ಲೋಕದರ್ಶನ ವರದಿ
ರಾಮದುರ್ಗ,22: ಇಹಲೋಕ ತ್ಯಜಿಸಿದ ತುಮಕೂರ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳ ಆತ್ಮಕ್ಕೆ ಶಾಂತಿ ಜಯ ಕನರ್ಾಟಕ ಸಂಘಟನೆಯ ನೇತೃತ್ವದಲ್ಲಿ ಪಟ್ಟಣದ ಹುತಾತ್ಮ ಚೌಕದಲ್ಲಿ ಶ್ರದ್ಧಾಂಜಲಿ ಅಪರ್ಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ತಾಲೂಕಾಧ್ಯಕ್ಷ ವಿಜಯಕುಮಾರ ರಾಠೋಡ, ಶಿವಕುಮಾರ ಸ್ವಾಮೀಜಿಗಳು ಸರಕಾರವೂ ಮಾಡದ ಅಪಾರ ಶಿಕ್ಷಣ, ದಾಸೋಹ ಸೇವೆಯನ್ನು ಯಾರು ಮರೆಯುವಂತಿಲ್ಲ. ಅವರ ಆತ್ಮಕ್ಕೆ ಸ್ವರ್ಗದಲ್ಲಿ ಶಾಂತಿ ದೊರೆತು, ಅಂತಹ ಮಹಾನ್ ಪುರುಷರ ಮರುಜನ್ಮವಾಗಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಜಯ ಕನರ್ಾಟಕ ಸಂಘಟನೆಯ ಉಪಾಧ್ಯಕ್ಷರಾದ ಕೃಷ್ಣಾ ಬಡಿಗೇರ, ಸುರೇಶ ಗಿಂಜಾಳಿ, ಕಾಯರ್ಾಧ್ಯಕ್ಷ ಆಸೀಫ್ ಹಾಜಿ, ರಾಜ್ಯ ಮುಖಂಡ ಮೆಹಬೂಬಅಲಿ ನದಾಫ, ಪ್ರಧಾನ ಕಾರ್ಯದಶರ್ಿ ಕೃಷ್ಣಾ ರಾಠೋಡ, ಕಾರ್ಯದಶರ್ಿ ಆನಂದ ಕುಮಾರ ಜಾಧವ, ರಾಘವೇಂದ್ರ ದೊಡಮನಿ, ಸುನಿಲ ರಾಠೋಡ ಸೇರಿದಂತೆ ಇತರರಿದ್ದರು.