ಲೋಕದರ್ಶನ ವರದಿ
ವಿಜಯಪುರ 16: ನಗರದ ಕಂದಗಲ್ ಹಣಮಂತರಾಯ ರಂಗಮಂದಿರದ ಆವರಣದಲ್ಲಿ ರಂಗಚೇತನ ಸಂಸ್ಥೆ ವಿಜಯಪುರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದಲ್ಲಿ ರಂಗಚೇತನ ಸಂಸ್ಥೆಯ 25ನೇ ವರ್ಷದ ರಜತ ಮಹೋತ್ಸವದ ಉದ್ಘಾಟನಾ ಸಮಾರಂಭ ಜರುಗಿತು. ತೋಟಗಾರಿಕೆ ಇಲಾಖೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಮ್.ಸಿ. ಮನಗೂಳಿ ಉದ್ಘಾಟಿಸಿ ಮಾತನಾಡಿ, ರಂಗಭೂಮಿ ಕ್ಷೇತ್ರಕ್ಕೆ ವಿಜಯಪುರ ಜಿಲ್ಲೆಯ ಕೊಡುಗೆ ಅಪಾರವಾಗಿದೆ. ಹಂದಿಗನೂರ ಸಿದ್ಧರಾಮಪ್ಪ ಹಾಗೂ ಏಣಗಿ ಬಾಳಪ್ಪ ಪ್ರಮುಖ ರಂಗಭೂಮಿ ಕಲಾವಿದರಾಗಿ ದೇಶದ ಗಮನವನ್ನು ಸೆಳೆದಿದ್ದರು. ನಮ್ಮ ಬದುಕಿನ ಚಿತ್ರಣವನ್ನು ಯಥಾವತ್ತಾಗಿ ತೋರಿಸುವ ಮಾಧ್ಯಮವೇ ರಂಗಭೂಮಿ. ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಸರಕಾರ ಹಾಗೂ ಸಾರ್ವಜನಿಕರ ಮೇಲಿದೆ. ಈ ಹಿಂದೆ ನಮ್ಮ ಸಮಾಜದಲ್ಲಿ ನಾಟಕಗಳ ಪಾತ್ರ ಪ್ರಮುಖವಾಗಿತ್ತು. ಮಾನವ ವರ್ತನೆಯ ಬದಲಾವಣೆಗೆ ನಾಟಕ ಪ್ರಭಾವ ಬೀರುತ್ತಿದ್ದವು ಎಂದರು.
ಅಧ್ಯಕ್ಷತೆ ವಹಿಸಿದ ಶೂನ್ಯಪೀಠ ಹಾಗೂ ಮಾನವತಾ ಪ್ರಶಸ್ತಿ ಪುರಸ್ಕೃತ ಹಾಸಿಂಪೀರ ವಾಲಿಕಾರ ಮಾತನಾಡಿ, ಸಾಮಾಜಿಕ ಮೌಲ್ಯಗಳನ್ನು ಕಾಪಾಡುವ ಮತ್ತು ಸಾಮರಸ್ಯ ಉಂಟಾಗುವ ಜವಾಬ್ದಾರಿ ನಾಟಕಗಳು ಹೊತ್ತಿಕೊಂಡಿದ್ದವು. ಜಾತಿ ಮತ ಎನ್ನದೇ ಎಲ್ಲರನ್ನು ಒಂದುಗೂಡಿಸುವ ಕ್ಷೇತ್ರ ರಂಗಭೂಮಿ. ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಮತ್ತು ಮಾನವೀಯ ಹಾಗೂ ನೈತಿಕ ನೆಲೆಗಟ್ಟಿನ ಮೇಲೆ ನಾಟಕಗಳು ಪ್ರದರ್ಶನಗೊಳ್ಳುತ್ತಿದ್ದವು. ರಂಗಾಯಣ, ನೀನಾಸಂ ಹಾಗೂ ಜಮೂರಾ ಕಲಾ ತಂಡಗಳು ಇಂದಿಗೂ ರಾಜ್ಯಾದ್ಯಂತ ಗುಣಮಟ್ಟದ ನಾಟಕಗಳನ್ನು ಪ್ರದಶರ್ಿಸಿ ರಂಗಭೂಮಿ ಕ್ಷೇತ್ರದ ಘನತೆ ಕಾಪಾಡಿಕೊಂಡು ಬಂದಿದ್ದಾರೆ. ಆ ದಿಸೆಯಲ್ಲಿ ಕಲಾವಿದರು ತಮ್ಮ ಪ್ರತಿಭೆಯನ್ನು ಪ್ರದಶರ್ಿಸಿ ಶ್ರೇಷ್ಠಮಟ್ಟದ ಕಲೆಯನ್ನು ಉಳಿಸಿಕೊಳ್ಳಬೇಕು ಎಂದರು.
