ದುಬೈ, ಏ 17 ಇಂಗ್ಲೆಂಡ್ನಲ್ಲಿ ಮೇ 30 ರಿಂದ ಆರಂಭವಾಗುವ ಐಸಿಸಿ ವಿಶ್ವಕಪ್ ಪೂರ್ವಾಭ್ಯಾಸ ಪಂದ್ಯದಲ್ಲಿ ತೊಡಗಿರುವ ವೆಸ್ಟ್ ಇಂಡೀಸ್ ತಂಡಕ್ಕೆ ಮಾಜಿ ಬ್ಯಾಟ್ಸ್ಮನ್ ರಾಮ್ನರೇಶ್ ಸರ್ವಣ್ ಅವರನ್ನು ಮೆಂಟರ್ ಆಗಿ ನೇಮಕ ಮಾಡಲಾಗಿದೆ. ವಿಶ್ವಕಪ್ ಪೂರ್ವಭಾವಿಯಾಗಿ ಆಯೋಜಿಸಿರುವ ಐಲರ್ೆಂಡ್ ಹಾಗೂ ಬಾಂಗ್ಲಾದೇಶ ನಡುವಿನ ತ್ರಿಕೋಣ ಸರಣಿಯ ಪ್ರಯುಕ್ತ ನಡೆಯುತ್ತಿರುವ ಅಭ್ಯಾಸ ಶೀಬಿರದಲ್ಲಿ 38 ವರ್ಷದ ಸರ್ವಣ್ ಅವರು ತಮ್ಮ ಸೇವೆ ಪ್ರಾರಂಭಿಸಿದ್ದಾರೆ. ರಾಮ್ನರೇಶ್ ಸರ್ವಣ್ ಅವರು ವೆಸ್ಟ್ ಇಂಡೀಸ್ ಪರ 87 ಟೆಸ್ಟ್, 181 ಏಕದಿನ ಹಾಗೂ ಟಿ-20 ಪಂದ್ಯಗಳಾಡಿದ್ದು, ಎಲ್ಲಾ ಮಾದರಿಯಲ್ಲಿ ಒಟ್ಟು 11, 944 ರನ್ ದಾಖಲಿಸಿದ್ದಾರೆ. ವಿಂಡೀಸ್ ಬ್ಯಾಟ್ಸ್ಮನ್ಗಳ ಬ್ಯಾಟಿಂಗ್ ಸುಧಾರಣೆಗೆ ಸರ್ವಣ್ ಶ್ರಮಿಸಲಿದ್ದಾರೆ. ರಾಷ್ಟ್ರೀಯ ತಂಡಕ್ಕೆ ಮೆಂಟರ್ ಆಗಿ ಆಯ್ಕೆ ಮಾಡಿರುವ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯ ಕ್ರಮಕ್ಕೆ ಬದ್ಧನಾಗಿರುತ್ತೇನೆ. ತಂಡ ಬೆಳವಣಿಗೆಗೆ ಪ್ರಾಮಾಣಿಕವಾಗಿ ದುಡಿಯುತ್ತೇನೆ. ಆಟಗಾರರಿಗೆ ಉಪಯುಕ್ತ ತಾಂತ್ರಿಕ ಹಾಗೂ ಇನ್ನಿತರೆ ಸಲಹೆಗಳನ್ನು ನೀಡುವ ಮೂಲಕ ಮುಖ್ಯ ತರಬೇತುದಾರ ಫ್ಲೋಯ್ಡ್ ರೆಫರ್ ಅವರಿಗೆ ನೆರವು ನೀಡಲಾಗುವುದು ಎಂದು ಸರ್ವಣ್ ಹೇಳಿದರು. ಕಳೆದ ಪಂದ್ಯಗಳಲ್ಲಿ ಗಮನಿಸಿದಾಗ ಬ್ಯಾಟ್ಸ್ಮನ್ಗಳು ಸ್ಟ್ರೈಕ್ ತಿರುಗುವಿಕೆಯಲ್ಲಿ ತೀವ್ರ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಈ ಸಮಸ್ಯೆ ಪರಿಹರಿಸಲು ಹೆಚ್ಚಿನ ಗಮನ ನೀಡುತ್ತೇನೆ. ಆಟಗಾರರೊಂದಿಗೆ ಈ ಕುರಿತು ಚಚರ್ಿಸಿ ಅವರ ಅಗತ್ಯಕ್ಕೆ ತಕ್ಕಂತೆ ಮಾರ್ಪಾಡು ಮಾಡಲಾಗುವುದು ಎಂದರು. ರಾಮ್ನರೇಶ್ ಸರ್ವಣ್, ವೆಸ್ಟ್ ಇಂಡೀಸ್ ತಂಡದ ಅತ್ಯುತ್ತಮ ಬ್ಯಾಟ್ಸ್ಮನ್ ಆಗಿದ್ದರು. ನಿಗದಿತ ಓವರ್ಗಳ ಪಂದ್ಯದಲ್ಲಿ ಉತ್ತಮ ಫಿನಿಷರ್ ಆಗಿದ್ದರು. ಅವರನ್ನು ಮೆಂಟರ್ ಆಗಿ ನೇಮಕ ಮಾಡಿರುವುದು ಉತ್ತಮ ಕಾರ್ಯ. ಅವರ ಕ್ರಿಕೆಟ್ ಜ್ಞಾನ ವೆಸ್ಟ್ ಇಂಡೀಸ್ ಆಟಗಾರರಿಗೆ ನೆರವಾಗಬಲ್ಲದು ಎಂದು ವಿಂಡೀಸ್ ತಂಡದ ಮುಖ್ಯ ತರಬೇತುದಾರ ಫ್ರಾಯ್ಡ್ ರೆಫರ್ ಶ್ಲಾಘಿಸಿದರು.