ನೀಲಂಬೂರು-ನಂಜನಗೂಡು ರೈಲ್ವೆ ಯೋಜನೆ ಜಾರಿಗೆ ರಾಹುಲ್ ಆಗ್ರಹ

ರಾಹುಲ್ ಗಾಂಧಿ

ನವದೆಹಲಿ, ಡಿಸೆಂಬರ್ 4-   ಕೇರಳ - ಕರ್ನಾಟಕ ಬೆಸೆಯುವ, ಸಂಪರ್ಕ  ಕಲ್ಪಿಸುವ ಪ್ರಮುಖ  ನೀಲಂಬೂರ್-ನಂಜನಗೂಡು ಯೋಜನೆಯನ್ನು ಕೇಂದ್ರ  ತಕ್ಷಣ  ಕೈಗೆತ್ತಿಕೊಳ್ಳಬೇಕು ಎಂದು ಕಾಂಗ್ರೆಸ್ ನಾಯಕ,  ವಯನಾಡು  ಸಂಸದ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಆಗ್ರ ಹಪಡಿಸಿದರು  

ಸದನದಲ್ಲಿ  ಈ  ಈ ವಿಷಯ ಪ್ರಸ್ತಾಪಿಸಿದ ಅವರು , ನೀಲಂಬೂರ್-ನಂಜನಗೂಡು  ರೈಲ್ವೆ ಮಾರ್ಗವು ತನ್ನ ಕ್ಷೇತ್ರದ ವಯನಾಡಿನ  ಜನರಿಗೆ ಬಹಳ ಅಗತ್ಯ ನಿರ್ಣಾಯಕವಾಗಿದೆ ಹೀಗಾಗಿ ಇದನ್ನು ತ್ವರಿತ ಗತಿಯಲ್ಲಿ ಕೈಗೆತ್ತಿಕೊಳ್ಳಬೇಕು, ಬೇಗ  ಪೂರ್ಣ ಮಾಡಬೇಕು  ಎಂದು ಹೇಳಿದರು.

ಸಿಪಿಐ (ಎಂ) ನೇತೃತ್ವದ ಕೇರಳ ಸರ್ಕಾರಕ್ಕೆ ಈ ಯೋಜನೆ ಪೂರ್ಣಗೊಳಿಸಲು  ಕೇಂದ್ರವು ಎಲ್ಲ ರೀತಿಯ  ಬೆಂಬಲ, ಸಹಕಾರ  ನೀಡಬೇಕು ಎಂದು ಮನವಿ ಮಾಡಿದರು. 

ನೀಲಾಂಬುರು ಕೇರಳದ ವಯನಾಡ್ ಪ್ರದೇಶದ ವ್ಯಾಪ್ತಿಗೆ ಬಂದರೆ ನಂಜನಗೂಡು  ಕರ್ನಾಟಕದಲ್ಲಿದೆ.  ಡಿಎಂಕೆ ಸದಸ್ಯ ಎಂ.ಕಣಿಮೋಳಿ ಮತ್ತು ಬಿಜೆಪಿ ಸದಸ್ಯ  ರವಿ ಕಿಶನ್ ಮತ್ತು ಲಾಕೆಟ್ ಚಟರ್ಜಿ ಕೂಡ ತಮ್ಮ ಕ್ಷೇತ್ರಗಳಿಗೆ ಸಂಬಂಧಿಸಿದ ವಿಷಯಗಳನ್ನು ಸದನದಲ್ಲಿ ಪ್ರಸ್ತಾಪ  ಮಾಡಿದರು. 

ಚಟರ್ಜಿ ಅವರು ತಮ್ಮ ಕ್ಷೇತ್ರ ಹೂಗ್ಲಿ ಒಂದು ಕಾಲದಲ್ಲಿ ಸೆಣಬಿನ ಉತ್ಪಾದನೆಯ ಕೇಂದ್ರವಾಗಿತ್ತು ಮತ್ತು ಆದ್ದರಿಂದ ಸೆಣಬಿನ ಉದ್ಯಮವನ್ನು ಪುನರುಜ್ಜೀವನಗೊಳಿಸಲು ಕೇಂದ್ರವು ತಕ್ಷಣ ಕ್ರಮ  ತೆಗೆದುಕೊಳ್ಳಬೇಕು ಎಂದೂ  ಸರಕಾರವನ್ನು  ಒತ್ತಾಯಿಸಿದರು .