ನಿರಾಶ್ರಿತರು ಯಾವುದೇ ಕಾರಣಕ್ಕೂ ಭಯಪಡುವ ಅಗತ್ಯವಿಲ್ಲ: ಸಚಿವೆ ಜೊಲ್ಲೆ

ಲೋಕದರ್ಶನ ವರದಿ

ರಾಯಬಾಗ: ಕೃಷ್ಣಾ ನದಿಯ ಮಹಾಪ್ರವಾಹದಿಂದ ಕಳೆದ 20 ದಿನಗಳಿಂದ ಮನೆಗಳು ಜಲಾವೃತವಾಗಿರುವದರಿಂದ ಸಾವಿರಾರು ಕುಟುಂಬಗಳು ಕಾಳಜಿ ಕೇಂದ್ರಗಳಲ್ಲಿ ಆಸರೆ ಪಡೆದುಕೊಂಡಿವೆ ಹೀಗಾಗಿ ನಿರಾಶ್ರಿತರು ಯಾವುದೇ ಕಾರಣದಿಂದ ಭಯಪಡುವ ಅಗತ್ಯವಿಲ್ಲ. ಏಕೆಂದರೆ ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಸರಕಾರವಿರುವದರಿಂದ ನೆರೆ ಸಂತ್ರಸéರಿಗೆ ಹೆಚ್ಚಿನ ಅನುದಾನ ಹಾಗೂ ಮೂಲಸೌಕರ್ಯಗಳು ಒದಗಿಸುವದಾಗಿ ನೂತನ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

 ತಾಲೂಕಿನ ಚಿಂಚಲಿ ಪಟ್ಟಣದ ಸರಕಾರಿ ಗಂಡು ಮಕ್ಕಳ ಶಾಲೆಯ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ  ರಾತ್ರೋ ರಾತ್ರಿಯಲ್ಲಿ ಮನೆಗಳಿಗೆ ನೀರು ನುಗ್ಗಿರುವದರಿಂದ ಮನೆಯಲ್ಲಿರುವ ಮೂಲ ದಾಖಲಾತಿಗಳಾದ ಆಧಾರ ಕಾರ್ಡ, ಪಡಿತರ ಚೀಟಿ, ಚುನಾವಣೆ ಗುರುತಿನ ಚೀಟಿ, ಮಕ್ಕಳ ಪುಸ್ತಕಗಳು. ಮಹತ್ವದ ವಸ್ತುಗಳು, ಕಾಳು ಕಡಿ, ಬಟ್ಟೆ, ಪ್ರಾತೆ ಇನ್ನಿತರ ಸಾಮಗ್ರಿಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಜನರು ನಿರಾಶ್ರಿತರಾಗಿದ್ದಾರೆ. ಸರಕಾರದಿಂದ ನಿರಾಶ್ರಿತರಿಗೆ ಅತೀ ಶೀಘ್ರವಾಗಿ ಸೌಲಭ್ಯಗಳು ದೊರಕುವ ಹಾಗೆ ಮಾಡುವದಾಗಿ ಹೇಳಿದ ಅವರು ಪರಿಹಾರ ಧನ ವಿತರಣೆ ಸಂದರ್ಭದಲ್ಲಿ ತಪ್ಪಿ ಉಳಿದ ಫಲಾನುಭವಿಗಳ ಹೆಸರುಗಳನ್ನು ಶಾಸಕರ ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೆ ಪುನಃ ಹೆಸರು ಸೇರಿಸುವುದಾಗಿಯೂ  ಕಾರಣ ನಿರಾಶ್ರಿತ ಫಲಾನುಭವಿಗಳು ಸ್ವಲ್ಪ ತಾಳ್ಮೆಯಿಂದ ಅಧಿಕಾರಿಗಳೊಂದಿಗೆ ಸಹಕರಿಸಬೇಕೆಂದೂ ಸಚಿವೆ ನಿರಾಶ್ರಿತ ಫಲಾನುಭವಿಗಳಲ್ಲಿ ವಿನಂತಿಸಿಕೊಂಡರು. 