ಸಾನಿಧ್ಯವನ್ನು ವಹಿಸಿದ ಉಕ್ಕಲಿ-ಯರನಾಳ ವಿರಕ್ತ ಮಠದ ಸಂಗನಬಸವ ಶ್ರೀಗಳು ಆಶೀರ್ವಚನ ನೀಡಿ ನಾಟಕಗಳು ಬದುಕಿಗೆ ಪೂರಕವಾಗಿವೆ. ಈ ನಿಟ್ಟಿನಲ್ಲಿ 25 ವರ್ಷಗಳಿಂದ ಸದಭಿರುಚಿ ನಾಟಕಗಳನ್ನು ರಂಗಭೂಮಿ ಕ್ಷೇತ್ರಕ್ಕೆ ನೀಡುತ್ತಾ ಬಂದಿರುವ ರಂಗಚೇತನ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಲ್ಲಿಕಾಜರ್ುನ ಯಂಡಿಗೇರಿ ಮಾತನಾಡಿ, ನಗರದಲ್ಲಿರುವ ಕಿತ್ತೂರರಾಣಿ ಚನ್ನಮ್ಮ ನಾಟ್ಯಮಂದಿರವನ್ನು ಪುನರುಜ್ಜೀವನಗೊಳಿಸಿ ಕಲಾವಿದರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಕಾರ್ಯಕ್ರಮವನ್ನು ಪ್ರೊ. ಸುಭಾಸಚಂದ್ರ ಕನ್ನೂರ ನಿರ್ವಹಿಸಿದರು. ಸಂಘಟಿಕ ಎಮ್.ಎಸ್. ಖೇಡಗಿ ಪರಿಚಯಿಸಿದರು. ಕುಮಾರಿ ಸಾಕ್ಷಿ ಹಿರೇಮಠ ಹಾಗೂ ಪ್ರಜ್ಞಾ ಮೇತ್ರಿ ಪ್ರಾಥರ್ಿಸಿದರು. ಇದೇ ಸಂದರ್ಭದಲ್ಲಿ ಬೆಂಗಳೂರಿನ ಅಭಿಯಂತರ ಹಾಗೂ ರಂಗಪೋಷಕ ರಾಚಪ್ಪ ಬಿ. ಮಾದರ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ರಂಗನಾಥ ಅಕ್ಕಲಕೋಟ, ಬಸವರಾಜ ಯಂಕಂಚಿ, ಎಸ್.ಎಮ್. ದೇಶಪಾಂಡೆ, ಸಿದ್ದು ನಾಲತವಾಡ, ರಾಜು ತಾಳಿಕೋಟಿ, ನಿಂಗರಾಜ ಬಿರಾದಾರ, ಅಂಬಾದಾಸ ಜೋಶಿ, ಅಶೋಕ ಇನಾಮದಾರ, ಡಿ.ಎಚ್. ಕೋಲ್ಹಾರ, ಬಸವರಾಜ ಯಾಳವಾರ, ಸೋಮನಗೌಡ ಕಲ್ಲೂರ, ಸಿರಿಯಲ್ ಬಿರಾದಾರ, ಮಮತಾಜ ಖೇಡಗಿ, ವಾಣಿಶ್ರಿ ಮಠ, ಡಾ|.ವಿಷ್ಣು ಶಿಂದೆ, ಮಲ್ಲಿಕಾಜರ್ುನ ಅವಟಿ, ಸಲೀಂ ಖೇಡಗಿ, ಜಮೀರ ಖೇಡಗಿ ಹಾಗೂ ಜಿಲ್ಲೆಯ ಕಲಾವಿದರು ಉಪಸ್ಥಿತರಿದ್ದರು.