ನಾಲತವಾಡದ ವೀರೇಶ್ವರ ಶರಣರ ಜಯಂತ್ಯುತ್ಸವ ಕಾರ್ಯಕ್ರಮಸಂಭ್ರಮದಿಂದ ಜರುಗಿದ ರಥೋತ್ಸವ

Rathotsava was held in the celebration of Veereshwar Sharan Jayantyutsava of Nalatwada

ನಾಲತವಾಡದ ವೀರೇಶ್ವರ ಶರಣರ ಜಯಂತ್ಯುತ್ಸವ ಕಾರ್ಯಕ್ರಮಸಂಭ್ರಮದಿಂದ ಜರುಗಿದ ರಥೋತ್ಸವ 

ಗದಗ: ತಾಲೂಕಿನ ನರಸಾಪೂರ ಗ್ರಾಮದ ನಾಲತವಾಡ ವೀರೇಶ್ವರ ಶರಣರ ಮಠದಲ್ಲಿ ವೀರೇಶ್ವರ ಶರಣರ ಜಯಂತ್ಯುತ್ಸವ, ಚಂದ್ರಶೇಖರ ಶರಣರ ಪುಣ್ಯಸ್ಮರಣೋತ್ಸವದ ಅಂಗವಾಗಿ ಮಂಗಳವಾರ ಭಕ್ತರ ಸಮ್ಮುಖದಲ್ಲಿ ಸಂಭ್ರಮದ ರಥೋತ್ಸವ ಜರುಗಿತು. ಶ್ರೀಮಠದ ಶಿವಕುಮಾರ ಶರಣರು ನೇತೃತ್ವ ವಹಿಸಿದ್ದರು. ರಥೋತ್ಸವಕ್ಕೂ ಮುನ್ನ ಬೆಳಿಗ್ಗೆ ಷಟಸ್ಥಲ ಧ್ವಜಾರೋಹಣ, ವೀರೇಶ್ವರ ಶರಣರ ಹಾಗೂ ಚಂದ್ರಶೇಖರ ಶರಣರ ಮೂರ್ತಿಗಳಿಗೆ ಮಹಾರುದ್ರಾಭಿಷೇಕ ನಂತರ ಚಂದ್ರಶೇಖರ ಶರಣರ ಪುಣ್ಯಸ್ಮರಣೋತ್ಸವ ಕಾರ್ಯಕ್ರಮ ಜರುಗಿತು.