಗೂ ಆಶ್ರಮ ಭಕ್ತಾಧಿಗಳು ಭಾಗವಹಿಸಿದ್ದರು. ಸದರಿ ಕಾರ್ಯಕ್ರಮದಲ್ಲಿ ಸೂರ್ಯ ಕಲಾಟ್ರಸ್ಟ್ನ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಶ್ರೀ ಶೀಲಬ್ರಹ್ಮಯ್ಯನವರು ಸಭೆಯಲ್ಲಿ ಸ್ವಾಗತವನ್ನು ಕೋರಿದರು., ಡಾ. ಎಂ.ಟಿ.ಮಲ್ಲೇಶ್, ಖಜಾಂಜಿಗಳು ವಂದನಾರೆ್ಣಯನ್ನು ಸಲ್ಲಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಕೆ. ದೊಡ್ಡಬಸಪ್ಪ ರವರು ನಡೆಸಿಕೊಟ್ಟರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 