     ಜಲಾವೃತಗೊಂಡ ಮನೆಗಳಿಗೆ ತಾತ್ಕಾಲಿಕ ಪರಿಹಾರಕ್ಕಾಗಿ ಹತ್ತು ಸಾವಿರ ನೀಡುವರು ಮತ್ತು  ನೀರಿನಲ್ಲಿ ಬಿದ್ದ ಮನೆಗಳು ಪ್ರತಿಶತಕವಾಗಿ ಅನುದಾನ ನೀಡಲಾಗುವುದ್ದು. ಮತ್ತು ನಿರಾಶ್ರಿತರ ಫಲಾನುಭವಿಗಳಿಗೆ 10 ಕೆಜಿ ಅಕ್ಕಿ. 5 ಲೀಟರ ಸೀಮೆಎಣ್ಣೆ. ಬೆಳ್ಳೆ ಹಾಗೂ ಇನ್ನಿತರ ಸಾಮಗ್ರಿಗಳು ನೂತನ ಸರಕಾರ ಘೋಷಣೆ ಮಾಡಿದೆ. ಕೃಷಿ ಇಲಾಖೆ ಮತ್ತು ತೋಟಗಾರಿಕ್ಕೆ ಇಲಾಖೆ ಕಂದಾಯ ಇಲಾಖೆ ಸೇರಿಕೊಂಡು ರೈತರ ಬೆಳೆ ಹಾನಿಯಾಗಿರುವವ ಬಗ್ಗೆ ಸೂಕ್ತವಾದ ತನಿಖೆ ನಡೆಸಿ ಯೋಗ್ಯವಾಗಿ ರೈತರಿಗೆ ಪರಿಹಾರ ಒದಗಿಸುವುದಕ್ಕೆ ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ಸಚಿವೆ ಭರವಸೆಯನ್ನು ನೀಡಿದರು.

     ಶಾಸಕ ಡಿ.ಎಮ್.ಐಹೊಳೆ ಪ್ರವಾಹದಿಂದ ತೊಂದರೆಗೆ ಸಿಲುಕಿದ ಫಲಾನುಭವಿಗಳ ಕಾಳಜಿ ಕೇಂದ್ರಗಳಿಗೆ ಸಚಿವರೊಂದಿಗೆ ಭೇಟಿ ನೀಡಿ ಮಾತನಾಡಿ ತಾವು ಪ್ರತಿದಿನ ಸಂತ್ರಸ್ತರನ್ನು ಭೆಟ್ಟಿಯಾಗಿ ಆಹಾರ ಮತ್ತು ತುತರ್ು ಪರಿಸ್ಥಿತಿಯಲ್ಲಿ ಬೇಕಾಗುವ ಜೀವನಾಂಶಕ ವಸ್ತುಗಳನ್ನು ಪೂರೈಸಿ ಅವರಿಗೆ ಧೈರ್ಯ ಹಾಗೂ ಭರವಸೆಗಳನ್ನು ತುಂಬಲಾಗಿದೆ. ಈಗ ಪ್ರವಾಹ ಇಳಿಮುಖವಾಗಿರುವದರಿಂದ ಸರಕಾರದಿಂದ ಸಿಗುವ ಸೌಕರ್ಯಗಳನ್ನು ಸಂತ್ರಸ್ತರ ಮನೆ ಬಾಗಿಲಿಗೆ ತಲುಪಿಸಲು ತಾವು ಪ್ರಾಮಾಣಿಕವಾಗಿ ಪ್ರಯತ್ನಿಸುವದಾಗಿ ಶಾಸಕ ಡಿ.ಎಮ್.ಐಹೊಳೆ ಹೇಳಿದರು. ಚಿಕ್ಕೋಡಿ ಉಪವಿಭಾಗಧಿಕಾರಿ ರವೀಂದ್ರ ಕರಲಿಂಗನ್ನವರ, ತಹಶೀಲ್ದಾರ ಡಿ.ಎಚ್. ಕೊಮ್ಮಾರ, ನೋಡಲ್ ಅಧಿಕಾರಿ ಎಚ್,ಎಲ್,ಪೂಜೇರಿ, ಮುಖ್ಯಾಧಿಕಾರಿ ಎಸ್.ಜಿ.ಪೂಜೇರಿ, ಗ್ರಾಮಲೆಕ್ಕಾಧಿಕಾರಿ ಜಗದೀಶ ಕಿತ್ತೂರ, ಜಿ. ಪಂ.ಸದಸ್ಯ ನಿಂಗಪ್ಪಾ ಪಕಾಂಡಿ, ಪ.ಪಂ.ಸದಸ್ಯ ಅಕುಂಶ ಜಾಧವ, ಮಹಾದೇವ ಪಡೋಳಕರ, ಸಂಜು ಮೈಶಾಳೆ, ಸಪನೀಲ ಶೇರಖಾನೆ, ಸುಮಿತ್ರಾ ಭಿರಡಿ. ಮಿಲಿಂದ ಸಂಗಣ್ಣವರ,  ಬಾಳು ನಾಂದಣಿ,  ಮಲ್ಲು ಕಮತೆ. ಸುಭಾಷ ಕೋರೆ, ಸಂಜು ಭಿರಡಿ, ಸುಭಾಷ ಪಡೋಳಕರ, ಉಪಸ್ಥಿತರಿದ್ದರು.

