ರಾಯ್ ಬರೇಲಿ 27 (ಯುಎನ್ಐ): ತಮಗೆ ಮತ ನೀಡಿ ಗೆಲ್ಲಿಸಿದ ಉತ್ತರ ಪ್ರದೇಶದ ರಾಯ್ ಬರೇಲಿಯ ಜನತೆಗೆ ಭಾವನಾತ್ಮಕದ ಪತ್ರದ ಮೂಲಕ ಧನ್ಯವಾದ ಸಮಪರ್ಿಸಿರುವ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ದೇಶಕ್ಕಾಗಿ ತಾವು ಎಲ್ಲವನ್ನೂ ತ್ಯಾಗ ಮಾಡಲು ಸಿದ್ಧ ಎಂದರು.
ಮತದಾರರಿಗೆ ಭಾನುವಾರ ಬರೆದ ಪತ್ರದಲ್ಲಿ ಅವರು, 'ದೇಶದ ಮೂಲ ಮೌಲ್ಯಗಳ ರಕ್ಷಣೆ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯರು ಪಾಲಿಸಿಕೊಂಡು ಬಂದ ಸಂಪ್ರದಾಯವನ್ನು ಕಾಪಾಡಲು ನಾನು ಗಳಿಸಿದ ಎಲ್ಲವನ್ನೂ ತ್ಯಾಗ ಮಾಡಲು ಸಿದ್ಧ ' ಎಂದಿದ್ದಾರೆ.
ಜೊತೆಗೆ, ರಾಯ್ ಬರೇಲಿಯಲ್ಲಿ ತಮ್ಮ ವಿರುದ್ಧ ಅಭ್ಯಥರ್ಿಯನ್ನು ಕಣಕ್ಕಿಳಿಸದ ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ ಹಾಗೂ ಸ್ವಾಭಿಮಾನ ದಳ ಪಕ್ಷಗಳಿಗೆ ಧನ್ಯವಾದ ಅಪರ್ಿಸಿದ್ದಾರೆ.
ತಮ್ಮ ಒಂದು ಪುಟದ ಪತ್ರದಲ್ಲಿ ಅವರು, 'ಮುಂದಿನ ದಿನಗಳು ಬಹಳ ಕಠಿಣವಾಗಿರಲಿದೆ ಎಂಬುದು ನನಗೆ ತಿಳಿದಿದೆ. ಆದರೆ, ನಿಮ್ಮ ಬೆಂಬಲ ಹಾಗೂ ನಂಬಿಕೆಯಿಂದ ಕಾಂಗ್ರೆಸ್ ಪ್ರತಿ ಸವಾಲನ್ನೂ ಎದುರಿಸಲಿದೆ ಎಂಬ ವಿಶ್ವಾಸವಿದೆ' ಎಂದಿದ್ದಾರೆ.
ರಾಯ್ ಬರೇಲಿಯ ಜನರನ್ನು ತಮ್ಮ ವಿಸ್ತಾರಿತ ಕುಟುಂಬ ಎಂದಿರುವ ಸೋನಿಯಾ, 'ನೀವು ನಮ್ಮ ಕುಟುಂಬದಂತೆ. ನಿಮ್ಮಿಂದ ನಾನು ಶಕ್ತಿ ಪಡೆಯುತ್ತೇನೆ. ಹಾಗೂ, ಅದೇ ನನ್ನ ನಿಜವಾದ ಆಸ್ತಿ' ಎಂದಿದ್ದಾರೆ.
ಉತ್ತರಪ್ರದೇಶದಲ್ಲಿ 89 ಕ್ಷೇತ್ರಗಳ ಪೈಕಿ ರಾಯ್ ಬರೇಲಿ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಗೆಲುವು ಸಾಧಿಸಿದೆ. ಈ ಕ್ಷೇತ್ರದಿಂದ ಸ್ಪಧರ್ಿಸಿದ್ದ ಬಿಜೆಪಿಯ ದಿನೇಶ್ ಪ್ರತಾಪ್ ಸಿಂಗ್ ಅವರನ್ನು ಸೋನಿಯಾ, 1.67 ಲಕ್ಷಗಳಿಂದ ಪರಾಭವಗೊಳಿಸಿದ್ದರು.
ಇದಕ್ಕೆ ಹೊಂದಿಕೊಂಡಂತಿರುವ ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ಅವರ ಪುತ್ರ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಬಿಜೆಪಿಯ ಸ್ಮೃತಿ ಇರಾನಿ ಎದುರು 55 ಸಾವಿರ ಮತಗಳಿಂದ ಸೋಲು ಅನುಭವಿಸಿದ್ದರು.