9ರಂದು ರಾಹುಲ್ ಆಗಮನ: ಪೂರ್ವಭಾವಿ ಸಭೆ

ಲೋಕದರ್ಶನವರದಿ

ಬ್ಯಾಡಗಿ04: ದೇಶಕ್ಕಾಗಿ ಜೀವಬಿಟ್ಟ ಪ್ರಧಾನಿಗಳು ಕೇವಲ ಕಾಂಗ್ರೆಸ್ನಲ್ಲಿದ್ದಾರೆ, ಅದಕ್ಕೂ ಮುನ್ನ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುವ ಮೂಲಕ ಪಕ್ಷದ ಬಹಳಷ್ಟು ಮುಖಂಡರು ದೇಶಕ್ಕಾಗಿ ಮತ್ತು ನೆಲಕ್ಕಾಗಿ ತಮ್ಮ ಪ್ರಾಣ ಕಳೆದುಕೊಂಡು ಹುತಾತ್ಮರಾಗಿದ್ದಾರೆ, ಯುದ್ಧ ಪರಂಪರೆಯ ಇತಿಹಾಸವನ್ನು ಸರಿಯಾಗಿ ತಿಳಿದುಕೊಳ್ಳದ ಸೋಕಾಲ್ಡ್ ದೇಶಭಕ್ತರಿಂದ ಸಟರ್ಿಫಿಕೇಟ್ ಪಡೆಯುವ ಅಗತ್ಯ ಕಾಂಗ್ರೆಸ್ಗಿಲ್ಲ ಎಂದು ಮಾಜಿ ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.

 ಬರುವ ಮಾ.9 ರಂದು ಹಾವೇರಿಗೆ ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಆಗಮಿಸುತ್ತಿರುರುವ ಹಿನ್ನೆಲೆಯಲ್ಲಿ, ಪಟ್ಟಣದ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಜರುಗಿದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ಜನರಲ್ಲಿ ಭಾವೈಕ್ಯತೆ ಮೂಡಿಸುವ ಸಾಮಥ್ರ್ಯವಿರುವ ಏಕೈಕ ಪಕ್ಷ ಕಾಂಗ್ರೆಸ್ ಎಂದರೆ ತಪ್ಪಾಗಲಾರದು ಎಲ್ಲ ಜಾತಿಧರ್ಮಗಳ ಮತ್ತು ಎಲ್ಲ ವರ್ಗಧ ಬಡವರನ್ನು ಒಟ್ಟಿಗೆ ಕರೆದೊಯ್ಯುವುದು ಪಕ್ಷದ ಮ್ಯಾನುಫಾಸ್ಟೋಗಳಲ್ಲಿ ಒಂದಾಗಿದೆ ಎಂದರು.

 ದೇಶದಲ್ಲಿ ಜನರಲ್ಲಿ ಐಕ್ಯತೆ ಮೂಡಿಸಿ ಕಳೆದ 70 ವರ್ಷಗಳ ಕಾಲ ದೇಶವನ್ನು ಸುಭಧ್ರವಾಗಿಡುವಲ್ಲಿ ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆಯಾಗದಂತೆ ಕಾಂಗ್ರೆಸ್ ನೋಡಿ ಕೊಂಡಿದೆ, ಸ್ವಾತಂತ್ರ ಪಡೆದ ಬಳಿಕ ಯಾವುದೇ ಕೈಗಾರಿಕೆಗಳಲ್ಲಿದೇ ಬಡತನದ ಸ್ಥಿತಿಯಲ್ಲಿದ್ದ ಜನರಿಗೆ ಅನ್ನ ನೀರು ನೀಡುವ ಮೂಲಕ ಅವರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಇಂದು ಭವ್ಯ ಭಾರತವೆಂಬ ಬಲಿಷ್ಠ ರಾಷ್ಟ್ರ ಉದಯಿಸಿದೆ ಎಂದರು.  

    ಕೋಮು ಸೌಹಾರ್ದತೆ ಕೆಲಸಕ್ಕೆ ಬ್ರೇಕ್ ಹಾಕಿ: ತಪ್ಪಿತಸ್ಥರ ವಿರುದ್ಧ ಕಾನೂನಿದೆ ಕೋರ್ಟಯಿದೆ, ಆದರೆ ಬಹುತೇಕ ಗುಂಪು ಘರ್ಷಣೆ ಗಳನ್ನು ಅಥವಾ ಜಗಳಗಳಲ್ಲಿ ಎರಡು ಧರ್ಮಗಳಿಗೆ ಕೊಂಡೊಯ್ಯುತ್ತಿರುವುದು ದೇಶದ ಬಹುದೊಡ್ಡ ದುರಂತದ ವಿಷಯ, ತಪ್ಪಿತಸ್ಥರ ವಿರುದ್ಧ ಪಕ್ಷಾತೀತ ಹೋರಾಟಕ್ಕೆ ಕಾಂಗ್ರೆಸ್ ಬದ್ಧವಿದೆ, ಸೆಕ್ಯೂಲರ್ ಸ್ಟೇಟ್ಗಳಲ್ಲಿ ಜಾತ್ಯಾತೀತತೆ ಮತ್ತು ಕೋಮು ಸೌಹಾರ್ದತೆ ಕಾಯ್ದುಕೊಳ್ಳದೇ ಹೋದಲ್ಲಿ ಪ್ರಜಾಪ್ರಭುತ್ವಕ್ಕೆ ಬಹುದೊಡ್ಡ ಪೆಟ್ಟು ಬೀಳಲಿದೆ ಎಂದರು.

