ಧಾರವಾಡ 18 : ಕಛೇರಿ ಕೆಲಸಕ್ಕಿಂತ ಮಕ್ಕಳಿಗೆ ಬೆಳೆಸುವುದು ಕಠಿಣ ಕೆಲಸ ಎಂದು ಧಾರವಾಡ ಜಿಲ್ಲಾಧಿಕಾರಿ ದೀಪಾ ಜೋಳನ್ ನುಡಿದರು.
ಅವರು ಸೋಮೇಶ್ವರದಲ್ಲಿರುವ ಕೇಂದ್ರೀಯ ವಿದ್ಯಾಲಯದ 37 ನೇ ವಾರ್ಷಿ ಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ನೆರೆದ ಪಾಲಕರೊಂದಿಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಈಗಿನ ಮಕ್ಕಳಲ್ಲಿ ವಯಸ್ಸಿಗೆ ಮೀರಿದ ಬುದ್ಧಿಮತ್ತೆ ಇದೆ. ಮಕ್ಕಳಲ್ಲಿ ಶಿಸ್ತು ಕಲಿಸುವುದು ಮನೆಯಿಂದಲೆ ಪ್ರಾರಂಭವಾಗಬೇಕು. ಇದಕ್ಕೆ ಪಾಲಕರಲ್ಲಿ ಶಾಂತಿ ಸಹನೆ ಅತೀ ಅವಶ್ಯಕ, ಗುರುಹಿರಿಯರಿಗೆ, ಶಿಕ್ಷಕರಿಗೆ, ಹೆಣ್ಣು ಮಕ್ಕಳಿಗೆ ಗೌರವದಿಂದ ಕಾಣುವದನ್ನು ಕಲಿಸಬೇಕು ಎಂದರು.
ಜೀವನ ಮೋಬೈಲ್ ಬರುವ ಮೊದಲು ಹಾಗೂ ನಂತರ ಆದ ಬದಲಾವಣೆಯ ರೂಪಕ ಅತ್ಯಂತ ಪರಿಣಾಮಕಾರಿಯಾಗಿ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿ ಗಳು ನಿರೂಪಿಸಿದ್ದನ್ನು ಶ್ಲಾಘಿಸಿದರು. ಗುರಿ ಮುಟ್ಟಲು ಕಠಿಣ ಪರಿಶ್ರಮ, ಸತತ ಪ್ರಯತ್ನ, ಅಗತ್ಯ ಎಂದರು.
ಪ್ರಾಂಶುಪಾಲ ಕೆ.ಎಸ್.ಮುರಳಿಕೃಷ್ಣ, ಜಿಲ್ಲಾ ಪಂಚಾಯತ ಸಿ.ಇ.ಒ ಡಾ. ಸತೀಶ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗಂಗಾ, ಯಮುನಾ, ಕಾವೇರಿ, ನರ್ಮದಾ ಗುಂಪುಗಳಲ್ಲಿ ಪ್ರಾಥಮಿಕ ಶಿಕ್ಷಣ ವರ್ಗದಲ್ಲಿ ಯಮುನಾ ಗುಂಪು ಹೆಚ್ಚಿನ ಅಂಕ ಪಡೆದು ಹಾಗೂ ಪ್ರೌಢ ಶಿಕ್ಷಣ ವರ್ಗದಲ್ಲಿ ಗಂಗಾ ಗುಂಪು ಹೆಚ್ಚಿನ ಅಂಕ ಪಡೆದಿದ್ದಕ್ಕೆ ಪಾರಿತೋಷಕ ನೀಡಲಾಯಿತು. 9 ನೇ ತರಗತಿಯ ಬಾಲ ವಿಜ್ಞಾನಿ ಕುಶಾಲ ಹಾಗೂ ರಾಜ್ಯ ಮಟ್ಟದಲ್ಲಿ 129 ವಿದ್ಯಾರ್ಥಿ ಗಳಲ್ಲಿ ಆಯ್ಕೆಯಾದ ಬಾಲ ವಿಜ್ಞಾನಿ ದೈವಿಕ ಪ್ರಮಾಣ ಪತ್ರ ಹಾಗೂ ಪಾರಿತೋಷಕ ನೀಡಿ ಸನ್ಮಾನಿಸಲಾಯಿತು. ಕ್ರೀಡೆಯಲ್ಲಿ 12 ನೇ ತರಗತಿಯ ರೀಜನಲ್ ವಲಯದಲ್ಲಿ ಕಂಚಿನ ಪದಕ ಪಡೆದ ಅಕ್ಷಯ ಹಾಗೂ ದರ್ಶನ ವಿದ್ಯಾರ್ಥಿ ಗಳಿಗೆ ಸನ್ಮಾನಿಸಲಾಯಿತು. 