ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭ

ಲೋಕದರ್ಶನ ವರದಿ

ತಾಳಿಕೋಟೆ: ಪಟ್ಟಣದ ವಾರ್ಡ ನಂ. 1 ಆಶ್ರಯ ಬಡಾವಣೆ ಹಾಗೂ ವಾರ್ಡ ನಂ. 3 ರಲ್ಲಿ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಪುರಸಭೆ ಅಧ್ಯಕ್ಷೆ ಅಕ್ಕಮಹಾದೇವಿ ಕಟ್ಟಿಮನಿ ಅವರು ಪ್ರಾರಂಭಗೊಳಿಸಿದರಲ್ಲದೇ ನಿರ್ವಹಣೆಗೆ ಸಿಬ್ಬಂದಿ ನೇಮಿಸುವದರ ಜೊತೆಗೆ ಜನತೆಗೆ ಕುಡಿಯುವ ನೀರಿನ ತೊಂದರೆಯಾಗದಂತೆ ನಿಗಾವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಈ ಸಮಯದಲ್ಲಿ ಮಾತನಾಡಿದ ಅಧ್ಯಕ್ಷೆ ಕಟ್ಟಿಮನಿ ಅವರು ಪಟ್ಟಣದ ಜನರಿಗೆ ಶುದ್ದ ಕುಡಿಯುವ ನೀರು ಒದಗಿಸಬೇಕೆಂಬ ಉದ್ದೇಶದೊಂದಿಗೆ ಈ ಘಟಕಗಳನ್ನು ಪ್ರಾರಂಬಿಸಲಾಗಿದೆ ಮುಂದಿನ ಹಂತದಲ್ಲಿ ಈ ಶುದ್ದ ಕುಡಿಯುವ ನೀರಿನ ಘಟಕಗಳನ್ನು ವಿಸ್ತರಿಸುವ ಯೋಜನೆಯನ್ನು ಹೊಂದಲಾಗಿದೆ ಪ್ರಾಯೋಗಿಕವಾಗಿ ಈಗ ಪಟ್ಟಣದ ಮೂರುಕಡೆಗಳಲ್ಲಿ ಘಟಕಗಳು ಕಾರ್ಯನಿರ್ವಹಿಸಲಿವೆ ಜನತೆಯ ಬೇಡಿಕೆಯಂತೆ ಹೆಚ್ಚಿಗೆ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಪ್ರಾರಂಬಿಸಲಾಗುವದೆಂದರು.

ಈ ಸಮಯದಲ್ಲಿ ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭುಗೌಡ ಮದರಕಲ್ಲ, ಅಣ್ಣಾಜಿ ಜಗತಾಪ, ಮಲ್ಲಿಕಾಜರ್ುನ ಪಟ್ಟಣಶೆಟ್ಟಿ, ಮುಖ್ಯಾಧಿಕಾರಿ ಎ.ಬಿ.ಕಲಾಲ, ಎಸ್.ಎ.ಘತ್ತರಗಿ, ಮೊದಲಾದವರು ಇದ್ದರು.