   ಅಧಿಕಾರದಲ್ಲಿದ್ದಾಗಲೇ ಪಕ್ಷ ಗಟ್ಟಿಗೊಳ್ಳಬೇಕು: ಹಿರಿಯ ಮುಖಂಡ ಎಸ್.ಆರ್.ಪಾಟೀಲ ಮಾತನಾಡಿ, ಅಧಿಕಾರದಲ್ಲಿದ್ದಾಗ ಯಾರೊಬ್ಬರು ಪಕ್ಷದ ಸಂಘಟನೆ ಬಗ್ಗೆ ಗಮನ ಹರಿಸುವುದಿಲ್ಲ ಅಧಿಕಾರ ಕಳೆದುಕೊಂಡ ತಕ್ಷಣವೇ ಸಂಘಟನೆ ಬಗ್ಗೆ ನೆನಪಾಗುತ್ತದೆ, ಪಕ್ಷ ಸಂಘಟನೆ ಎಂದರೆ ಚುನಾವಣೆ ಬಂದಾಗ ಮಾಡುವ ಕೆಲಸವಲ್ಲ ಮಾಜಿ ಪ್ರಧಾನಿ ಉಕ್ಕಿನ ಮಹಿಳೆ ಇಂದಿರಾಗಾಂಧಿ ತಂದಿದ್ದ ಹೊಸ ಹೊಸ ಯೋಜನೆಗಳ ಮಾದರಿಯಲ್ಲಿ ಟ್ರೆಂಡ್ ಹುಟ್ಟು ಹಾಕುವ ಯೋಜನೆಗಳನ್ನು ಜಾರಿಗೆ ತರಬೇಕಿದೆ ಎಂದರು. 

          ರಾಹುಲ್ ಗಾಂಧಿ ಕಾರ್ಯಕ್ರಮ ಯಶಸ್ವಿಗೊಳಿಸಿ: ಕಾಂಗ್ರೆಸ್ನ ನೂತನ ಜಿಲ್ಲಾಧ್ಯಕ್ಷ ಎಂ.ಎಂ.ಹಿರೇಮಠ ಮಾತನಾಡಿ, ಕಾಂಗ್ರೆಸ್ ಸರಕಾರದ ಹಿಂದಿನ ಸಾಧನೆಗಳನ್ನು ಮನೆ ಮನೆಗೂ ತಲುಪಿಸುವ ಮೂಲಕ ಲೋಕಸಭೆ ಚುನಾವಣೆಗೆ ತಯಾರಿ ನಡೆಸಬೇಕಿದೆ, ಗದಗ ಹಾಗೂ ಹಾವೇರಿ ಲೋಕಸಭೆ ಚುನಾವಣೆ ಕುರಿತಂತೆ ಶಿಗ್ಗಾವಿ ತಾಲೂಕಿನ ಬಿಸನಳ್ಳಿ ಗ್ರಾಮಕ್ಕೆ ಇದೇ 09 ರಂದು ಆಗಮಿಸುತ್ತಿರುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರುವಂತೆ ಮನವಿ ಮಾಡಿದರು.

 ಕಾಂಗ್ರೆಸ್ ನೂತನ ಜಿಲ್ಲಾಧ್ಯಕ್ಷರಿಗೆ ಸನ್ಮಾನಿಸಲಾಯಿತು ಮತ್ತು ಕಾಗಿನೆಲೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಮಾಡಲಾಯಿತು. ವೇದಿಕೆಯಲ್ಲಿ ತಾಲೂಕಾಧ್ಯಕ್ಷ ಮಲ್ಲಿಕಾಜರ್ುನ ಕರಿಲಿಂಗಣ್ಣನವರ, ಜಿ.ಪಂ.ಸದಸ್ಯ ಅಬ್ದುಲ ಮುನಾಫ್ ಎಲಿಗಾರ, ಎಪಿಎಂಸಿ ಅಧ್ಯಕ್ಷ ಕೆ.ಎಸ್.ನಾಯ್ಕರ, ಪುರಸಭೆ ಸದಸ್ಯರಾದ ದುಗರ್ೇಶ ಗೋಣೆಮ್ಮನರ, ನಜೀರ ಅಹಮ್ಮದ ಶೇಕ್, ಮಂಜುನಾಥ ಭೋವಿ, ಶಿವಪ್ಪ ಅಂಬಲಿ, ಮಹೇಶಗೌಡ ಪಾಟೀಲ, ದಾನಪ್ಪ ಚೂರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.