ರವಿ, ಕವಿ ಕಾಣದ್ದನ್ನ ಕಾಣುವವನೇ ವಿಮರ್ಶಕ: ಪ್ರೊ. ಜಯರಾಜ

Ravi, a critic is someone who sees what a poet doesn't see: Prof. Jayaraja

ರವಿ, ಕವಿ ಕಾಣದ್ದನ್ನ ಕಾಣುವವನೇ ವಿಮರ್ಶಕ: ಪ್ರೊ. ಜಯರಾಜ 

ವಿಜಯಪುರ 9: ಸಾಹಿತ್ಯ, ಸೃಜನಾತ್ಮಕತೆ ಮತ್ತು ವಿಮರ್ಶೆ ಒಂದಕ್ಕೊಂದು ಪೂರಕ ಮತ್ತು ಪ್ರೇರಕ. ಯಾವುದೇ ಸಾಹಿತ್ಯದ ಪ್ರಕಾರವು, ವಿಮರ್ಶೆಗೆ ಒಳಪಡಬೇಕು. ಕವಿಯ ಹಿನ್ನೆಲೆ ಮತ್ತು ಸಾಹಿತ್ಯದ ವಸ್ತು ನಿಷ್ಠತೆಯ ಅಂಶಗಳು, ಸಾಹಿತಿಯನ್ನು ಮೇಲೆತ್ತಿರಕ್ಕೆ ಒಯ್ಯಲು ಸಾಧ್ಯ ರವಿ, ಕವಿ ಕಾಣದ್ದನ್ನು ಕಾಣ್ಣುತ್ತಾನೆ ಎಂದು ಬಿ.ಎಲ್‌.ಡಿ.ಇ. ಸಂಸ್ಥೆಯ ಡೀಮ್ಡ್‌್ಡ ವಿಶ್ವವಿದ್ಯಾಲಯದ ಸಮಕುಲಪತಿ ಪ್ರೊ. ವೈ.ಎಂ.ಜಯರಾಜ ಹೇಳಿದರು.  

ಡಾ. ಆಮೂರ ಅವರ ಶತಮಾನೋತ್ಸವ ಸಮಿತಿ ಧಾರವಾಡ, ಜಿ.ಬಿ.ಜೋಶಿ ಮೆಮೋರಿಯಲ್ ಟ್ರಸ್ಟ ಧಾರವಾಡ ಮತ್ತು ಡಾ. ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡ ಖ್ಯಾತ ವಿಮರ್ಶಕ ಡಾ. ಜಿ.ಎಸ್‌.ಆಮೂರ ಜನ್ಮಶತಮಾನೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು ಡಾ. ಆಮೂರ ಅವರು ಕನ್ನಡ, ಸಂಸ್ಕೃತ ಮತ್ತು ಇಂಗ್ಲಿಷದಲ್ಲಿ ಪ್ರಭುತ್ವ ಸಾಧಿಸಿದರು. ಬೇಂದ್ರೆಯವರ ಸಾಹಿತ್ಯವನ್ನು ವಿಮರ್ಶೆಗೆ ಒಳಪಡಿಸಿ ವಿಮರ್ಶೆ ಕ್ಷೇತ್ರದ ಕ್ಷಿತಿಜವನ್ನು ವಿಸ್ತಾರಗೊಳಿಸಿದ ಶ್ರೇಯಸ್ಸು ಆಮೂರ ಅವರಿಗೆ ಸಲ್ಲುತ್ತದೆ ಎಂದರು.  

ಮುಖ್ಯ ಅತಿಥಿಗಳಾದ ಬೆಂಗಳೂರಿನ ಖ್ಯಾತ ವಿಮರ್ಶಕ ಪ್ರೊ.  ಎಸ್‌.ಆರ್‌.ಜಯಶಂಕರ ಮಾತನಾಡಿ ಡಾ ಆಮೂರ ಅವರು ಆಳವಾದ ಅಧ್ಯಯನಶೀಲರು, ಹೃದಯ ಶ್ರೀಮಂತಿಕೆಯುಳ್ಳವರು, ವಿಚಾರ ಮತ್ತು ಚಿಂತನಶೀಲರು, 20-21ನೇ ಶತಮಾನದ ಹೊಸಗನ್ನಡ ಸಾಹಿತ್ಯವನ್ನು ಅಮೂಲಾಗ್ರವಾಗಿ ಅಭ್ಯಸಿಸಿದವರು. ಇವರ ನವೀರಾದ ವಿಮರ್ಶೆಯು ಸಾಹಿತಿಗಳನ್ನು ಮತ್ತಷ್ಟು ಚೆನ್ನಾಗಿ ಬರೆಯುವಂತೆ ಮಾಡಿರುವ ಅವರ ಬದುಕು ಮತ್ತು ಬರಹ ನಿಜವಾಗಲೂ ಆದರ್ಶ ಪ್ರಾಯವಾಗಿದೆ ಎಂದರು.  