ಖಾಲಿ ಕೈಯಲ್ಲಿ ಸಂತ್ರಸ್ತರು ವಾಪಸ್:

ಚಿಂಚಲಿ ಪಟ್ಟಣದ ಗಂಜಿ ಕೇಂದ್ರಕ್ಕೆ ನೂತನ ಸಚಿವರು ಬರುತ್ತಾರೆ ಎಂದು ಮಾಹಿತಿ ತಿಳಿದ ತಕ್ಷಣ ಸ್ಥಳೀಯ ಮುಖಂಡರು ನಿರಾಶ್ರಿತ ಫಲಾನುಭವಿಗಳಿಗೆ ಮನೆಯಿಂದ ಕೈಚೀಲವನ್ನು ತಗೆದುಕೊಂಡು ಬರುವುದಕ್ಕೆ ಹೇಳಿದರು. ನಿರಾಶ್ರಿತರು ಆಸೆಯ ಮನೋಭಾವದಿಂದ ಧಾನ್ಯವನ್ನು ಪಡೆದುಕೊಳ್ಳುವುದಕ್ಕೆ ಬಂದ ನಿರಾಶ್ರಿತರು ಖಾಲಿ ಖಾಲಿ ಕೈಚೀಲಗಳನ್ನು ತಗೆದುಕೊಂಡು ಮನೆಗಳಿಗೆ ತೆರಳುವ ಸನ್ನಿವೇಶ ನಿರ್ಮಾಣವಾಗಿತ್ತು ಸಚಿವರು ಹೋದ ಬಳಿಕ ನಿರಾಶ್ರಿತರು ಅಧಿಕಾರಿಗಳನ್ನು ಧಾನ್ಯದ ಬಗ್ಗೆ ವಿಚಾರಿಸಿದಾಗ ಅಧಿಕಾರಿ ನಿರಾಶ್ರಿತರಿಗೆ ಧಾನ್ಯ ನೀಡುವ ಬಗ್ಗೆ ನಮಗೆ ಯಾವುದೇ ಮಾಹಿತಿ ಬಂದಿಲ್ಲ ಹೀಗಾಗಿ ಯಾವ ಮಾನದಂಡದ ಮೇಲೆ ಧಾನ್ಯಗಳು ನೀಡಬೇಕೆಂದ ಅಧಿಕಾರಿಗಳು ಮಾಹಿತಿ ಬಂದ ಬಳಿಕ ನೀಡಲಾಗುವುದು ಎಂದು ನಿರಾಶ್ರಿತರಿಗೆ ಸಮಾಧಾನ   ಹೇಳಿದರು. ಮೊದಲೆ ಮನೆಗಳು ಸಂಪೂರ್ಣವಾಗಿ ಜಲಾವೃತವಾಗಿ ಬಡ ನಿರಾಶ್ರಿತರು ಸಾಕಷ್ಟು ನೊಂದು ಹೋಗಿದ್ದರು ಅದರಲ್ಲಿ ಸಚಿವರು ಪಟ್ಟಣಕ್ಕೆ ಬಂದು ಧಾನ್ಯ ನೀಡುವುದಾಗಿ ಸುಳ್ಳು ಮಾಹಿತಿ ನೀಡಿ ನಿರಾಶ್ರಿತರನ್ನು ಖಾಲಿ ಕೈಯಲ್ಲಿ ತಮ್ಮ ಮಕ್ಕಳನ್ನು ಕರೆದುಕೊಂಡು ಮತ್ತೆ ನಿರಾಶರಾಗಿ ತಮ್ಮ ಮನೆಗಳಿಗೆ ತೆರಳುವಂಥ ಪರಿಸ್ಥಿತಿಯನ್ನು ನಿಮರ್ಾಣ ಮಾಡಿದರು.

ಸಚಿವರಿಗಾಗಿ ಕಾದು ಸುಸ್ತಾದ ಅಧಿಕಾರಿಗಳು:

ರಾಯಬಾಗ ಪಟ್ಟಣದ ಪಿಡಬ್ಲ್ಯುಡಿ ಪ್ರವಾಸಿ ಮಂದಿರದಲ್ಲಿ ತಾಲೂಕು ಅಧಿಕಾರಿಗಳ ಸಭೆ ನಡೆಸುವುದಾಗಿ ಮುಂಚಿತವಾಗಿ ತಿಳಿಸಿದ್ದರಿಂದ ಸಚಿವರು ಬರುವವರೆಗೆ ಕಾಯ್ದ ಅಧಿಕಾರಿಗಳು ಸಭೆ ರದ್ದುಗೊಂಡಿದ್ದರಿಂದ ಸಾಯಂಕಾಲ 4 ಗಂಟೆ ವರೆಗೆ ಕಾಯ್ದು ಸುಸ್ತಾಗಿ ತಮ್ಮ ಕಚೇರಿ ಕಡೆಗೆ ಹೆಜ್ಜೆ ಹಾಕಿದರು.