ಜುಗೂಳ ಮಲ್ಲಿಕಾರ್ಜುನ ಸೊಸೈಟಿಗೆ ಅಧ್ಯಕ್ಷರಾಗಿ ತಾತ್ಯಾಸಾಬ ಉಪಾಧ್ಯಕ್ಷರಾಗಿ ರಾಜೇಂದ್ರ ಆಯ್ಕೆ
ಕಾಗವಾಡ, 08; ತಾಲೂಕಿನ ಜುಗೂಳ ಗ್ರಾಮದ ಶ್ರೀ ಮಲ್ಲಿಕಾರ್ಜುನ ಅರ್ಬನ್ ಕೋ-ಆಫ್ ಕೇಡಿಟ್ ಸೊಸಾಯಟಿಯ ಆಡಳಿತ ಮಂಡಳಿಗೆ ಇತ್ತಿಚಿಗೆ ಚುನಾವಣೆ ಜರುಗಿದ್ದು, ಶನಿವಾರ ದಿ. 08 ರಂದು ನಡೆದ ನೂತನ ಆಡಳಿತ ಮಂಡಳಿಯ ಸಭೆಯಲ್ಲಿ ತಾತ್ಯಾಸಾಬ ಅಣ್ಣಾಸಾಬ ಪಾಟೀಲ ಇವರು ನಾಲ್ಕನೇ ಬಾರಿಗೆ ಅಧ್ಯಕ್ಷರಾಗಿ ಹಾಗೂ ರಾಜೇಂದ್ರ ಕಡೋಲೆ ಇವರು ಎರಡನೇ ಬಾರಿಗೆ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡರು. ಇಂದು ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಎರಡೂ ಸ್ಥಾನಕ್ಕೆ ಒಂದೊಂದೇ ನಾಮಪತ್ರ ಸಲ್ಲಿಕೆಯಾಗಿರುವದರಿಂದ ತಾತ್ಯಾಸಾಬ ಅಣ್ಣಾಸಾಬ ಪಾಟೀಲ, ಇವರು ನಾಲ್ಕನೇ ಬಾರಿಗೆ ಅಧ್ಯಕ್ಷರಾಗಿ ಹಾಗೂ ರಾಜೇಂದ್ರ ಕಲ್ಲಪ್ಪ ಕಡೋಲೆ ಎರಡನೇ ಬಾರಿಗೆ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾನಾವಣಾಧಿಕಾರಿ ರಾಘವೇಂದ್ರ ನೂಲಿ, ಸಹಾಯಕರಾದ ಎ.ಎ. ಜಾಧವ ಘೋಷಿಸಿದರು. ನಂತರ ನೂತನ ಅಧ್ಯಕ-ಉಪಾಧ್ಯಕ್ಷರನ್ನು ಸಂಘ ಹಾಗೂ ಗ್ರಾಮಸ್ಥರ ವತಿಯಿಂದ ಸನ್ಮಾನಿಸಲಾಯಿತು. ನೂತನ ಅಧ್ಯಕ್ಷ ತಾತ್ಯಾಸಾಬ ಪಾಟೀಲ ಸನ್ಮಾನ ಸ್ವೀಕರಿಸಿ ಮಾತನಾಡಿ, ವೇದಾಂತ ಕೇಸರಿ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳ ಹಾಗೂ ನಡೆದಾಡುವ ದೇವರೆಂದೇ ಖ್ಯಾತಿಯಾಗಿರುವ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಕೃಪಾ ಆಶೀರ್ವಾದದಿಂದ ನಮ್ಮ ಸಹಕಾರಿಯು ಕಳೆದ 31 ವರ್ಷಗಳಿಂದ ಅತ್ಯತ್ತಮವಾಗಿ ನಡೆದುಕೊಂಡು ಬಂದಿದೆ. ನಾನು ಕಳೆದ 20 ವರ್ಷಗಳಿಂದ ಸಂಘದ ಅಧ್ಯಕ್ಷನಾಗಿ ಸ್ವಚ್ಚ ಹಾಗೂ ಪಾರರ್ದಕ ಆಡಳಿತ ನಡೆಸುತ್ತ ಬಂದಿರುವದರಿಂದ ನನಗೆ ಮತ್ತೊಂದು ಬಾರಿ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿರುವುದಕ್ಕೆ ಆಡಳಿತ ಮಂಡಳಿಗೆ ಹಾಗೂ ಸದಸ್ಯರಿಗೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು. ಉಪಾಧ್ಯಕ್ಷ ರಾಜೇಂದ್ರ ಕಡೋಲೆ ಮಾತನಾಡಿದರು. ಈ ವೇಳೆ ಪಿಕೆಪಿಎಎಸ್ ಅಧ್ಯಕ್ಷ ಅಣ್ಣಾಸಾಬ ಪಾಟೀಲ, ಗ್ರಾ.ಪಂ. ಅಧ್ಯಕ್ಷ ಕಾಕಾಸಾಬ ಪಾಟೀಲ, ಮುಖಂಡರಾದ ಬಾಬಗೌಡ ಪಾಟೀಲ, ರವೀಂದ್ರ ವ್ಹಾಂಟೆ, ಸುರೇಶ ಪಾಟೀಲ, ಭಾಸ್ಕರ ಪಾಟೀಲ, ಅನೀಲ ಕಡೋಲೆ, ಅನೀಲ ಸುಂಕೆ, ಪ್ರಕಾಶ ಪಾಟೀಲ, ಬಾಬು ಜಾಧವ, ಪ್ರಮೊದ ಪಾಟೀಲ, ಅವಿನಾಶ ಪಾಟೀಲ, ಬಾಬಾಸಾಬ ತಾರದಾಳೆ ಮತ್ತು ಸಹಕಾರಿಯ ನಿರ್ದೇಶಕರಾದ ಬಾಳಾಸಾಬ ಪಾಟೀಲ, ದಾದಾಸಾಬ ಪಾಟೀಲ, ಕಲ್ಲಪ್ಪ ಮಿಣಚೆ, ಬಾಳಗೌಡ ಪಾಟೀಲ, ಶೇಖರ ದೇಸಾಯಿ, ಗುರುಗೌಡ ಪಾಟೀಲ, ರಾಜು ಮಿರ್ಜೆ, ಸಾಧನಾ ಪಾಟೀಲ, ಸಾರಿಕಾ ಪಾಟೀಲ, ನಾರಾಯಣ ಮಾನೆ, ಫಾರುಕ ಜುಗಳೆ, ಸಿದಗೌಡ ಕಾಡಾಪೂರೆ, ಸೇರಿದಂತೆ ಅನೇಕರು ಇದ್ದರು. ಶಾಖಾ ವ್ಯವಸ್ಥಾಕರಾದ ರುದ್ರಗೌಡ ಪಾಟೀಲ ಸರ್ವರನ್ನು ಸ್ವಾಗತಿಸಿ ವಂದಿಸಿದರು.