ಲೋಕದರ್ಶನ ವರದಿ
ಶಿಗ್ಗಾವಿ 18: ತಾಲೂಕಿನ ಹಿರೇಮಣಕಟ್ಟಿ ಗ್ರಾಮದ ಮುರುಘೇಂದ್ರ ಮಠದ ವೀರಭದ್ರ ಮಹಾಶಿವಯೋಗಿಗಳ 25ನೇ ವರ್ಷದ ಪುಣ್ಯಸ್ಮರಣೋತ್ಸವ ಸಾನ್ನಿಧ್ಯ ವಹಿಸಿದ್ದ ಉಜ್ಜಯಿನಿ ಪೀಠದ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಸ್ವಾರ್ಥ ತೊರೆದು ನಿಸ್ವಾರ್ಥ ಮನೋಭಾವ ಬೆಳೆಸಿಕೊಳ್ಳಬೇಕು. ಸಂಪತ್ತನ್ನು ಸಾಮಾಜಿಕ ಹಾಗೂ ಧಾಮರ್ಿಕ ಕಾರ್ಯಕ್ರಮಗಳಿಗೆ ಬಳಸಿದರೆ ದೇವರು ಮೆಚ್ಚುತ್ತಾನೆ. ಜೊತೆಗೆ ಶುದ್ಧ ಮನಸ್ಸಿನಿಂದ ದೇವರ ಪೂಜೆ ಮಾಡಿದರೆ ಸಕಲ ಸಂಪತ್ತುಗಳಿಸಲು ಸಾಧ್ಯ ಎಂದರು.
ಇತ್ತೀಚಿನ ದಿನಗಳಲ್ಲಿ ಸಂಸ್ಕಾರ ಮನೋಭಾವ ಕ್ಷೀಣಿಸುತ್ತಿದೆ. ಇದೇ ಕಾರಣಕ್ಕೆ ಸಮಾಜದಲ್ಲಿ ಅಶಾಂತಿ ಹಾಗೂ ಅಜ್ಞಾನ ಹೆಚ್ಚುತ್ತಿದೆ. ಧರ್ಮ ಗುರುಗಳ ಸತ್ಸಂಗದಿಂದ ಶಾಂತಿ ಹಾಗೂ ನೆಮ್ಮದಿಯುತ ಜೀವನ ಕಾಣಲು ಸಾಧ್ಯ. ಈ ಹಿನ್ನೆಲೆಯಲ್ಲಿ ಮಠಾಧೀಶರ, ಧರ್ಮಗುರುಗಳ ಹಾಗೂ ದಾರ್ಶನಿಕರ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಇಂದಿನ ಅವಶ್ಯ ಎಂದರು.
ಪುಣ್ಯಸ್ಮರಣೋತ್ಸವ ಅಂಗವಾಗಿ ಕತರ್ೃ ಗದ್ದುಗೆಗೆ ರುದ್ರಾಭಿಷೇಕ, 25 ದಂಪತಿಗಳಿಂದ 25 ಹರಗುರು ಚರಮೂತರ್ಿಗಳಿಗೆ ಪಾದಪೂಜೆ, ಹುಬ್ಬಳ್ಳಿ ನವನಗರದ ಜಗದ್ಗುರು ಪಂಚಾಚಾರ್ಯರ ಶಿವಯೋಗ ಪುಣ್ಯಾಶ್ರಮದ ಷ.ಬ್ರ. ಶಿವಾಚಾರ್ಯ ಮಹಾಸ್ವಾಮಿಗಳಿಂದ ಆಧ್ಯಾತ್ಮಿಕ ಪ್ರವಚನ ನೆರವೇರಿತು. ಬಿಸನಳ್ಳಿ ಗ್ರಾಮದ ಜಂಗಮವಟುಗಳು ಶ್ಲೋಕ ಪಠಿಸಿದರು.
ಮುರುಘೇಂದ್ರ ಮಠದ ಷ.ಬ್ರ. ವಿಶ್ವಾರಾಧ್ಯ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿದ್ದರು. ಮುಕ್ತಿಮಂದಿರದ ವೀರಮುಕ್ತಿಮುನಿ ಶಿವಾಚಾರ್ಯರು, ಬಂಕಾಪುರದ ರೇವಣಸಿದ್ದೇಶ್ವರ ರಾಣೆಬೆನ್ನೂರಿನ ಶಿವಯೋಗಿ ಶಿವಾಚಾರ್ಯರು, ಶಿಗ್ಗಾವಿಯ ಶ್ರೀಸಂಗನಬಸವ ಮಹಾಸ್ವಾಮಿಗಳು, ಹೋತನಹಳ್ಳಿಯ ಶಂಭುಲಿಂಗ ಶಿವಾಚಾರ್ಯರು, ನೆಗಳೂರಿನ ಗುರುಶಾಂತೇಶ್ವರ ಶಿವಾಚಾರ್ಯರು, ಅಮ್ಮಿನಬಾವಿಯ ಶಾಂತಲಿಂಗ ಶಿವಾಚಾರ್ಯರು, ಮಂತ್ರೋಡಿಯ ಸಿದ್ಧರಾಮೇಶ್ವರ ಶಿವಾಚಾರ್ಯರು, ಹಾವೇರಿಯ ರುದ್ರಚನ್ನಮಲ್ಲಿಕಾಜರ್ುನ ಶಿವಾಚಾರ್ಯರು, ಕಡೇನಂದಿಹಳ್ಳಿಯವೀರಭದ್ರ ಶಿವಾಚಾರ್ಯರು, ಕರ್ಜಗಿಯ ಶಿವಯೋಗಿ ಶಿವಾಚಾರ್ಯರು, ಸುಳ್ಳದ ಸಿದ್ಧರಾಮೇಶ್ವರ ಶಿವಾಚಾರ್ಯರು, ಕಲಘಟಗಿಯ ರೇವಣಸಿದ್ಧ ಶಿವಾಚಾರ್ಯರು, ಹೂವಿನಶಿಗ್ಲಿಯ ಚನ್ನವೀರ ಮಹಾಸ್ವಾಮಿಗಳು, ಬಳ್ಳಾರಿಯ ಕಲ್ಯಾಣ ಸ್ವಾಮಿಗಳು, ಕುಂದಗೋಳದ ಬಸವಣ್ಣಜ್ಜನವರ ಸಮ್ಮುಖ ವಹಿಸಿದ್ದರು.