ರಾಜ್ಯೋತ್ಸವ ಪ್ರಶಸ್ತಿ: ಶಾಂತಾರಾಮ ನಾಯಕರಿಗೆ ಜಿಲ್ಲಾ ಕಸಾಪ ಅಧ್ಯಕ್ಷರಿಂದ ಆಹ್ವಾನ

ಕಾರವಾರ : 2018ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಆದ ಹಿರಿಯ ಸಾಹಿತಿ ಶಾಂತಾರಾಮ ನಾಯಕ ಹಿಚಕಡ ಅವರ ಮನೆಗೆ ಜಿಲ್ಲಾ ಕ.ಸಾಪ. ಅಧ್ಯಕ್ಷ ಅರವಿಂದ ಕಕರ್ಿಕೋಡಿ ಅವರು ತೆರಳಿ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಬಂದು ಪ್ರಶಸ್ತಿ ಸ್ವೀಕರಿಸಬೇಕೆಂದು ಗೌರವಪೂರ್ವಕ ಆಮಂತ್ರಣ ನೀಡಿದರು.

ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಈ ಪ್ರಶಸ್ತಿಗೆ ಶಾಂತಾರಾಮ ನಾಯಕ ಹಿಚಕಡ ಅವರನ್ನು ಆಯ್ಕೆಯನ್ನು ಈ ಹಿಂದೆ ಪರಿಷತ್ತು ಘೋಷಿಸಿತ್ತು.

ಶಾಂತಾರಾಮ ನಾಯಕ ಅವರಿಗೆ ಆಮಂತ್ರಣ ನೀಡುವಾಗ ಜಿಲ್ಲಾಧ್ಯಕ್ಷರೊಟ್ಟಿಗೆ ಅಂಕೋಲಾ ತಾಲೂಕು ಕಸಾಪ ಅಧ್ಯಕ್ಷ ಡಾ.ಪ್ರಕಾಶ ನಾಯಕ, ಯಲ್ಲಾಪುರ ಕಸಾಪ ಅಧ್ಯಕ್ಷ ವೇಣುಗೋಪಾಲ ಮದ್ಗುಣಿ ಮತ್ತು ಕನರ್ಾಟಕ ಸಂಘದ ಕಾರ್ಯದಶರ್ಿ ನಾಗಪತಿ ಹೆಗಡೆ ಅವರು ಇದ್ದರು.