ಜಿಲ್ಲಾ ಮಕ್ಕಳ ರಕ್ಷಣಾ ಘಟಕಪಾಲನೆ ಮತ್ತು ಪೋಷಣೆಗೆ ಒಳಪಡವ ಮಕ್ಕಳಿಗೆ ಶಿಷ್ಯವೇತನ ಹಾಗೂ ಶೈಕ್ಷಣಿಕ ಕಿಟ್ ವಿತರಣಾ ಕಾರ್ಯಕ್ರಮ
ಧಾರವಾಡ 31: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಹಾಗೂ ಬೆಂಗಳೂರು ಆಕ್ಸಲರೇಟ ಇಂಡಿಯಾ ಪೌಂಡೆಶನ್ ಟ್ರಸ್ಟ, ಅಹಾನ ಸಿಸ್ಟೆಮ್ ಮತ್ತು ಸೋಲುಷನ್ ಪರವೆಟ್ ಲಿಮಿಟೆಡ್ ಸುಪ್ರಜಿತ್ ಪೌಂಡೆಶನ್ ಇವರ ಸಂಯುಕ್ತಾಶ್ರಯದಲ್ಲಿ ಪಾಲನೆ ಮತ್ತು ಪೋಷಣೆಗೆ ಒಳಪಡವ ಮಕ್ಕಳಿಗೆ ಶಿಷ್ಯವೇತನ ಹಾಗೂ ಶೈಕ್ಷಣಿಕ ಕಿಟ್ ವಿತರಣಾ ಕಾರ್ಯಕ್ರಮವನ್ನು ನಿನ್ನೆ (ಜ.30) ರಂದು ಸರ್ಕಾರಿ ನಿವೃತ್ತ ನೌಕಕರ ಭವನದಲ್ಲಿ ಹಮ್ಮಿಕೊಳಲಾಗಿತ್ತು.
ಶಾಲಾ ಶಿಕ್ಷಣ ಇಲಾಖೆಯ ಉಪಯೋಜನಾ ಸಂಯೋಜಕ ಎಸ್. ಎಮ್. ಹುಡೇದಮನಿ ಅವರು ಕಾರ್ಯಕ್ರಮವನ್ನು ಉದ್ಟಾಟಿಸಿ, ಮಾತನಾಡಿದರು. ಮಾ ಕಾ ಗೋದ ಪೇಹಲಾ ಪಾಠ ಶಾಲ್ (ತಾಯಿಯ ಮಡಿಲು ಮೊದಲ ಪಾಠ ಶಾಲೆ) ಎಂಬ ನಾನ್ನುಡಿಯೊಂದಿಗೆ ಮಕ್ಕಳು ಯಾವುದೇ ತಪ್ಪು ಮಾಡಿದಾಗ ಕುಟುಂಬದಲ್ಲಿರುವ ಪಾಲಕರು ಹಾಗೂ ಪೋಷಕರು ಮಕ್ಕಳಿಗೆ ತಿದ್ದಿ ಬುದ್ದು ಹೇಳವುದರ ಮೂಲಕ ಸಮಾಜದ ಉತ್ತಮ ಪ್ರಜೆಯನ್ನಾಗಿ ಮಾಡಲು ಸಾದ್ಯ ಎಂದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನೀತಾ ವಾಡಕರ ಅವರು ಸರ್ಕಾರದಿಂದ ಮಕ್ಕಳಿಗಾಗಿ ಇರುವ ವಿವಿಧ ಯೋಜನೆಗಳ ಕುರಿತು ಹಾಗೂ ಮಕ್ಕಳಿಗಾಗಿ ಇರುವ ವಿವಿಧ ಕಾನೂನುಗಳ ಕುರಿತು ಮಕ್ಕಳಿಗೆ ವಿವರಿಸಿದರು. ಮಕ್ಕಳು ಯಾವುದೇ ಸಂಕಷ್ಟಪರಿಸ್ಥಿಯಲ್ಲಿದ್ದಾಗ ಮಕ್ಕಳ ಸಹಾಯವಾಣಿ 1098/112 ಗೆ ಕರೆ ಮಾಡಿ ತಿಳಿಸಿ, ಮಕ್ಕಳ ರಕ್ಷಣೆಮಾಡುವಲ್ಲಿ ಎಲ್ಲರೂ ಕೈಜೋಡಿಸೋಣ ಎಂದು ಮಾತನಾಡಿದರು.