2019-20 ರಲ್ಲಿ 10 ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸೃಷ್ಠಿ ಕೆ. ಪೇಟಕರ (95.6) ಮಾನಸಿ ನಾಗನೂರ (94.8) ಪ್ರತಿಕ್ಷಾ ತಿಗಡಿ (94.4) ಹಾಗೂ 12 ನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದ ರೀತಿಷ ಕುಲಕರ್ಣಿ (91.6) ಪವನ ಗುತ್ತಿ (88.2) ಶ್ರೇಯಸ್ ಶರತ್ (86.4) ಇವರಿಗೆ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಅವರ ಮೊಮ್ಮಗಳ ಸ್ಮರಣಾರ್ಥ ಪಾರಿತೋಷಕ ಶಾಲೆಯ ವತಿಯಿಂದ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
10 ಮತ್ತು 12 ನೇ ತರಗತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ 80 ರಿಂದ 100 ಕ್ಕೆ 100 ರಷ್ಟು ಫಲಿತಾಂಶ ನೀಡಿದ ಶಾಲೆಯ ಶಿಕ್ಷಕರಾದ ಐಶ್ವರ್ಯ ಅಯ್ಯಂಗಾರ (ಇಂಗ್ಲೀಷ) ನೀಲಾ ಕಾರೇಕರ(ಹಿಂದಿ) ಅನ್ನಪೂಣರ್ಾ ಪೈ (ಜೀವ ಶಾಸ್ತ್ರ) ಇವರನ್ನು ಸನ್ಮಾನಿಸಲಾಯಿತು. ಸ್ಕೌಟ ಹಾಗೂ ಗೈಡ್ಸ್ ಶಿಕ್ಷಕರಾದ ಎಮ್.ಕೆ.ಗಾಣಿಗೇರ್ ರಾಷ್ಟ್ರೀಯ ಪ್ರಧಾನಮಂತ್ರಿ ಪದಕ ಪ್ರಥಮ ಸ್ಥಾನ ಪಡೆದಿದ್ದಕ್ಕಾಗಿ ಸನ್ಮಾನಿಸಲಾಯಿತು.
ಸಾಂಕೃತಿಕ ಕಾರ್ಯಕ್ರಮದಲ್ಲಿ ಮಕ್ಕಳು ಗಣೇಶ ವಂದನ, ಸ್ವಾಗತ ನೃತ್ಯ, ದೇಶ ಭಕ್ತಿಗಿತೆ, ನಾಟಕ, ರಾಜಸ್ಥಾನಿ, ಮರಾಠಿ, ಗೋವಾ, ತಮೀಳ, ಕನ್ನಡ, ಪಾಶ್ಚಾತ್ಯ ನೃತ್ಯ ಹಾಗೂ ಫ್ಯಾಶನ ಶೊ ಮಾಡಿದರು.
ಪ್ರಾರ್ಥನೆ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿ ಗಳಿಂದ, ಸ್ವಾಗತ ಸ್ಮೀತಾ .ಎಚ್, ಕಾರ್ಯಕ್ರಮ ನಿರೂಪಣೆ ವಿ ವಿ ರಘುನಾಥ, ಅತಿಥಿಗಳ ಪರಿಚಯ ಭರತೇಶ ಭೋಸಗೆ, ವಂದನಾರ್ಪಣೆ ಮೋನಾ ವರ್ಮಾ ಮಾಡಿದರು.