ಕೇಸರಿ ಪಕ್ಷ ಸೇರ್ಪಡೆಗೊಂಡ ತಮಿಳು ಹಿರಿಯ ನಟ ರಾಧಾ ರವಿ

Radha Ravi

ಚೆನ್ನೈ, ನ 30- ತಮಿಳು  ಚಲನ ಚಿತ್ರರಂಗದ  ಖ್ಯಾತ ನಟ ರಾಧಾ ರವಿ   ಶನಿವಾರ  ಬಿಜೆಪಿ  ಸೇರ್ಪಡೆಗೊಂಡಿದ್ದಾರೆ.

  ಬಿಜೆಪಿ ರಾಷ್ಟ್ರೀಯ  ಕಾರ್ಯಾಧ್ಯಕ್ಷ ಅಧ್ಯಕ್ಷ  ಜೆ.ಪಿ.  ನಡ್ಡಾ,   ಕೇಸರಿ  ವಸ್ತ್ರವನ್ನು ಹೊಂದಿಸುವ ಮೂಲಕ  ಹಿರಿಯ ನಟನನ್ನು   ಪಕ್ಷಕ್ಕೆ ಬರಮಾಡಿಕೊಂಡರು.    ರಾಧಾ ರವಿ  280 ಕ್ಕೂ ಹೆಚ್ಚು ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ.

  ರಾಧಾ ರವಿ ಈ ಹಿಂದೆ ಡಿಎಂಕೆ ಸದಸ್ಯರಾಗಿದ್ದರು.   ಅಶಿಸ್ತಿನ ಕಾರಣ ನೀಡಿ ಕಳೆದ  ಮಾರ್ಚ್ ತಿಂಗಳಲ್ಲಿ   ಡಿಎಂಕೆ    ಪಕ್ಷದಿಂದ  ಅವರನ್ನು  ವಜಾಗೊಳಿಸಲಾಗಿತ್ತು.

 ಏತನ್ಮಧ್ಯೆ,   ಬಾಲಿವುಡ್   ನಾಯಕಿ,  ಮಾಜಿ ವಿಶ್ವ ಸುಂದರಿ ಐಶ್ವರ್ಯ ರಾಯ್ ,    ದಕ್ಷಿಣ ಭಾರತ ಪ್ರಮುಖ  ನಟಿ    ನಯನತಾರ ಬಗ್ಗೆ ವಿವಾದಾತ್ಮಕ  ಹೇಳಿಕೆ  ನೀಡುವ ಮೂಲಕ ರಾಧಾ ರವಿ ವಿವಾದ ಸೃಷ್ಟಿಸಿಕೊಂಡಿದ್ದರು.