ಡಿ.28 ಹಾಗೂ 29 ರಂದು ರಂಗಾಯಣ ನಾಟಕೋತ್ಸವ

Rangayana Drama Festival on December 28 and 29

ಡಿ.28 ಹಾಗೂ 29 ರಂದು ರಂಗಾಯಣ ನಾಟಕೋತ್ಸವ 

ಧಾರವಾಡ 26: ರಂಗಾಯಣ ಧಾರವಾಡವು ರಂಗ ತಂಡಗಳ ಸಹಯೋಗದಲ್ಲಿ ನಾಟಕ ತರಬೇತಿ ಕಾರ್ಯಾಗಾರದಲ್ಲಿ ಸಿದ್ಧಗೊಂಡ ಹಾಗೂ ಸ್ಥಳೀಯ ತಂಡಗಳಿಂದ ಡಿ.28 ಹಾಗೂ 29 ರಂದು ಸಂಜೆ 6.00ಕ್ಕೆ ಪಂ.ಬಸವರಾಜರಾಜಗುರು ಬಯಲು ರಂಗಮಂದಿರದಲ್ಲಿ “ರಂಗಾಯಣ ನಾಟಕೋತ್ಸವ”ವನ್ನು ಹಮ್ಮಿಕೊಂಡಿದೆ. 

ಅಪರ ಜಿಲ್ಲಾಧಿಕಾರಿಗಳಾದ ಡಾ.ಸಿ.ಡಿ ಗೀತಾ ಅವರು ನಾಟಕೋತ್ಸವವನ್ನು ಉದ್ಘಾಟಿಸಲಿದ್ದಾರೆ. ರಂಗ ನಿರ್ದೇಶಕರಾದ ಹುಲುಗಪ್ಪ ಕಟ್ಟಿಮನಿ ಅವರು ಅತಿಥಿಗಳಾಗಿ ಆಗಮಿಸಲಿದ್ದಾರೆ. ರಂಗಾಯಣ ನಿರ್ದೇಶಕರಾದ ಡಾ.ರಾಜು ತಾಳಿಕೋಟಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.  

ಡಿ.28ರಂದು ಸಂಜೆ 6.30ಕ್ಕೆ “ಅಂಗುಲಿಮಾಲ” ದೊಡ್ಡಾಟ ಪ್ರಸಂಗವನ್ನು ಹುಬ್ಬಳ್ಳಿ ಜನಪದ ಕಲಾಬಳಗ ಟ್ರಸ್ಟ್‌(ರಿ) ಅವರು ಪ್ರಸ್ತುತಪಡಿಸಲಿದ್ದಾರೆ. ಡಿ.29ರಂದು ಸಂಜೆ 6.30ಕ್ಕೆ “ಬಾಹುಬಲಿ ವಿಜಯ”(ಪಂಪನ ಆದಿಪುರಾಣದಆಯ್ದಕಥಾ ಭಾಗ) ನಾಟಕವನ್ನು ಧಾರವಾಡ ಆಟ-ಮಾಟ ತಂಡಗಳು ಪ್ರಸ್ತುತಪಡಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ರಂಗಾಸಕ್ತರು, ಸಾಹಿತಿಗಳು ಆಗಮಿಸಬೇಕು ಎಂದು ರಂಗಾಯಣ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.