ಆರ್‌ವ್ಹಿಆರ್ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನ ಹಾಗೂ ಗುರುವಂದನಾ ಕಾರ್ಯಕ್ರಮ
ರಾಯಬಾಗ 09: ಪಟ್ಟಣದ ಪ್ರತೀಷ್ಠತ ಶಿಕ್ಷಣ ಸಂಸ್ಥೆಯಾದ ಶಿಕ್ಷಣ ಪ್ರಸಾರಕ ಮಂಡಳದ ರಾಯಬಾಗ ವಿದ್ಯಾಲಯ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನ ಹಾಗೂ ಗುರುವಂದನಾ ಕಾರ್ಯಕ್ರಮ ಪಟ್ಟಣದ ರಾಹುಲ ಪ್ರಾಥಮಿಕ ಶಾಲೆಯ ಅವರಣದಲ್ಲಿ ಜರುಗಿತು. ನಿವೃತ್ ನ್ಯಾಯಾಧೀಶರಾದ ಬಿ.ಎಸ್. ನಾಯಕ್ ಅವರು ಕಾರ್ಯಕ್ರಮ ಕುರಿತು ಮಾತನಾಡಿ ಸ್ವಾತಂತ್ರ್ಯದ ನಂತರ ಈ ಭಾಗದಲ್ಲಿ ಅತಿದೊಡ್ಡ ಶಿಕ್ಷಣ ಕೇಂದ್ರವಾದ ಶಿಕ್ಷಣ ಪ್ರಸಾರಕ ಮಂಡಳನ್ನು ಮಾಜಿ ಸಚೀವರು ಸಂಸದರು ವ್ಹಿ. ಎಲ್ ಪಾಟೀಲ ಸ್ಥಾಪಿಸಿದರು. ಈ ಶಿಕ್ಷಣ ಸಂಸ್ಥೆಯಿಂದ ಈ ಭಾಗದಲ್ಲಿ ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಕ್ರಾಂತಿಯನ್ನು ಮಾಡಿದ್ದಾರೆ. ಒಳ್ಳೆಯ ಶಿಕ್ಷಣ ಸಂಸ್ಥೆಯಲ್ಲಿ ಕಲಿತವರು ಶಿಕ್ಷಣದ ಜೊತೆಗೆ ಸಂಸ್ಕಾರವಂತರಾಗಿ ಬೆಳೆಯುತ್ತಾರೆ ಅನ್ನುವುದಕ್ಕೆ ಇವತ್ತು ಇಲ್ಲಿ ಸೇರಿರುವ ಹಳೆಯ ವಿದ್ಯಾರ್ಥಿಗಳೇ ಸಾಕ್ಷಿ ಎಂದರು. ವ್ಹಿ. ಎಲ್ ಪಾಟೀಲ ಕಂಡ ಕನಸ್ಸುನ್ನು ವಿದ್ಯಾರ್ಥಿಗಳು ಯಶಸ್ವಿ ಜೀವನದ ಮೂಲಕ ನನಸ್ಸು ಮಾಡುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಮಲ್ಲಪ್ಪಾ ಅವಣ್ಣವರ, ಡಾ ಆಯ್ ಆಯ್. ಮುಲ್ಲಾ , ಡಾ ವಿವೇಕ ನಾರಗೌಡಾ , ಸಕಾರಾಮ ಕಾಂಬಳೆ , ಡಾ. ಎಮ್. ಬಿ ಕುಂಬಾರ , ಬಿ.ಎಮ್.ಪಾಟೀಲ ಅತಿಥಿಗಳಾಗಿ ಆಗಮಿಸಿದ್ದರು. ಅಬ್ದುಲಮುನಾಫ್ ಮುಲ್ಲಾ , ಸುರೇಶ ಕುಂಬಾರ , ಎಸ್ ಜಿ.ಡಾಂಗೆ , ಅನಿಲ ಕಾಳಗೆ , ಸಾಯಿನಾಥ ಗಾಯಕವಾಡ , ಸತ್ಯಪ್ಪಾ ಹವಾಲ್ದಾರ , ಸಂಬಾಜಿ ಹೈಬತ್ತಿ , ಕೆ.ಆಯ್.ಪಾಟೀಲ , ದಶರಥ ಶೆಟ್ಟಿ , ಮಹಾದೇವ ಹೊಂಕಳೆ , ಡಾ ಆಯ್. ಆಯ್. ಮುಲ್ಲಾ , ಸತ್ಯಕುಮಾರ ಬಿರಾಜ ,ಬಾಳಕೃಷ್ಣ ಜಂಬಗಿ , ಬಾಳು ಭೆಂಡೆ , ಹನುಮಂತ ಗುರವ , ಬಾಬುರಾವ ನಡೊನಿ, ಜಿ.ಎಸ್.ಬೆಕ್ಕೆರಿ , ವಾಯ ಎಸ್ ಬಂತೆ ನಿವೃತ್ತ ಶಿಕ್ಷಕರು ಉಪಸ್ಥಿತರಿದ್ದರು. ಸುಮಾರು 1970 ರಿಂದ ಶಿಕ್ಷಣ ಪ್ರಸಾರಕ ಮಂಡಳದ ರಾಯಬಾಗ ವಿದ್ಯಾಲಯದಲ್ಲಿ ಕಲಿಸಿದ ಗುರುಗಳಿಗೆ ಸತ್ಕಾರ ನೆರವೇರಿತು. ನೂರಾರು ವಿದ್ಯಾರ್ಥಿಗಳು ಹಳೆಯ ಗೆಳೆತನವನ್ನು ನೆನಪಿಸಿಕೊಂಡರು. ಸಾತಪ್ಪಾ ಚೌಗಲಾ ನಿರೂಪಿಸಿ ವಂದಿಸಿದರು.09 ರಾಯಬಾಗ : 1ಪೊಟೊ ಶಿರ್ಷಿಕೆ: ಪಟ್ಟಣದ ಶಿಕ್ಷಣ ಪ್ರಸಾರಕ ಮಂಡಳದ ಹಳೆ ವಿದ್ಯಾರ್ಥಿಗಳ ಸ್ನೆಹ ಸಮ್ಮೆಳ್ಳನ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ಪಟ್ಟಣದ ರಾಹುಲ ಶಾಲೆ ಅವರಣದಲ್ಲಿ ಉದ್ಘಾಟಿಸುತ್ತಿರುವ ಗಣ್ಯರು. 2) ಪಟ್ಟಣದ ಶಿಕ್ಷಣ ಪ್ರಸಾರಕ ಮಂಡಳದ ಹಳೆ ವಿದ್ಯಾರ್ಥಿಗಳ ಸ್ನೆಹ ಸಮ್ಮೇಳನದಲ್ಲಿ ಗುರುಗಳಿಗೆ ಸತ್ಕರಿಸುತ್ತಿರುವ ಗಣ್ಯರು.