ಲೋಕದರ್ಶನ ವರದಿ
ವಿಜಯಪುರ 26: ನಗರದ ಲಿಂಗಾಯತ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಡಾ. ವ್ಹಿ.ವ್ಹಿ. ಮಳಗಿಯವರ ಸನ್ಮಾನ ಸಮಾರಂಭ ಮತ್ತು ವಿಶ್ವಜ್ಞಾನ ದೀವಿಗೆ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭವನ್ನು ಡಾ.ವ್ಹಿ.ವೀ. ಮಳಗಿ ಅಭಿನಂದನಾ ಸಮಿತಿ ವಿಜಯಪುರ ಇವರ ಆಶ್ರಯದಲ್ಲಿ ರವಿವಾರ ರಂದು ಉ್ಪಚಿಸಮಾರಂಭ ಜರುಗಿತು. ಸಮಾರಂಭದ ಸಾನಿಧ್ಯ ವಹಿಸಿದ ಇಲಕಲ್ ವಿಜಯಮಹಾಂತೇಶ ಸಂಸ್ಥಾನ ಮಠದ ಪೂಜ್ಯ ಗುರುಮಹಾಂತ ಸ್ವಾಮಿಜಿ ಮಾತನಾಡಿ, ಭವಿಷ್ಯದಲ್ಲಿ ಉತ್ತಮ ಪ್ರಜೆಗಳನ್ನು ನಿಮರ್ಾಣ ಮಾಡುವ ಜವಾಬ್ದಾರಿ ಶಿಕ್ಷಕರದು. ಜ್ಞಾನದಾಹಿಗಳಾದ ವಿದ್ಯಾಥರ್ಿಗಳಿಗೆ ಜ್ಞಾನಾಮೃತವನ್ನು ಉಣಬಡಿಸುವ ಕಾರ್ಯ ಮಾಡುವವರು ಬೋಧಕರು. ಮಕ್ಕಳಿಗೆಲ್ಲ ಶಿಕ್ಷಕರೆ ಆದರ್ಶವಾಗಿರುತ್ತಾರೆ. ಡಾ. ಮಳಗಿಯವರು ಬೆಳಗುತ್ತಿರುವ ಸೂರ್ಯನಿದ್ದಂತೆ. ಅವರ 38 ವರ್ಷಗಳ ಶೈಕ್ಷಣಿಕ ಸೇವೆ ಅವಿಸ್ಮರಣಿಯ. ಅಸಂಖ್ಯಾತ ಶಿಕ್ಷಕರನ್ನು ಈ ನಾಡಿಗೆ ನೀಡಿದ ಮಹನಿಯರು. ಕನರ್ಾಟಕದ ಪ್ರತಿಯೊಂದು ಜಿಲ್ಲೆಯಲ್ಲೂ ಅವರ ವಿದ್ಯಾಥರ್ಿ ಬಳಗವಿದೆ. ಶಿಕ್ಷಕನ ಸೇವೆ ಪರಮ ಪವಿತ್ರವಾದದ್ದು. ಅಂತಹ ಪವಿತ್ರ ಸೇವೆಯನ್ನು ಘನತೆಯಿಂದ ಪೂರೈಸಿರುವ ಡಾ.ಮಳಗಿಯವರ ಸೇವೆ ಅನುಪಮವಾದದು ಎಂದರು.ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಸಬಿಹಾ ಭೂಮಿಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಡಾ. ಮಳಗಿಯವರು ಒಬ್ಬ ವ್ಯಕ್ತಿಯಲ್ಲ ಒಂದು ಶಕ್ತಿಯಾಗಿ ಶಿಕ್ಷಣ ಕ್ಷೇತ್ರದಲ್ಲಿ ಬೆಳೆದ ವ್ಯಕ್ತಿತ್ವ ಅವರದು. ಹಿರಿಯ ವಿದ್ಯಾಥರ್ಿ ಬಳಗದಿಂದ ಅವರಿಗೆ ಅಭಿನಂದನಾ ಸಮಾರಂಭ ನಡೆಯುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ. 11 ವರ್ಷಗಳವರೆಗೆ ಅನುಭವಿಗಳಾದ ಡಾ.ವ್ಹಿ.ವೀ. ಮಳಗಿಯವರ ಸೇವೆ ಅಮೂಲ್ಯವಾದದ್ದು. ಉತ್ತಮ ಬೋಧಕರಾಗಿ ವಿದ್ಯಾಥರ್ಿಗಳ ಮನಸ್ಸಿನಲ್ಲಿ ಉಳಿದುಕೊಂಡಿದ್ದಾರೆ. ಅವರ ಬೋಧನೆಯ ಪ್ರಭಾವ ವಿದ್ಯಾಥರ್ಿಗಳಿಗೆ ಪ್ರೇರಣೆ ಮತ್ತು ಸ್ಫೂತರ್ಿಯಾಗಿದೆ ಎಂದರು. ಬಸವೇಶ್ವರ ಶಿಕ್ಷಣ ಸಂಸ್ಥೆ ಬಾಗಲಕೋಟ ಆಡಳಿತಾಧಿಕಾರಿಗಳಾದ ಪ್ರೊ. ಎನ್.