ಕಾರ್ಯಕ್ರಮದ ಅತಿಥಿ ಸಿವಿಲ್ ಕಾಂಟ್ರಕ್ಟರ್ ರಾಜು ಎಚ್. ಎಮ್. ಅವರು ಮಕ್ಕಳೇ ಈ ದೇಶದ ಸಂಪತ್ತು ಶಿಕ್ಷಣದ ಜೊತೆಗೆ ಮಕ್ಕಳಿಗೆ ಸಂಸ್ಕಾರವನ್ನು ನೀಡಬೇಕು. ಕ್ರೀಡೆಯಲ್ಲಿ ಮಕ್ಕಳನ್ನು ತೊಡಗಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಬೆಂಗಳೂರು ಆಕ್ಸಲರೇಟ ಇಂಡಿಯಾ ಪೌಂಡೆಶನ್ ಟ್ರಸ್ಟನ ಕಾರ್ಯದರ್ಶಿ ಸಿ. ವಿ. ಕಾಮತ್ ಅವರು ಮಾತನಾಡಿ ಎಐಎಫ್‌ಟಿ ಸಂಸ್ಥೆ ಕಾರ್ಯ ಚಟುವಟಿಕೆ, ನಡೆದು ಬಂದ ಹಾದಿ ಬಗ್ಗೆ ಮಕ್ಕಳಿಗೆ ಉತ್ಸಾಹ ಭರಿತವಾಗಿ ತಿಳಿಸಿದರು. ಎಐಎಫ್‌ಟಿ ಸಂಸ್ಥೆಯಿಂದ ಒದಗಿಸಿದ ಸಹಾಯಪಡೆದ ಮಕ್ಕಳು ಮುಂದೆ ತಾವು ಒಳ್ಳೆಯ ಸ್ಥಾನದಲ್ಲಿ ಇದ್ದಾಗ ನಿಮ್ಮಂತಹ ಮಕ್ಕಳಿಗೆ ಅನುಕೂಲ ಮಾಡಿ ಹಾಗೂ ತಾನು ನೆಟ್ಟ ಗಿಡ ಹೆಮ್ಮರವಾಗಿ ಬೆಳೆದರೂ ನನಗೆ ಅದರ ನೆರಳು ಸಿಗದಿರಲು ಅದು ಬೇರೋಬ್ಬರಿಗೆ ನೆರಳಾಗಲಿ ಎಂದು ಸಾಲು ಮರದ ತಿಮ್ಮಕ್ಕನ ಕಥೆಯ ಸ್ವಾರಸ್ಯವನ್ನು ಹೇಳುವುದರ ಮೂಲಕ ಮಕ್ಕಳಿಗೆ ಹಾಗೂ ಪಾಲಕರಿಗೆ ತಿಳಿಸಿದರು.
ಮಹಮದ್‌ಅಲಿ ತಹಶೀಲ್ದಾರ ಅವರು ಕಾರ್ಯಕ್ರಮದಲ್ಲಿ ಮಕ್ಕಳಿಗಾಗಿ ಇರುವ ವಿವಿಧ ಕಾನೂನುಗಳಾದ ಬಾಲ್ಯವಿವಾಹ ನಿಷೇಧ ಕಾಯ್ದೆ, ಬಾಲನ್ಯಾಯ ಕಾಯ್ದೆ, ಬಾಲಕಾರ್ಮಿಕ ನಿಷೇಧ ಕಾಯ್ದೆ ಕುರಿತು ಉದಾಹಣೆಗಳ ಮೂಲಕ ಅರಿವು ನೀಡಿದರು. ಶ್ವೇತಾ ಕಿಲ್ಲೇದಾರ ಅವರು ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ-2012 ಕುರಿತು ಮನ ಮುಟ್ಟುವಂತೆ ಅರಿವು ಮೂಡಿಸಿದರು. ಆಕ್ಸಲರೇಟ ಇಂಡಿಯಾ ಪೌಂಡೆಶನ್ ಟ್ರಸ್ಟನಿಂದ ಮಕ್ಕಳಿಗೆ ಕಿಟ್ ಹಾಗೂ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಚಕ್ ವಿತರಣೆ ಮಾಡಿದರು.
ಕಾರ್ಯಕ್ರಮದಲ್ಲಿ ಆಕ್ಸಲರೇಟ ಇಂಡಿಯಾ ಪೌಂಡೆಶನ್ ಟ್ರಸ್ಟ, ಸಂಸ್ಥೆಯ ಮೆಂಟರ ಆದಂತಹ ರವೀಂದ ಎನ್, ಪ್ರಕಾಶ ಹಳಿಯಾಳ, ಪ್ರಸಾದ ಕಲಜೀ, ರವೀಂದ್ರ ಜೋಷಿ, ಅಶೋಕ ನಾಯಕ್, ಎಸ್. ಜಿ. ಚಿಕ್ಕೂರಮಠ, ವಿಶಾಲಾ ಕಾನಪೇಟ, ಚೇತನ, ಚಂದ್ರು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳು ಭಾಗವಹಿಸಿದರು.
ಕಾರ್ಯಕ್ರಮಕ್ಕೆ ರಕ್ಷಣಾಧಿಕಾರಿ (ಸಾಂಸ್ಥಿಕ) ಅಶ್ವಿನಿ ಉಳ್ಳಿಗೇರಿ ಅವರು ಸ್ವಾಗರಿಸಿದರು. ಕ್ಷೇತ್ರ ಕಾರ್ಯಕರ್ತ ಮಹಮದ್ ಅಲಿ ತಹಶಿಲ್ದಾರ ಅವರು ಕಾರ್ಯಕ್ರಮ ನಿರೂಪಿಸಿದರು. ಶ್ವೇತಾ ಕಿಲ್ಲೇದಾರ ಅವರು ವಂದಿಸಿದರು.