ನೂತನ ಬಿಇಓ ರವಿ ಬಳಿಗಾರ ಅಧಿಕಾರ ಸ್ವೀಕಾರ

ಲೋಕದರ್ಶನ ವರದಿ

ಬೆಳಗಾವಿ 19: ಕನರ್ಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕಾ ಘಟಕದ ವತಿಯಿಂದ ಕಿತ್ತೂರು ತಾಲೂಕಿನ ನೂತನ ಬಿಇಓ ರವಿ ಬಳಿಗಾರ ಅವರು ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಶೈಕ್ಷಣಿಕವಾಗಿ ಕಿತ್ತೂರು ತಾಲೂಕು ಅಭಿವೃದ್ಧಿ ಪಡಿಸುವುದು ನಮ್ಮ ಮುಂದಿರುವ ಬಹು ಪ್ರಮುಖವಾದ ಅಂಶವಾಗಿದೆ. ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸಲು ಅಹವಾಲುಗಳನ್ನು ಶಿಕ್ಷಕರು ತಮ್ಮ ಶಾಲೆಯಲ್ಲಿ ಕುಳಿತುಕೊಂಡು ಮೊಬೈಲ್ ಆ್ಯಪ್ ಮೂಲಕ ಮಾಹಿತಿ ಸಲ್ಲಿಸಿದರೆ ಸಾಕು ತಕ್ಷಣ ಅದಕ್ಕೆ ಪರಿಹಾರ ಕೊಡಲು ಈ ಯೋಜನೆಯನ್ನು ಅಳವಡಿಸಿಕೊಂಡಿದ್ದು ತ್ವರಿತ ಗತಿಯಲ್ಲಿ ಕಾರ್ಯಕ್ಕೆ ಚಾಲನೆ ನೀಡಿ ತಮ್ಮ ಸಮಸ್ಯೆಗಳಿಗೆ ಉತ್ತರಿಸುವುದಾಗಿ ಭರವಸೆ ನೀಡಿದರು. ಈ ಕಾರಣಕ್ಕೆ ಯಾರು ಶಾಲೆಯನ್ನು ಬಿಟ್ಟು ಕಚೇರಿಗೆ ಅಲೆಯಬೇಕಿಲ್ಲ ಎಂದರು. ಇದೇ ಸಂದರ್ಭದಲ್ಲಿ ಬೆಳಗಾವಿ ಸಿಟಿಇಗೆ ವಗರ್ಾವಣೆಗೊಂಡಿರುವ ವಿಜಯಾ ಬೆನಕಟ್ಟಿಯವರನ್ನು ವಿವಿಧ ಸಂಘಟನೆಯ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು. ಶಿಕ್ಷಕಕರ ಕಲ್ಯಾಣ ನಿಧಿಯಿಂದ ಸಹಪಟ್ಯ ಚಟುವಟಿಕೆಗಳ ಸ್ಪಧರ್ೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಧಾರವಾಡ ಜಿಲ್ಲಾ ವಯಸ್ಕರ ಶಿಕ್ಷಣ ಅಧಿಕಾರಿ ಬಿ.ಎಮ್. ನಲವತವಾಡ, ಸಿಟಿಇ ಹಿರಿಯ ಉಪನ್ಯಾಸಕ ಎ.ಬಿ. ಅಡಕಿ ಮಾತನಾಡಿದರು. ಸಂಘಟನೆಯ ಪರವಾಗಿ ಡಾ. ಸೋಮಶೇಖರ್ ಹಲಸಗಿ ಎಮ್.ಎಫ್ ಜಕಾತಿ, ಎಮ್ ಎಸ್ ಕಲ್ಮಠ, ಸಿಎಮ್ ಪಾಗಾರ ಮುಂತಾದವರು ಮಾತನಾಡಿದರು. ಸುನಂದಾ ಪಾಟೀಲ ಪಾಥರ್ಿಸಿದರು. ಬಿಆರ್ಸಿ ಸಮನ್ವಯ ಅಧಿಕಾರಿ ಶಿವಶಂಕರ ಹಾದಿಮನಿ ಸ್ವಾಗತಿಸಿದರು. ಐಇಆರ್ಟಿ ಎಚ್ ಪಾಟೀಲ ನಿರೂಪಿಸಿದರು. ಕೊನೆಯಲ್ಲಿ ಕಾಜಗಾರ ವಂದಿಸಿದರು.