ಪಂಚ ಸೇನಾ ಕಲ್ಯಾಣ ಕರ್ನಾಟಕ ಮಾಧ್ಯಮ ವಕ್ತಾರರಾಗಿ ರವೀಂದ್ರನಾಥ ಕೆ ತೋಟದ ನೇಮಕ

Rabindranath K Thota appointed as Panch Sena Kalyana Karnataka media spokesperson

ಪಂಚ ಸೇನಾ ಕಲ್ಯಾಣ ಕರ್ನಾಟಕ ಮಾಧ್ಯಮ ವಕ್ತಾರರಾಗಿ ರವೀಂದ್ರನಾಥ ಕೆ ತೋಟದ ನೇಮಕ 

         ಕುಕನೂರು:-8 ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಹಾಗೂ ರಾಷ್ಟ್ರೀಯ ಅಧ್ಯಕ್ಷ ಡಾ. ಬಿ ಎಸ್ ಪಾಟೀಲ್ (ನಾಗರಾಳ ಹುಲಿ) ಅವರ ಸಲಹೆ ಮೇರೆಗೆ ಜಿಲ್ಲೆಯ ಕುಕನೂರ ತಾಲೂಕಿನ ಮಂಗಳೂರು ಗ್ರಾಮದ ರವೀಂದ್ರನಾಥ ಕೊಟ್ರ​‍್ಪ ತೋಟದ  ಅವರನ್ನು ಪಂಚ ಸೇನಾ ಕಲ್ಯಾಣ ಕರ್ನಾಟಕ ಮಾಧ್ಯಮ ವಕ್ತಾರರಾಗಿ ಆಯ್ಕೆ ಮಾಡಲಾಗಿದೆ.   

           ರವೀಂದ್ರನಾಥ ತೋಟದ ಅವರು ಚತುರ ಯುವ ನಾಯಕರಾಗಿದ್ದು, ಸಂಘಟನಾ  ದಕ್ಷತೆಯಲ್ಲಿ ವಿಶಿಷ್ಟ ಹೆಸರುಗಳಿಸಿದ್ದಾರೆ ಕಲ್ಯಾಣ ಕರ್ನಾಟಕ ಪಂಚಮಸಾಲಿ ಸಮಾಜದ ಜಿಲ್ಲೆ, ತಾಲೂಕು, ಗ್ರಾಮ ಮಟ್ಟದ ಘಟಕಗಳ ಯುವಕರಿಗೆ ಸಂಘಟನಾ ಚಟುವಟಿಕೆಗಳಲ್ಲಿ ಹೆಚ್ಚಿನ ಪ್ರೇರಣೆ ನೀಡುವಲ್ಲಿ ಮಹತ್ವದ ಪಾತ್ರ ವಹಿಸಲಿದ್ದಾರೆ ಎಂದು ಈ ನೇಮಕಾತಿಯನ್ನು ರಾಜ್ಯಾಧ್ಯಕ್ಷ ರುದ್ರಗೌಡ್ರ ವಿ. ಸೊಲಬನಗೌಡ್ರ ಅವರು ಅಧಿಕೃತವಾಗಿ ಘೋಷಿಸಿದ್ದು, ನೂತನ ನೇಮಕಾತಿಯ ಮೂಲಕ ಸಂಘಟನೆಯ ಬಲ ಹೆಚ್ಚುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.