ಸಂಜೀವಿನಿ ಒಕ್ಕೂಟದ ಮಹಿಳಾ ಸದಸ್ಯರಿಗೆ ಪುನಶ್ಚೇತನ ತರಬೇತಿ

Refresher training for women members of Sanjeevini Union

ಸಂಜೀವಿನಿ ಒಕ್ಕೂಟದ ಮಹಿಳಾ ಸದಸ್ಯರಿಗೆ ಪುನಶ್ಚೇತನ ತರಬೇತಿ 

ಬೆಳಗಾವಿ 25: ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ ಬೆಂಗಳೂರು ಜಿಲ್ಲಾ ಪಂಚಾಯತ ಬೆಳಗಾವಿ ಮತ್ತು ಮಹಿಳಾ ಕಲ್ಯಾಣ ಸಂಸ್ಥೆ ಬೆಳಗಾವಿ  ಇವರುಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಪಂಚಾಯತ ಸಂಪನ್ಮೂಲ ಕೇಂದ್ರ ಮಚ್ಛೆ ಬೆಳಗಾವಿ  ಇಲ್ಲಿ ದಿ. 21ರಿಂದ 23ರವರೆಗೆ  3 ದಿನಗಳ ಪುನಶ್ಚೇತನ ತರಬೇತಿ ಕಾರ್ಯಕ್ರಮವನ್ನು ಸವದತ್ತಿ ತಾಲೂಕಿನ ಗ್ರಾಮ ಪಂಚಾಯಿತಿ ಘನ ತ್ಯಾಜ್ಯ ನಿರ್ವಹಣಾ ಘಟಕಗಳಲ್ಲಿ ಕೆಲಸ ಮಾಡುತ್ತಿರುವ ಸಂಜೀವಿನಿ ಒಕ್ಕೂಟದ ಮಹಿಳೆಯರಿಗೆ ಏರಿ​‍್ಡಸಲಾಯಿತು.    

ಮಗಿ  ಬೆಂಗಳೂರು ವತಿಯಿಂದ ಉಸ್ತುವಾರಿ ಅಧಿಕಾರಿಗಳಾಗಿ, ನಾಗರಾಜ್ ಅವರು ಹಾಜರಿದ್ದು ಅಗತ್ಯ ಸಲಹೆ ಸೂಚನೆ ಮತ್ತು ಮಾರ್ಗದರ್ಶನಗಳನ್ನು ನೀಡಿದರು. 3 ದಿನಗಳ ತರಬೇತಿ ಅವಧಿಯಲ್ಲಿ ತ್ಯಾಜ್ಯ ನಿರ್ವಹಣೆಯ ಅಂಶಗಳು, ತ್ಯಾಜ್ಯ ವಿಲೇವಾರಿ ಸವಾಲುಗಳು ಮತ್ತು ಪರಿಹಾರಗಳು ಸಂವಹನ ಕೌಶಲ್ಯ ಮತ್ತು ಆಯ್‌.ಇ.ಸಿ. ತಮತ್ರಗಳೂ ಜಿ.ಪಿ.ಎಲ್‌.ಎಲ್‌. ಮತ್ತು ಘನ ತ್ಯಾಜ್ಯ ನಿರ್ವಹಣೆಯ ಸವಾಲುಗಳು ಮತ್ತು ಪರಿಹಾರಗಳು ಸಂವಹನ ಕೌಶಲ್ಯ ಮತ್ತು ಆಯ್‌.ಇ.ಸಿ. ತಂತ್ರಗಳು ಜೊತೆ ಪಿ.ಎಲ್‌.ಎಫ್‌. ಮತ್ತು ಘನ ತ್ಯಾಜ್ಯ ನಿರ್ವಹಣೆ ಸ್ವಚ್ಛತೆಗಾರರ ಸಾಮಾಜಿಕ ಭದ್ರತೆ ಮತ್ತು ವಯಕ್ತಿಕ ಸುರಕ್ಷತೆ, ನಾಯಕತ್ವ ಮತು ತಂಡದ ನಿರ್ವಹಣೆ, ಘನ ತ್ಯಾಜ್ಯ ಸಂಗ್ರಹಣೆ, ಮಾರ್ಗನಕ್ಷೆ ಆದಾಯೋತ್ಪನ್ನ ಚುವಟಿಕೆಗಳು, ವ್ಯಾಪಾರ ಯೋಜನೆ ಡಿಜಿಟಲ್ ಚಟುವಟಿಕೆಗಳು ಇತ್ಯಾದಿ ಕುರಿತು ವಿಷಯವಾರು ತರಬೇತಿ ನೀಡಲಾಯಿತು.  

ಸಂಪನ್ಮೂಲ ವ್ಯಕ್ತಿಗಳಾಗಿ ಸುರೇಖಾ.ಡಿ.ಪಾಟೀಲ ಮತ್ತು ಎಂ.ಎಂ ಗಡಗಲಿ ಅವರುಗಳು ತರಬೇತಿಯನ್ನು ನೀಡಿದರು.