ಜಿ.ಕರೂರ ಮಾತನಾಡಿ, ನಾನು ಜೆ.ಎಸ್.ಎಸ್. ಶಿಕ್ಷಣ ಮಹಾವಿದ್ಯಾಲಯ ವಿಜಯಪುರದಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿರುವಾಗ ನಮ್ಮೊಂದಿಗೆ ಡಾ|| ವ್ಹಿ.ವೀ. ಮಳಗಿ ಪ್ರಾಧ್ಯಾಪಕರಾಗಿ ಶಿಕ್ಷಣ ಸಂಸ್ಥೆಯಲ್ಲಿ ಗುಣಮಟ್ಟದ ಮತ್ತು ಪರಿಣಾಮಕಾರಿ ಬೋಧನೆಯ ಮೂಲಕ ಅನೇಕ ವಿಶ್ವವಿದ್ಯಾಲಯಗಳಲ್ಲಿ ಹೆಸರು ಪಡೆದಿದ್ದರು. ರಾಷ್ಟ್ರ ಅಂತರಾಷ್ಟ್ರಗಳಲ್ಲಿ ಲೇಖನಗಳನ್ನು ಮಂಡಿಸಿ ಶಿಕ್ಷಣ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಕೀತರ್ಿ ಡಾ.ಮಳಗಿಯವರಿಗೆ ಸಲ್ಲುತ್ತದೆ ಎಂದರು. ನಾಗಠಾಣ ಮತಕ್ಷೇತ್ರದ ಶಾಸಕ ಡಾ. ದೇವಾನಂದ ಚವ್ಹಾಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಸನ್ಮಾನಿಸಿಕೊಂಡ ಡಾ. ವ್ಹಿ.ವೀ.ಮಳಗಿ ಮಾತನಾಡಿದರು. ವೇದಿಕೆಯ ಮೇಲೆ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ, ಮಹಾದೇವಿ ಮಳಗಿ, ಶ್ರೀಶೈಲಪ್ಪ ಮಳಗಿ, ಹಾಸಿಂಪೀರ ವಾಲಿಕಾರ, ವಿ.ಸಿ. ನಾಗಠಾಣ, ಡಾ. ವಿಷ್ಣು ಶಿಂದೆ ವೇದಿಕೆಯ ಮೇಲಿದ್ದರು.
ಕಾರ್ಯಕ್ರಮದಲ್ಲಿ ಪ್ರೊ. ಮಹಾದೇವ ರೆಬಿನಾಳ, ಡಾ. ವಿ.ಡಿ. ಐಹೊಳ್ಳಿ, ಡಾ. ಅನೀಲ ಬಮ್ಮಗೊಂಡ, ಡಾ.ಎಮ್.ಎಸ್. ಹಿರೇಮಠ, ಡಾ. ಬಿ.ವಾಯ್. ಕಾಸನಿಸ್, ಡಾ.ಎಮ್.ಬಿ. ಕೋರಿ, ಡಾ.ಜಿ.ಆರ್. ಅಂಗಡಿ, ಡಾ. ಬಿ.ಎಲ್. ಲಕ್ಕಣ್ಣವರ, ಡಾ. ಯು.ಕೆ. ಕುಲಕಣರ್ಿ, ಡಾ. ಎ.ಬಿ. ಸುರಪುರ, ಡಾ.ಮಹಾಂತೇಶ ಪಟ್ಟಣಶೆಟ್ಟಿ, ಡಾ. ಎಸ್.ಎ. ಪೂಜಾರ, ಡಾ. ಬಿ.ಬಿ. ಪೊಲೀಸ್ಪಾಟೀಲ, ಡಾ. ಸುನಂದಮ್ಮಾ, ಡಾ.ಓಂಕಾರ ಕಾಕಡೆ, ಡಾ. ಎಸ್.ಎ. ಖಾಜಿ, ಡಾ. ಚಂದನ್ನವರ, ಡಾ.ಪ್ರಕಾಶ ಬಡಿಗೇರ, ಡಾ. ಪ್ರಕಾಶ ಚನ್ನಕ್ಕನವರ, ಮಾಧವ ಗುಡಿ, ಮಾಜಿ ಶಾಸಕರಾದ ಆರ್.ಆರ್. ಕಲ್ಲೂರ, ಡಾ. ಎಚ್.ಎಮ್. ಕಡಕೋಳ, ಎ.ಬಿ. ಬೂದಿಹಾಳ, ಡಾ. ಎಮ್.ಎಸ್. ಮದಭಾವಿ, ಡಾ|| ಮಲ್ಲಿಕಾಜರ್ುನ ಮೇತ್ರಿ ಮುಂತಾದವರು ಉಪಸ್ಥಿತರಿದ್ದರು.****