ಲೋಕದರ್ಶನ ವರದಿ
ಹೂವಿನಹಡಗಲಿ 14: ಕ್ಯಾನ್ಸ್ರ ರೋಗವನ್ನು ಎದುರಿಸಿದ ಮಾಜಿ ಉಪ ಮುಖ್ಯಮಂತ್ರಿ ದಿವಂಗತ ಎಂ.ಪಿ.ಪ್ರಕಾಶ್ ಅವರ ಪುತ್ರ ಅಕಾಲಿಕ ನಿಧನರಾದ ಎಂ.ಪಿ.ರವೀಂದ್ರ ಸಹ ತಂದೆ ತಕ್ಕ ಮಗ ಅವರ ಆದರ್ಶ ಮೌಲಗಳು, ಅಭಿವೃದ್ಧಿ ಕಾರ್ಯಗಳು ಇನ್ನು ಜೀವಂತವಾಗಿವೆ ಎಂದು ಮಾಜಿ ಶಾಸಕ ಎಸ್.ಎಸ್.ಪಾಟೀಲ ಹೇಳಿದರು.
ಪಟ್ಟಣದಲ್ಲಿ ಬುಧವಾರ ಅವರ ಸಮಾಧಿ ಬಳಿ ಆಯೋಜಿಸಿದ್ದ ಮಾಜಿ ಶಾಸಕ ಲಿಂ.ಎಂ.ಪಿ.ರವೀಂದ್ರ ಅವರ ಶಿವಗಣಾರಾಧನೆ ಮತ್ತು ಶ್ರದ್ದಾಂಜಲಿ ಕಾರ್ಯಕ್ರಮಲ್ಲಿ ಮಾತನಾಡಿದ ಅವರು ಅವರು ಹರಪನಹಳ್ಳಿಯಲ್ಲಿ 60ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮಂಜೂರಾತಿಯನ್ನು ಮಾಡಿಸಿದ್ದಾರೆ ಎಂದರು.
ಹರಪನಹಳ್ಳಿ ಸೇರ್ಪಡೆ ರೂವಾರಿ: ಜಿಲ್ಲಾ ಪುನರ್ ವಿಂಗಡಣೆ ಸಂದರ್ಭದಲ್ಲಿ ಬಳ್ಳಾರಿಯಿಂದ ಬೇರ್ಪಟ್ಟು ದಾವಣಗೆರೆ ಜಿಲ್ಲೆಗೆ ಸೇರ್ಪಡೆಯಾಗಿದ್ದ ಹರಪನಹಳ್ಳಿ ತಾಲೂಕನ್ನು ಪುನ: ಬಳ್ಳಾರಿಗೆ ಸೇರ್ಪಡೆಗೊಳಿಸಿ 371 (ಜೆ)ಸೌಲಭ್ಯಗಳನ್ನು ದೊರಕಿಸಿಕೊಡುವಲ್ಲಿ ರವೀಂದ್ರರ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಒತ್ತಾಯಿಸಿ ಯಶಸ್ವಿಯಾಗಿ ತಂದೆ ಬಯಕೆಯನ್ನು ಈಡೇರಿಸಿದ್ದಾರೆ ಎಸ್.ಎಸ್.ಪಾಟೀಲ ಹೇಳಿದರು.
ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರು ಮಾತನಾಡಿ ಹರಪನಹಳ್ಳಿ ಕ್ಷೇತ್ರದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ, 371(ಜೆ)ಸೌಲಭ್ಯವನ್ನು ಕಲ್ಪಿಸುವ ಮೂಲಕ ಅಲ್ಲಿನ ಅಭಿವೃದ್ದಿಗೆ ಶ್ರಮಿಸಿದ್ದಾರೆ. ಜತೆಗೆ ಸರಳ, ಸ್ನೇಹ, ಸಹೋದರರ ಭಾವನೆಗೆ ಹೆಚ್ಚಿನ ಆಧ್ಯತೆ ನೀಡಿದ್ದರು ಎಂದರು. ಬಿಡಿಸಿಸಿ ಬ್ಯಾಂಕ್ ನೂತನ ಅಧ್ಯಕ್ಷ ಟಿ.ಎಂ.ಚಂದ್ರಶೇಖರಪ್ಪ, ವೀ.ವಿ.ಸಂಘದ ಪ್ರಧಾನ ಕಾರ್ಯದಶರ್ಿ ಸಿ.ಕೊಟ್ರಪ್ಪ ಮಾತನಾಡಿದರು.
ಲಿಂಗನಾಯ್ಕನಹಳ್ಳಿ ಚನ್ನವೀರಸ್ವಾಮೀಜಿ ಮಾತನಾಡಿದರು. ಹೊಸಪೇಟೆ ಡಾ.ಸಂಗನಬಸವ ಸ್ವಾಮೀಜಿ. ಗವಿಮಠದ ಡಾ.ಹಿರಿಶಾಂತವೀರಸ್ವಾಮೀಜಿ, ಅಳವುಂಡಿ ಸಿದ್ದಲಿಂಗಸ್ವಾಮೀಜಿ, ಸಣ್ಣ ಹಾಲವೀರಪ್ಪಜ್ಜ ಸೇರಿದಂತೆ ಹರ-ಗುರು ಚರಮೂತರ್ಿಗಳು ಇದ್ದರು. ಸಭೆಯಲ್ಲಿ ರುದ್ರಾಂಬ ಎಂ.ಪಿ.ಪ್ರಕಾಶ್ , ಮಾಜಿ ಶಾಸಕ ಚಂದ್ರಶೇಖರಯ್ಯ, ವಕೀಲ ವಿರುಪಾಕ್ಷಯ್ಯ, ಪರಶುರಾಮಪ್ಪ, ಹರ್ಷವರ್ಧನ, ಚನ್ನಬಸವನಗೌಡ, ಸಾಲಿ ಸಿದ್ದಯ್ಯ ಇತರರಿದ್ದರು. ಆರಂಭದಲ್ಲಿ ಕಲಾವಿದ ಪ್ರಕಾಶ್ ಜೈನ್ ಸಂಗಡಿಗರು ಪ್ರಾಥರ್ಿಸಿದರು. ಶಾಂತಮೂತರ್ಿ ಬಿ.ಕುಲಕಣರ್ಿ ಸ್ವಾಗತಿಸಿದರು. ದ್ವಾರಕೇಶರೆಡ್ಡಿ ನಿರೂಪಿಸಿದರು.
ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ ,ಹೊಸಪೇಟೆ, ಬಳ್ಳಾರಿ, ಹೂವಿನಹಡಗಲಿ ಪಟ್ಟಣ ಸೇರಿದಂತೆ ನಾನಾ ಕಡೆಗಳಿಂದ ಅವರ ಅಭಿಮಾನಿ ಬಳಗದವರು ಹಾಗೂ ಮ.ಮ.ಪಾಟೀಲ ವಿದ್ಯಾಥರ್ಿಗಳು ಸಮಾಧಿಬಳಿ ಅವರ ಭಾವಚಿತ್ರಕ್ಕೆ ಪುಷ್ಟನಮನ ಸಲ್ಲಿಸಿದರು.