ಯೋಗದೊಂದಿಗೆ ರಥಸಪ್ತಮಿ ದಿನಾಚರಣೆ ಆಚರಣೆ

Rathasaptami Day Celebration with Yoga

ಯೋಗದೊಂದಿಗೆ ರಥಸಪ್ತಮಿ ದಿನಾಚರಣೆ ಆಚರಣೆ

ಕೊಟ್ಟೂರು 04 : ಮಂಗಳವಾರ ಬೆಳಿಗ್ಗೆ 5.30 ರಿಂದ 7.30 ರವರೆಗೆ ರಥಸಪ್ತಮಿ ದಿನದ  ಅಂಗವಾಗಿ ಪಟ್ಟಣದ ಎಲ್ಲಾ ಯೋಗ ಕೇಂದ್ರಗಳ ಯೋಗ ಸಾಧಕರೊಂದಿಗೆ ತಾಲ್ಲೂಕು ಕ್ರೀಡಾಂಗಣದಲ್ಲಿ ಶ್ರೀಗುರುದೇವ ಶಾಲೆಯ ಹಿಂಭಾಗದ ಅವರಣದಲ್ಲಿ ವಿಶೇಷ ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ನೂರಾರು ಯೋಗ ಪಟುಗಳೊಂದಿಗೆ ವಿಶೇಷ ವ್ಯವಸ್ಥೆಯೊಂದಿಗೆ ಆಯೋಜಿಸಲಾಗಿತ್ತು, ಪರವಾರದ ಎಲ್ಲಾ ಯೋಗ ಸಾಧಕರು ಶ್ವೇತ ವಸ್ತ್ರ ಉಡುಪುಗಳೊಂದಿಗೆ ಅಗಮಿಸಿ ಯೋಗ ಮಾಡಿದ್ದು ನೋಡುಗರ ಕಣ್ಮನ ಸೆಳೆಯಿತು. 

ಯೋಗ ಗುರುಗಳಾದ ಬಂಜಾರ ನಾಗರಾಜ, ಕೆ.ರಾಮಣ್ಣ ಸೇರಿದಂತೆ, ಯೋಗ ಪಟುಗಳಾದ ಲಾಲರಾಂ ಪಾಟೀಲ್, ಬಸವರಾಜ, ನರ್ಸ್‌ ನಾಗವೇಣಿ, ಅಟವಾಳ್ಗಿ ಸೇರಿದಂತೆ ಅನೇಕ ಯೋಗ ಪಟುಗಳು ಭಾಗವಹಿಸಿ ಸತತ 2 ತಾಸುಗಳ ಕಾಲ ಯೋಗ ಮಾಡಿ ಆನಂದ ಪಟ್ಟರು, ಲಾಲರಾಂ ಪಾಟೀಲ್ ಸತತ 108 ಬಾರಿ ಸೂರ್ಯ ನಮಸ್ಕಾರ ಮಾಡಿ ನೋಡುಗರಿಗೆ ಉತ್ಸಾಹ ತುಂಬಿ, ಇತರರು ಯೋಗ ಮಾಡಲು ಪ್ರೇರಣೆಯಾದರು.ಪತ್ರಿಕೆಯೊಂದಿಗೆ ಮಾತನಾಡಿದ , ಯೋಗ ಗುರುಗಳಾದ ಕೆ.ರಾಮಣ್ಣ, ಬಂಜಾರ ನಾಗರಾಜ, ಯೋಗದಿಂದ ಅನೇಕ ರೋಗಗಳು ನಿವಾರಣೆ ಯಾಗುತ್ತಿದ್ದು, ಭಾರತ ದೇಶವಲ್ಲದೇ ವಿದೇಶಿಗರು ಸಹ ನಮ್ಮ ಭಾರತ ಸಂಸ್ಕೃತಿ ಹಾಗೂ ಯೋಗವನ್ನು ಒಪ್ಪಿಕೊಂಡಿದ್ದು, ಅತ್ಯಂತ ಜನಪ್ರಿಯವಾಗಿ ಎಲ್ಲರ ಬದುಕಿಗೆ ಆರೋಗ್ಯ ತಂದಿದೆ. ಅಲ್ಲದೇ ಅನೇಕರ ಬಿ.ಪಿ. ಸಕ್ಕರೆ ಕಾಯಿಲೆಯಂಥ ರೋಗಗಳು ಹತ್ತೋಟಿಗೆ ಬಂದಿದ್ದು, ಯೋಗದಿಂದ ಸುಖ, ಶಾಂತಿ, ನೆಮ್ಮದಿಯಿಂದ ಬದುಕುತ್ತಿದ್ದಾರೆಯೆಂದರು.ಪ್ರತಿಯೊಬ್ಬರು ಯೋಗವನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದೇ ಅದಲ್ಲಿ ಎಲ್ಲಾ ರೋಗಗಳು ಮಾಯವಾಗುವುದರಲ್ಲಿ ಅನುಮಾನವೇ ಇಲ್ಲವೆಂದರು. ಅದ್ದರಿಂದ ಪ್ರತಿಯೊಬ್ಬರು ದಿನನಿತ್ಯ ಜಂಜಾಟದ ಬದುಕಿನಲ್ಲಿ ಬಿಡುವ ಮಾಡಿಕೊಂದು ಯೋಗವನ್ನು ಅಳವಡಿಸಿಕೊಂಡಿದ್ದೇ ಅದಲ್ಲಿ ನೆಮ್ಮದಿಯಿಂದ ಬದುಕಿ,  ಬಾಳು ಹಸನಾಗುವುದರಲ್ಲಿ ಸಂದೇಹವೇವಿಲ್ಲವೆಂದರು.