ತಾಲೂಕಾ ಆಡಳಿತದಿಂದ ರನ್ನ ರಥಯಾತ್ರೆಗೆ ತಹಶೀಲ್ದಾರ ಆವರಣದಲ್ಲಿ ಅದ್ಧೂರಿ ಸ್ವಾಗತ
ಬೀಳಗಿ : ತಾಲೂಕಾ ಆಡಳಿತದಿಂದ ರನ್ನ ರಥಯಾತ್ರೆಗೆ ತಹಶೀಲ್ದಾರ ಆವರಣದಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು. ತಹಶೀಲ್ದಾರ ವಿನೋದ್ ಹತ್ತಳ್ಳಿ ನೇತ್ರತ್ವದಲ್ಲಿ ರನ್ನ ರಥಯಾತ್ರೆಗೆ ಗೌರವದ ಪೂಜೆ ಪುಷ್ಪ ನಮನ ಸಲ್ಲಿಸಲಾಯಿತು. ಪಪಂ ಅಧ್ಯಕ್ಷ ಮುತ್ತು ಭೋರ್ಜಿ ತಾಪಂ ಇಒ ಅಭಯಕುಮಾರ್ ಮೊರಬ ಪಪಂ ಮುಖ್ಯಧಿಕಾರಿ ದೇವೇಂದ್ರ ಧನಪಾಲ್ ಬಿಇಒ ಆರ್.ಎಸ್ ಆದಾಪೂರ ಪಿಎಸೈ ಪ್ರವೀಣ ಬೀಳಗಿ ಜಿಪಂ ಎಇಇ ಗೋವಿಂದ ಅರಳಿಕಟ್ಟಿ, ಪ.ಪಂ ಸದಸ್ಯ ಸಿದ್ದು ಮಾದರ ಅಜ್ಜು ಬಾಯ್‌ಸರಕಾರ ಸಂತೋಷ್ ನಿಂಬಾಳ್ಕರ್ ಸಿದ್ದಲಿಂಗಪ್ಪ ನಾಗರಾಳ ವಿಶ್ವನಾಥ ಹಿರೇಮಠ ಎ.ಆರ್.ಬೆಳ್ಳಿಕಟ್ಟಿ ಗುರುನಾಥ್ ತಳವಾರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಪಟ್ಟಣದ ಪ್ರಮುಖರು ಇದ್ದರು.