ಲೋಕದರ್ಶನ ವರದಿ
ಗದಗ 07: ಸಾಮಾಜಿಕ ಸೇವೆ ಸಲ್ಲಿಸುತ್ತಾ ಬಂದಿರುವ ವೃತ್ತಿ ನಿರತ ಕ್ಷೌರಿಕ ಜನಾಂಗ ನಿರಂತರವಾಗಿ ಶೋಷಣೆಗೆ ಒಳಗಾಗುತ್ತಲೇ ಬಂದಿದ್ದಾರೆ ವಯಸ್ಸಾದವರಿಗೆ ಯಾವುದೇ ಹಣಕಾಸಿನ ಭದ್ರತೆ ಇರುವುದಿಲ್ಲಾ ಎಂದು ಸ್ಪೀನ್ ಸೇವಾ ಪ್ರತಿಷ್ಠಾನದ ಸಂಸ್ಥಾಪಕರಾದ ನಾಮದೇವ ನಾಗರಾಜು ಹೇಳಿದರು.
ಅವರು ಗದಗ ಬೆಟಗೇರಿ ಸವಿತಾ ಸಮಾಜ ಗದ್ವಾಲ್ ಜಮಲಮ್ಮ ದೇವಿ ದೇವಸ್ಥಾನ ಟ್ರಸ್ಟ್ ಕಮೀಟಿಯ ಅಧ್ಯಕ್ಷರು ಹಾಗೂ ಹಿರಿಯರಾದ ರಾಮಚಂದ್ರ ನಾಗಪ್ಪ ರಾಂಪೂರ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಒಂದು ಸಮಾರಂಭದ ಅಧ್ಯಕ್ಷತೆ ವಹಿಸಿ ನಾಮದೇವ ನಾಗರಾಜ ಮಾತನಾಡಿ ಸಕರ್ಾರವು ಹಿರಿಯ ಕ್ಷೌರಿಕರಿಗೆ ಸಾಮಾಜಿಕ ಮತ್ತು ಆಥರ್ಿಕ ಭದ್ರತೆಗಾಗಿ ಮಾಸಿಕ ರೂ. 5000 ಪಿಂಚಣಿ ನೀಡಲು ಯೋಜನೆಯೊಂದನ್ನು ಜಾರಿಗೆ ತರಬೇಕೆಂದು ಸಕರ್ಾರವನ್ನು ಒತ್ತಾಯಿಸಿದರು.
ಅಖಿಲ ಕನರ್ಾಟಕ ಸವಿತಾ ಸಮಾಜದ ರಾಜ್ಯ ಉಪಾಧ್ಯಕ್ಷರು ಹಾಗೂ ನಿವೃತ್ತ ಪೊಲೀಸ್ ಅಧಿಕಾರಿಗಳಾದ ಎಚ್ ಎನ್ ಪ್ರಕಾಶ ಮಾತನಾಡಿ ಹಿರಿಯ ಕ್ಷೌರಿಕ ಬಂಧುಗಳು ದಿನವಿಡಿ ತಮ್ಮ ವೃತ್ತಿಯಲ್ಲಿ ನಿರಂತರವಾಗಿ ತೃಪ್ತಿಕರವಾದ ಸಂಪಾದನೆ ಮಾಡುವ ಕಾಲವೊಂದಿತ್ತು ಆದರೆ ಇತ್ತಿಚಿನ ದಿನಗಳತಕ್ಕಂತೆ ವೃತ್ತಿಯಲ್ಲಿ ನವೀನತೆ, ಕೌಶಲ್ಯತೆ ಪ್ರದರ್ಶಸುವಂತಹ ಕಠಿಣ ಕೆಲಸಗಳು ಮಾಡುವ ಸಾಮಥ್ರ್ಯ ತಗ್ಗುತ್ತಿದ್ದರಿಂದ ಸಾರ್ವಜನಿಕರು ಹಿರಿಯ ಕ್ಷೌರಿಕರನ್ನು ಅವಲಂಬಿಸುತ್ತಿಲ್ಲಾ ಈಗಾಗಿ ಅವರುಗಳ ನಿತ್ಯದ ಬದುಕು ನಡೆಸುವುದು ತುಂಬಾ ಕಷ್ಟಕರವಾಘಿದೆ ಎಂದು ಬೇಸರ ವ್ಯಕ್ತಪಡಿಸಿ ಮಾತನಾಡಿ ರಾಜ್ಯ ಸಕರ್ಾರ ಹಿರಿಯ ಕ್ಷೌರಿಕರ ಸಾಮಾಜಿಕ ಮತ್ತು ಆಥರ್ಿಕ ಭದ್ರತೆಗಾಗಿ ಪಿಂಚಣಿ ಭಾಗ್ಯ ಸೇರಿದಂತೆ ಇತರೆ ಸೌಲಭ್ಯಗಳು ಕಲ್ಪಿಸಲು ಮುಂದಾಗಬೇಕೆಂದು ಸಕರ್ಾರಕ್ಕೆ ಆಗ್ರಹಿಸಿದರು.
ಗದಗ ಜಿಲ್ಲಾ ಸವಿತಾ ಸಮುದಾಯ ಮೀಸಲಾತಿ ಒಕ್ಕೂಟದ ಜಿಲ್ಲಾ ಅಧ್ಯಕ್ಷರಾದ ಕೃಷ್ಣಾ ಎಚ್ ಹಡಪದ ಪ್ರಸ್ತಾವಿಕವಾಗಿ ಮಾತನಾಡಿದರು. ಗದಗ ತಾಲೂಕ ಸವಿತಾ ಸಮಾಜದ ಅಧ್ಯಕ್ಷರಾದ ಸೊಮಣ್ಣ ರಾಂಪೂರ, ಅತಿಥಿಗಳಾಗಿ ಭಾಗವಹಿಸಿದ್ದ ಇಮಾಮಕಾಶೀಂ ಸೇಟ್ರಿಂಗ್ ಪ್ಲೇಟ್ಸ್ ಸಂಸ್ಥೆಯ ಮಾಲೀಕರಾದ ಅಬ್ದುಲ್ ಮುನಾಫ್ ಮುಲ್ಲಾ ಸವಿತಾ ಸಮಾಜದ ಹಿರಿಯರಾದ ಹನುಮಂತಪ್ಪ ರಾಂಪೂರ ಪರಶುರಾಮ ಕೊಟೆಕಲ್ಲ, ದಿಲೀಪ್ ಸಾಳೊಂಕೆ, ವಿಷ್ಣು ಮಾನೆ, ಬಾಲರಾಜ ಕೋಟೆಕಲ್ಲ, ರಾಜು ಮಾನೆ, ಹೇಮಂತ ವಡ್ಡೆಪಲ್ಲಿ, ಜಂಬಣ್ಣ ಕಡಮೂರು ತುಮಕೂರ ತಾಲೂಕ ಅಧ್ಯಕ್ಷರಾದ ರಂಗನಾಥ, ವಿದ್ಯಾರಣ್ಯಪೂರ ಶಿವು, ದಾಸರಳ್ಳಿ ಚಂದ್ರು, ಅರುಣ್ ರಾಂಪೂರ, ಸುರೇಶ ಬೂದೂರ, ಯಲ್ಲಪ್ಪ ರಾಂಪೂರ, ಗದಗ ಜಿಲ್ಲಾ ಸವಿತಾ ಸಮಾಜದ ಯುವ ಘಟಕದ ಅಧ್ಯಕ್ಷರಾದ ರವಿಕುಮಾರ ಹಡಪದ ಹಾಗೂ ಸಮಾಜದ ಗುರು ಹಿರಿಯರು ಉಪಸ್ಥಿತರಿದ್ದರು.