ವಿದ್ಯಾಥರ್ಿನಿಯರಿಗೆ ಜುಡೊದಲ್ಲಿ ರಾಚವಿ ಚಿನ್ನದ ಪದಕ

ಲೋಕದರ್ಶನ ವರದಿ

ಬೆಳಗಾವಿ 15: ಇಲ್ಲಿಯ ಅಂಜುಮನ್ ಕಾಲೇಜು ಆಯೋಜಿಸಿದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳ ಮಹಿಳೆಯರ ಜುಡೊ ಪಂದ್ಯದಲ್ಲಿ ಸ್ಥಳೀಯ ಭಾವುರಾವ ಕಾಕತಕರ ಕಾಲೇಜಿನ ಇಬ್ಬರು ಕ್ರೀಡಾಪಟುಗಳು ಚಿನ್ನದ ಪದಕಗಳನ್ನು ಪಡೆದಿದ್ದಾರೆ ಹಾಗೂ "ಯುನಿವಸರ್ಿಟಿ ಬ್ಲೂ ಪದವಿಯನ್ನು ತಮ್ಮದಾಗಿಸಿದ್ದಾರೆ. ಲಕ್ಷ್ಮೀ ಪಾಟೀಲ (44ಕಿ) ಮತ್ತು ಆರತಿ ಹಾಜಗುಲಕರ್ (57ಕಿ) ಅವರು ಈ ಸಾಧನೆಗೈದ ಕ್ರೀಡಾಪಟುಗಳು.

ಇಬ್ಬರು ಚಂಡಿಗಡದ ಮೋಹಾಲಿಯಲ್ಲಿ  ಚಂಡಿಗಡ ವಿವಿ ಹಮ್ಮಿಕೊಳ್ಳುವ ಅಖಿಲ ಭಾರತ ಅಂತರ ವಿವಿ ಜುಡೊ ಸ್ಪಧರ್ೆಯಲ್ಲಿ ಭಾಗಿಯಾಗಲಿದ್ದಾರೆ. ಇವರಿಗೆ ಕಾಲೇಜಿನ ಕ್ರೀಡಾ ತರಬೇತುದಾರ ಪ್ರೊ.ಸೂರಜ ಪಾಟೀಲರ ಮಾರ್ಗದರ್ಶನ ಮತ್ತು ಪ್ರಾಚಾರ್ಯ ಡಾ.ಎಸ್.ಎನ್.ಪಾಟೀಲರ ಪ್ರೊತ್ಸಾಹ ಲಭಿಸಿದೆ.