ಲೋಕದರ್ಶನ ವರದಿ
ಹೂವಿನಹಡಗಲಿ 09: ವಾಹನ ಚಾಲಕರು ಮತ್ತು ದ್ವಿಚಕ್ರ ವಾಹನ ಸವಾರರು ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಿಸುವುದರ ಮೂಲಕ ಸಂಭವಿಸಬಹುದಾದ ಅಪಘಾತಗಳನ್ನು ನಿಯಂತ್ರಿಸಬಹುದು ಎಂದು ಹೊಸಪೇಟೆಯ ಪ್ರಾದೇಶಿಕ ಸಾರಿಗೆ ಕಛೇರಿಯ ಸೂಪರಿಟೆಂಡೆಂಟ್ ಜಿ.ಆದಿವೀರೇಶ್ವರ ಹೇಳಿದರು.
ಪಟ್ಟಣದ ಜಿಬಿಆರ್ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ 30ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ "ರಸ್ತೆ ಸುರಕ್ಷತೆ ಜೀವದ ರಕ್ಷೆ ಎಂಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯುವ ಸವಾರರು ಮತ್ತು ಚಾಲಕರು ವೇಗಕ್ಕೆ ಕಡಿವಾಣ ಹಾಕಿಕೊಳ್ಳಬೇಕು. ವಾಹನ ಚಾಲಕರು ವಾಹನವನ್ನು ಚಲಿಸುವಾಗ ಏಕಾಗ್ರತೆಯ ದೃಷ್ಟಿಗಾಗಿ ಮೊಬೈಲ್ ಬಳಕೆಯನ್ನು ತ್ಯಜಿಸಬೇಕು ಎಂದು ಹೇಳಿದರು.
ಹೊಸಪೇಟೆಯ ಪ್ರಾದೇಶಿಕ ಸಾರಿಗೆ ಕಛೇರಿಯ ಯು.ಕೆ.ಶ್ರೀಧರ, ಶಬ್ಬೀರ್, ಕಾಮರ್ೆಲ್ ಶಾಲೆಯ ಪ್ರಾಚಾರ್ಯ ಡೇಂಜಿಲ್ ವೇಗಸ್ಸ್, ಚಾಲಕ ತರಬೇತಿದಾರ ಶಿವಕುಮಾರಗೌಡ, ಕ್ರಿಸ್ತರಾಜ ಶಂಕರ್, ಜಿಬಿಆರ್ ಪಪೂ ಕಾಲೇಜಿನ ಪ್ರಾಚಾರ್ಯ ಹೆಚ್.ಟ.ಶ್ರೀನಿವಾಸ ನಾಯಕ ಹಾಗೂ ಸಿಬ್ಬಂದಿ ಇದ್ದರು. ಹೆಚ್.ಎಂ.ಗುರುಬಸವರಾಜಯ್ಯ ನಿರ್ವಹಿಸಿದರು. ವಿದಯಾಥರ್ಿಗಳಿಗೆ 30ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಕರಪತ್ರಗಳನ್ನು ಹಂಚಲಾಯಿತು.