ಪಂಜಾಬಿ ಪಾಪ್ ಗಾಯಕ ದಲೆರ್ ಮೆಹಂದಿ ಬಿಜೆಪಿ ಸೇರ್ಪಡೆ


ನವದೆಹಲಿ ಏ 26  ಬಿಜೆಪಿಗೆ ಸಾಲು ಸಾಲಾಗಿ ಖ್ಯಾತನಾಮರ ಸೇರ್ಪಡೆ ಮುಂದುವರೆದಿದ್ದು, ಪಂಜಾಬಿ ಪಾಪ್ ಗಾಯಕ ದಲೆರ್ ಮೆಹಂದಿ ಶುಕ್ರವಾರ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.  

ರಾಜಧಾನಿಯಲ್ಲಿ ನಡೆದ ಸೇರ್ಪಡೆ ಕಾರ್ಯಕ್ರಮದಲ್ಲಿ ದೆಹಲಿಯ ಎಲ್ಲ ಏಳು ಬಿಜೆಪಿ ಅಭ್ಯಥರ್ಿಗಳಾದ ಹರ್ಷವರ್ಧನ್ (ಚಾಂದನಿ ಚೌಕ್), ಮನೋಜ್ ತಿವಾರಿ (ಈಶಾನ್ಯ ದೆಹಲಿ), ಪ್ರವೇಶ್ ವಮರ್ಾ (ಪಶ್ಚಿಮ ದೆಹಲಿ), ರಮೇಶ್ ಬಿದುರಿ (ದಕ್ಷಿಣ ದೆಹಲಿ), ಮೀನಾಕ್ಷಿ ಲೇಖಿ (ನವದೆಹಲಿ)  ಮಾಜಿ ಕ್ರಿಕೆಟ್ ಪಟು ಗೌತಮ್ ಗಂಭೀರ್ (ಪೂರ್ವ ದೆಹಲಿ), ಸೂಫಿ ಗಾಯಕ ರಾಜ್ ಹನ್ಸ್ (ವಾಯವ್ಯ ದೆಹಲಿ) ಉಪಸ್ಥಿತರಿದ್ದರು.  

ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಶ್ಯಾಮ್ ಜಾಜು ಹಾಗೂ ಕೇಂದ್ರ ಸಚಿವ ವಿಜಯ್ ಗೊಯಲ್ ಸಹ  ಉಪಸ್ಥಿತರಿದ್ದರು.  

ಇತ್ತೀಚೆಗಷ್ಟೇ ಖ್ಯಾತ ಬಾಲಿವುಡ್ ನಟ ಸನ್ನಿ ಡಿಯೋಲ್ ಅವರು ಬಿಜೆಪಿ ಸೇರ್ಪಡೆಯಾಗಿದ್ದರು. ಪಂಜಾಬ್ನ ಗುರುದಾಸ್ಪುರದಿಂದ ಬಿಜೆಪಿ ಅಭ್ಯರ್ಥಿ ಯಾಗಿ ಅವರು ಸ್ಪರ್ಧಿಸುತ್ತಿದ್ದಾರೆ . 

ಉತ್ಸಾಹಭರಿತ ನೃತ್ಯದಿಂದ ಹಾಗೂ ತಮ್ಮದೇ ವಿಶಿಷ್ಟ ಶೈಲಿಯ ಗಾಯನದಿಂದ ಪ್ರಖ್ಯಾತಿಯಾಗಿರುವ ದಲೆರ್ ಮೆಹಂದಿ, ಪಂಜಾಬ್ನ ಬಾಂಗ್ರಾ ನೃತ್ಯವನ್ನು ವಿಶ್ವಮಟ್ಟದಲ್ಲಿ ಜನಪ್ರಿಯಗೊಳಿಸಿದ್ದಾರೆ.