ಲೋಕದರ್ಶನ ವರದಿ
ಬೆಳಗಾವಿ 03: ಕಣಬರಗಿ ಗ್ರಾಮದಲ್ಲಿನ ಚನ್ನಮ್ಮ ವೃತ್ತದಲ್ಲಿ ಕನ್ನಡ ರಾಜ್ಯೋತ್ಸವದ ನಿಮಿತ್ತವಾಗಿ ಕನ್ನಡಾಂಬೆತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಿ ನಗರ ಸೇವಕಿ ಸುಚೇತಾ ಅಂಜನಕುಮಾರ ಗಂಡಗುದರಿ ಮಾತನಾಡಿದ ಮುಂಬರುವ ದಿನದಲ್ಲಿ ಕಣಬರಗಿಯ ರಾಣಿಚನ್ನಮ್ಮ ವೃತ್ತದಲ್ಲಿ 20 ಲಕ್ಷ ವರೆಗಿನ ಚನ್ನಮ್ಮ ಮೂತರ್ಿ ಪ್ರತಿಷ್ಠಾನ ಮಾಡಲಾಗುವುದು.
ನ.1 ರಂದು ಅಷ್ಟೇ ಕನ್ನಡ ರಾಜ್ಯೋತ್ಸವ ಆಚರಣೆ ಮಾಡದೇ ವರ್ಷ ವಿಡಿ ಪೂತರ್ಿ ಕನ್ನಡತಾಯಿ ಭುವನೇಶ್ವರಿ ನೆನೆದು ಕನ್ನಡ ಭಾಷೆಯನ್ನು ಬೆಳೆಸುವ ಮಕ್ಕಳು ನಾವಾಗಬೇಕು ಎಂದರು.
ಈ ಸಂದರ್ಭದಲ್ಲಿ ಸಮಾಜ ಸೇವಕರು ಪವನ ಪಾಟೀಲ, ಬಾಬು ಜಡಗಿ, ಅಂಜನ ಕುಮಾರ ಗಂಡಗುದರಿ, ಪ್ರಕಾಶಡುಮ್ಮ ನಾಯಕ, ರಾಜು ಮೀಸಿ, ಜಗದೀಶ ಜಡಗಿ, ದ್ವಾರಕೀಶ ಬಾಳಿಗಡ್ಡಿ ಸಮಾಜಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.