ಪುರಂದರದಾಸರ ಆರಾಧನಾ ಮಹೋತ್ಸವ - 2025 ಉದ್ಧಾಟನೆ
ಧಾರವಾಡ 30: ಇಲ್ಲಿಯ ದೇಸಾಯಿ ಗಲ್ಲಿಯ ವಿಠ್ಠಲ ಮಂದಿರದ ಪುರಂದರ ಮಂಟಪದಲ್ಲಿ ಪುರಂದರದಾಸರ ಪೂರ್ವಾರಾಧನೆ ನಿಮಿತ್ತ ದೀಪ ಬೆಳಗಿಸುವಸದರೊಂದಿಗೆ ಡಾ. ಶ್ಯಾಮಸುಂದರ ಬಿದರಕುಂದಿ ಅವರು ಉದ್ಭಾಟನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಾ ಪುರಂದರ ಸಾಹಿತ್ಯ ಹಾಗೂ ದಾಸಸಾಹಿತ್ಯದಲ್ಲಿ ರಚಿಸಿರುವ ಹಾಡುಗಳ ವಿಮರ್ಶಾತ್ಮಕ ತಿಳಿವಳಿಕೆ ಮೂಡಿಸಿದರು. ಅತಿಥಿಗಳಾಗಿ ಡಾ. ಶ್ರೀಧರ ಕುಲಕರ್ಣಿ ಹಾಗೂ ದತ್ತ ನೀರಲಗಿ ಅವರು ಬಹುಮಾನಗಳನ್ನು ವಿತರಿಸಿದರು. 20 ಭಜನಾ ಮಂಡಳಿಗಳು ಭಾಗವಹಿಸಿ ಹರಿದಾಸರು ರಚಿಸಿದ ವಿನಾಯಕನ ಹಾಡುಗಳನ್ನು ಸ್ಪರ್ಧೆಯಲ್ಲಿ ಪ್ರಸ್ತುತಪಡಿಸಿ ಶೋಭೆ ತಂದರು. ಸ್ಪರ್ಧೆಯಲ್ಲಿ ಮಾಳಮಡ್ಡಿಯ ಮಿತ್ರವಿಂದಾ ಭಜನಾ ಮಂಡಳಿ ಪ್ರಥಮ ಬಹುಮಾನ ಪಡೆದು ಗುರು ಪುರಂದರ ವಿಠ್ಠಲ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ದ್ವಿತೀಯ ಬಹುಮಾನವನ್ನು ಉಡುಪಿ ಕೃಷ್ಣ ಭಜನಾ ಮಂಡಳಿ ಪಡೆಯಿತು. ತೃತೀಯ ಬಹುಮಾನವನ್ನು ರುಕ್ಮಿಣೀ ಪಾಂಡುರಂಗ ಭಜನಾ ಮಂಡಳಿ, ಕಾಮನಕಟ್ಟಿ ಮತ್ತು ಅಂಜನಾ ಭಜನಾ ಮಂಡಳಿ, ಹನುಮಂತನಗರ ಹಂಚಿಕೊಂಡವು. ಸಮಾಧಾನಕರ ಬಹುಮನವನ್ನು ಅಮೃತ, ಓಂಕಾರ, ಮಂದಸ್ಮಿತ ಭಜನಾ ಮಂಡಳಿಗಳು ಪಡೆದುಕೊಂಡವು. ಕಾರ್ಯಕ್ರಮದಲ್ಲಿ ಎಲ್ಲ ಭಜನಾಮಂಡಳಿಗಳು ವಿನಾಯಕನ ಹರಿದಾಸರು ರಚಿಸಿದ ಹೊಸ ಹಾಡುಗಳನ್ನು ಪ್ರಸ್ತುತಪಡಿಸಿ ಕಾರ್ಯಕ್ರಮಕ್ಕೆ ಶೋಭೆ ತಂದರು. ಅತಿಥಿ ಹಾಗೂ ನಿರ್ಣಾಯಕರಾಗಿ ಬಂದ ಹುಬ್ಬಳ್ಳಿಯ ಡಾ. ಗಾಯತ್ರಿ ದೇಶಪಾಂಡೆ, ಶೃತಿ ಕುಲಕರ್ಣಿ, ರಾಧಾ ಶ್ಯಾಮರಾವ್ ಹಾಗೂ ಅನುರಾಧಾ ಕುಲಕರ್ಣಿ ಸಾಹಿತಿಗಳು ಹಾಗೂ ಸಂಗೀತಗಾರರು ಭಾಗವಹಿಸಿ ಯಶಸ್ವಿಗೊಳಿಸಿದರು. ಡಾ. ಶ್ಯಾಮಸುಂದರ ಬಿದರಕುಂದಿಯವರು ನಾಲ್ಕು ಜನ ಅತಿಥಿಗಳಿಗೆ ಗೌರವ ಸನ್ಮಾನಿಸಿದರು. ಕೊನೆಯಲ್ಲಿ ಪಂ. ಸುರೇಶಾಚಾರ್ಯ ರಾಯಚೂರ ಪುರಂದರದಾಸರ ಹಾಡುಗಳಲ್ಲಿ ಅಡಕವಾಗಿರುವ ಸಂಗತಿಗಳನ್ನು ಎಳೆ ಎಳೆಯಾಗಿ ಬಿಡಿಸಿ ಹೇಳಿ ಭಕ್ತಸಮೂಹವನ್ನು ತಲ್ಲಣಗೊಳಿಸಿದರು. ಕಾರ್ಯಕ್ರಮವನ್ನು ಸಾಹಿತಿ ಸುರೇಶ ಕುಲಕಣಿಯವರು ಅಚ್ಚುಕಟ್ಟಾಗಿ ನಿರ್ವಹಿಸಿದರು. ಗೌ. ಅಧ್ಯಕ್ಷ ಎಸ್. ಬಿ. ಗುತ್ತಲ ಅವರು ಪ್ರಾಸ್ತಾವಿಕ ಭಾಷಣವನ್ನು ಮಾಡಿದರು ಮತ್ತು ಎಲ್ಲರನ್ನೂ ಸ್ವಾಗತಿಸಿದರು. ಹಾಗೂ ಕಾರ್ಯದರ್ಶಿ ಕೆ. ಆರ್. ದೇಸಾಯಿಯವರು ವಂದನಾರೆ್ಣಯನ್ನು ಮಾಡಿದರು. ಸಭೆಯಲ್ಲಿ ಆರ್. ಬಿ. ಗುತ್ತಲ, ವಿವೇಕ ಏರಿ, ಅಂಬೇಕರ ಆಚಾರ್ಯ, ರಮೇಶ ಜಮಾದಾರ, ಎಸ್. ಬಿ. ದ್ವಾರಪಾಲಕ ದಂಪತಿಗಳು ಮತ್ತು ಇನ್ನಿತರರು ಉಪಸ್ಥಿತರಿದ್ದರು.