ಉಪನ್ಯಾಸಕರಾಗಿ ಪ್ರೊ. ಜಿ.ಆರ್‌.ಕುಲಕರ್ಣಿ, ಬಿ.ವಿ.ಕುಲಕರ್ಣಿ, ಅರವಿಂದ ಕಂಚ್ಯಾಣಿಯವರು ಡಾ. ಆಮೂರ ಅವರ ಒಡನಾಟವನ್ನು ಮತ್ತು ಸಾಹಿತ್ಯದ ಅನುಭವದ ವಿಚಾರಗಳನ್ನು ಹಂಚಿಕೊಂಡರು.  

ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಎನ್‌.ಜಿ.ಕರೂರ ಅಧ್ಯಕ್ಷತೆ ವಹಿಸಿದ್ದರು. ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಆರ್‌.ಕೆ.ಕುಲಕರ್ಣಿ ಸಮಾರೋಪ ಮಾತುಗಳನ್ನಾಡಿದರು.  

ಬಿ.ಆರ್‌.ಬನಸೋಡೆ ಪ್ರಾರ್ಥಿಸಿದರು. ಡಾ. ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರದ ನಿರ್ದೇಶಕ ಡಾ. ಕೃಷ್ಣ ಕೊಲ್ಹಾರಕುಲಕರ್ಣಿ ಸ್ವಾಗತಿಸಿದರು. ಡಾ. ಎಂ.ಎಸ್‌.ಮದಭಾವಿ ಪ್ರಸ್ತಾವನೆ ಮಾಡಿದರು. ಸುಭಾಸ ಕನ್ನೂರ ನಿರೂಪಿಸಿದರು. ಡಾ. ವಿ.ಡಿ.ಐಹೊಳ್ಳಿ ವಂದಿಸಿದರು.  

ಡಾ. ಆರ್‌.ವಿ.ಕೊಟ್ನಾಳ, ವಿ.ಸಿ.ನಾಗಠಾಣ, ಮ.ಗು.ಯಾದವಾಡ, ಜಂಬುನಾಥ ಕಂಚ್ಯಾಣಿ, ಶರಣಗೌಡ ಪಾಟೀಲ, ಡಾ. ವಿ.ಎಂ.ಬಾಗಾಯತ, ಎಸ್‌.ಬಿ.ದೊಡಮನಿ, ಡಾ. ಎಂ.ಎಸ್‌.ಚಾಂದಕವಟೆ, ಎಸ್‌.ಎನ್‌.ಶಿವಣಗಿ, ಸಂಗಮೇಶ ಬದಾಮಿ, ಡಾ. ಎಸ್‌.ಆಯ್‌.ಮೇತ್ರಿ, ಶಕುಂತಲಾ ದೊಡಮನಿ, ಶಾರದಾ ಕೊಪ್ಪಾ, ದಾಕ್ಷಾಯಣಿ ಹುಡೇದ, ದಾಕ್ಷಾಯಣಿ ಬಿರಾದಾರ ಪಿ.ಎಸ್‌.ಕನಮಡಿ. ಜಿ.ಬಿ.ಸಾಲಕ್ಕಿ, ಬಿ.ಎನ್‌.ಹಿರೇಮಠ, ಬಿ.ಎಂ.ಪಾಟೀಲ, ಮಹಾದೇವ ಹಾಲಳ್ಳಿ, ಜಗದೀಶ ಗಲಗಲಿ, ಎಸ್‌.ಜಿ.ನಾಡಗೌಡರ, ಎಸ್‌.ಸಿ.ಸಂಗೊಂದಿಮಠ, ಎನ್‌.ಆರ್‌.ಕುಲಕಣೀರ್, ಖಾಡೆ, ಕಣಬೂರ, ಚೇತನಾ ಸಂಕೊಂಡ, ಅಂಬಾದಾಸ ಜೋಶಿ, ಎಚ್‌.ಎಸ್‌.ಕಸಬೇಗೌಡರು ಮುಂತಾದವರು ಉಪಸ್ಥಿತರಿದ್ದರು.