ರೆಡ್ಡಿ ಅವರಿಗೆ ಏನು ಮಾತನಾಡುತ್ತಿದ್ದೇನೆ ಎಂಬ ಪರಿವೇ ಇಲ್ಲ : ಜ್ಯೋತಿ

Reddy has no idea what he is talking about : Jyoti

ರೆಡ್ಡಿ ಅವರಿಗೆ ಏನು ಮಾತನಾಡುತ್ತಿದ್ದೇನೆ ಎಂಬ ಪರಿವೇ ಇಲ್ಲ : ಜ್ಯೋತಿ 

ಕೊಪ್ಪಳ 03: ಗಂಗಾವತಿ ಶಾಸಕ ಜನಾರ್ಧನ ರೆಡ್ಡಿಯವರಿಗೆ ತಾವು ಏನು ಮಾತನಾಡುತ್ತಿದ್ದೇನೆ ಎಂಬ ಪರಿವೇ ಇಲ್ಲದೇ ಕೇವಲ ಕಾಂಟ್ರವರ್ಸಿ ಸ್ಟೇಟ್‌ಮೆಂಟ್‌ಗಳ ಮೂಲಕ ಸಮಯ ಕಳೆಯುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡರಾದ ಜ್ಯೋತಿ ಎಂ. ಗೊಂಡಬಾಳ ಕುಟುಕಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಚುನಾವಣೆ ಪೂರ್ವದಲ್ಲಿ ತಾವೊಬ್ಬ ಸಹಸ್ರ ಕೋಟಿಗಳ ಒಡೆಯ, ಸ್ವಂತ ದುಡ್ಡಿನಲ್ಲಿಯೇ ಅಂಜನಾದ್ರಿ, ಇಡೀ ಗಂಗಾವತಿಗೆ 500 ಕೋಟಿ ಹಾಕಿ ಅಭಿವೃದ್ಧಿ ಮಾಡುತ್ತೇನೆ ಎನ್ನುತ್ತಾ ಗೆದ್ದುಬಂದು ಈಗ ಬಳ್ಳಾರಿಗೆ ಪಾದ ಬೆಳೆಸಿದ್ದಾರೆ. ಕೊಟ್ಟ ಮಾತಿನಲ್ಲಿ ಒಂದನ್ನೂ ಈಡೇರಿಸದೇ ಸುಮ್ಮನೇ ಗಂಗಾವತಿ, ಕೊಪ್ಪಳಕ್ಕೆ ಬಂದಾಗೊಮ್ಮೆ ಮಾಧ್ಯಮಗಳಿಗೆ ಕಾಂಟ್ರವರ್ಸಿ ಹೇಳಿಕೆ ಕೊಟ್ಟು ತಾವು ಇಲ್ಲೇ ಇದಿವಿ ಅನ್ನೋ ರೀತಿ ಜನರಿಗೆ ಬೂದಿ ಉಗ್ಗುತ್ತಿರುವ ಬೂದಿ ಬಾಬಾ ಆಗಿದ್ದಾರೆ. ಗಂಗಾವತಿಯಲ್ಲಿ ಇದೇ ಕೊನೆ ಸಲ ಜನ ತಪ್ಪು ಮಾಡಿದ್ದು, ಮುಂದೆಂದೂ ಹೊರ ಜಿಲ್ಲೆಯ ಪುಣ್ಯಾತ್ಮರನ್ನು ಆಯ್ಕೆ ಮಾಡುವದಿಲ್ಲ. ಇನ್ನು ಗಣಿ ಕಳ್ಳತನ ಕೇಸಲ್ಲಿ ಹತ್ತು ವರ್ಷ ಒಳಗಿದ್ದು ಬಂದು, ನ್ಯಾಯಾದೀಶರನ್ನೇ ಬುಕ್ ಮಾಡಲು ಹೋಗಿ ಮಾನ ಕಳೆದುಕೊಂಡ ಮನುಷ್ಯ ಇಲ್ಲಿನ ಜನರಿಗೆ, ಕಾಂಗ್ರೆಸ್ ಮುಖಂಡರಿಗೆ ಬುದ್ಧಿ ಹೇಳಲು ಬರುತ್ತಿರುವದು ನಿಜಕ್ಕೂ ಹಾಸ್ಯಾಸ್ಪದ ಎಂದಿದ್ದಾರೆ. ಕನಕಗಿರಿ ಉತ್ಸವದಂತೆ ಆನೆಗೊಂದಿ ಉತ್ಸವವನ್ನೂ ಸರಕಾರ ಮಾಡಲಿದೆ, ಇಲ್ಲ ಎಂದು ಹೇಳಿದವರಾ​‍್ಯರು? ಅದನ್ನು ಸರಕಾರದ ಮಟ್ಟದಲ್ಲಿ ಕುಳಿತು ಸರಿಯಾದ ಸಮಯಕ್ಕೆ ಮಾಡಿಸುವದನ್ನು ಬಿಟ್ಟು ಬೇರೆ ಕ್ಷೇತ್ರದ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸುತ್ತೇನೆ ಎನ್ನುವದು ಶಾಸಕರಾದವರಿಗೆ ಶೋಭೆ ತರುವುದಿಲ್ಲ. ಗಿಮಿಕ್ ಬಿಟ್ಟು ಗಂಗಾವತಿಯ ಜನರಿಗೆ ಸಿಕ್ಕು ಕೆಲಸ ಮಾಡಲಿ. ಗಂಗಾವತಿ ಅಭಿವೃದ್ಧಿಗೆ ಬಹುದೊಡ್ಡ ಕಂಟಕವೇ ಜನಾರ್ಧನರಡ್ಡಿ ಎನ್ನುವದು ಅಲ್ಲಿನ ಜನರಿಗೆ ಅರ್ಥವಾಗಿದೆ ಎಂದು ಹೇಳಿದ್ದಾರೆ.