ಪುಟ್ಟಪ್ಪ ಪಾಟೀಲರವರ 5ನೇ ಪುಣ್ಯಸ್ಮರಣೆ ನಿಮಿತ್ತ ಆಯೋಜಿಸಿದ್ದ ಪುತ್ಥಳಿ ಮಾಲಾರೆ್ಣ ಕಾರ್ಯಕ್ರಮ
ಧಾರವಾಡ 16 :ನಾಡಿನ ಧೀಮಂತ ವ್ಯಕ್ತಿ, ನಾಡೋಜ ಪಾಟೀಲ ಪುಟ್ಟಪ್ಪನವರು ನಾಡು ಮತ್ತು ಭಾಷೆಯನ್ನು ಕಟ್ಟಿಕೊಡುವಲ್ಲಿ ಇಡೀ ತಮ್ಮ ಬದುಕನ್ನೇ ಸವಿಸಿದವರು. ಅವರ ಸೇವೆ ಮತ್ತು ನಾಡಿಗೆ ನೀಡಿದ ಕೊಡುಗೆಗೆ ಸಂಬಂಧಿಸಿದಂತೆ ಸಮಾಜ ಮತ್ತು ಸರಕಾರ ಸೂಕ್ತವಾದ ಗೌರವವನ್ನು ನೀಡದೆ ಇರುವುದು ಖೇದಕರ ಸಂಗತಿಎಂದು ಬಸವ ಟಿವಿಯ ಮುಖ್ಯಸ್ಥ ಡಾ.ಸಿದ್ಧು ಯಾಪಲ್ ಪರ್ವಿ ನುಡಿದರು.ಕರ್ನಾಟಕ ವಿದ್ಯಾವರ್ಧಕ ಸಂಘವು ನಾಡೋಜ ಡಾ.ಪಾಟೀಲ ಪುಟ್ಟಪ್ಪನವರ 5ನೇ ಪುಣ್ಯಸ್ಮರಣೆ ನಿಮಿತ್ತ ಆಯೋಜಿಸಿದ್ದ ಪಾಪು ಪುತ್ಥಳಿ ಮಾಲಾರೆ್ಣ ಕಾರ್ಯಕ್ರಮದಲ್ಲಿ ಮಾಲಾರೆ್ಣ ಮಾಡಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಂಕರ ಹಲಗತ್ತಿ, ಶಂಕರ ಕುಂಬಿ, ಶಂಕರ ಬೆನ್ನೂರ ದಂಪತಿಗಳು, ವಸು ವತ್ಸಲೆ, ಶಿ.ಮ.ರಾಚಯ್ಯನವರ, ನಿಂ.ಶಿ. ಕಾಶಪ್ಪನವರ, ಎಸ್.ಆಯ್.ಭಾವಿಕಟ್ಟಿ, ಸಿಬ್ಬಂದಿ ವರ್ಗ ಸೇರಿದಂತೆ ಮುಂತಾದವರಿದ್ದರು.