ರಾಜ್ಯಸಭಾ ಉಪ ಚುನಾವಣೆ: ಉತ್ತರಪ್ರದೇಶದಿಂದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ನಾಮಪತ್ರ ಸಲ್ಲಿಕೆ

ಲಕ್ನೋ, ಡಿ.2-ಉತ್ತರ ಪ್ರದೇಶದಲ್ಲಿ ಖಾಲಿ ಇರುವ ಒಂದು ರಾಜ್ಯಸಭಾ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಅರುಣ್ ಸಿಂಗ್ ಸೋಮವಾರ ನಾಮಪತ್ರ ಸಲ್ಲಿಸಿದರು. ಡಿಸೆಂಬರ್ 12ರಂದು ಅಗತ್ಯವಿದ್ದರೆ ಮತದಾನ ನಡೆಯಲಿದೆ.

 ರಾಜ್ಯ ವಿಧಾನಸಭೆಯ ಸೆಂಟ್ರಲ್‌ ಹಾಲ್‌ನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಸಿಂಗ್ ನಾಮಪತ್ರ ಸಲ್ಲಿಸುವಾಗ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಿಜೆಪಿ ರಾಜ್ಯಾಧ್ಯಕ್ಷ ಸ್ವತಂತ್ರ ದಿಯೋ ಸಿಂಗ್ ಸೇರಿದಂತೆ ಹಲವು ಸಚಿವರು, ಬಿಜೆಪಿ ನಾಯಕರು ಉಪಸ್ಥಿತರಿದ್ದರು.

ಸಮಾಜವಾದಿ ಪಕ್ಷದ ರಾಜ್ಯಸಭಾ ಸದಸ್ಯೆ, ಲೋಕಸಭಾ ಸದಸ್ಯ ಮುಹಮ್ಮದ್ ಅಝಂ ಖಾನ್‌ ಅವರ ಪತ್ನಿ ತಂಜೀಮ್ ಫಾತೀಮಾ ಅವರು ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ರಾಮಪುರ ಕ್ಷೇತ್ರದಿಂದ ಆಯ್ಕೆಯಾದ ಹಿನ್ನೆಲೆಯಲ್ಲಿ ಈ ಕ್ಷೇತ್ರ ಖಾಲಿ ಉಳಿದಿತ್ತು.

  ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ. ನಾಳೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಡಿಸೆಂಬರ್ 5ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.

  ಇದುವರೆಗೆ ಸಿಂಗ್ ಹೊರತಪಡಿಸಿ ಯಾರೂ ನಾಮಪತ್ರ ಸಲ್ಲಿಸಿದ್ದ. ಹಾಗಾಗಿ ಅವರು ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಹೆಚ್ಚಾಗಿದೆ.ಉತ್ತರ ಪ್ರದೇಶದ ಮಿರ್ಝಾಪುರ ಮೂಲದ ಸಿಂಗ್ ಅವರು ಶಾಸಕರಾಗಲೀ, ಸಂಸದರಾಗಿ ಇದುವರೆಗೆ ಆಯ್ಕೆಯಾಗಿಲ್ಲ.

  ವಿಧಾನಸಭೆಯಲ್ಲಿ ಬಿಜೆಪಿಗೆ ಬಹುಮತವಿದೆ.  ಹಾಗ್ಆಗಿ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಡಿಸೆಂಬರ್ 5ರಂದು ಅಧಿಕೃತವಾಗಿ ಸಿಂಗ್ ಅವರ ಆಯ್ಕೆಯನ್ನು ಪ್ರಕಟಿಸುವ ಸಾಧ್ಯತೆ ಇದೆ.  ಈ ಕ್ಷೇತ್ರದ ಅವಧಿ ಕೇವಲ ಒಂದು ವರ್ಷ ಮಾತ್ರ ಬಾಕಿ ಇದ್ದು, 2020, ನವೆಂಬರ್ 25ರಂದು ಅವಧಿ ಮುಕ್ತಾಯಗೊಳ್ಳಲಿದೆ.