ಕ್ಷಯರೋಗ ತಡೆಗಟ್ಟಲು ಸಾರ್ವಜನಿಕರ ಸಹಕಾರ ಬಹಳ ಮುಖ್ಯ- ಮಂಜುನಾಥ ಉಪ್ಪಾರ
ಬ್ಯಾಡಗಿ 27 : ಕ್ಷಯರೋಗ ತಡೆಗಟ್ಟಲು ಸಾರ್ವಜನಿಕರ ಸಹಕಾರ ಬಹಳ ಮುಖ್ಯವೆಂದು ರೋಟರಿ ಗೌರ್ನರ್ ಮಂಜುನಾಥ ಉಪ್ಪಾರ ಹೇಳಿದರು.ಅವರು ಪಟ್ಟಣದ ಬಿ ಇ ಎಸ್ ಎಂ ಕಾಲೇಜಿನ ಸಭಾಭವನದಲ್ಲಿ ರೋಟರಿ ಕ್ಲಬ್, ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರ, ತಾಲೂಕ ಆರೋಗ್ಯ ಅಧಿಕಾರಿಗಳ ಕಚೇರಿ ಅವರ ಸಂಯುಕ್ತಾಶ್ರಯದಲ್ಲಿ ನಡೆದ ಕ್ಷಯ ರೋಗ ಮುಕ್ತ ಭಾರತ ಅಭಿಯಾನದ ಅಂಗವಾಗಿ ವಿಶ್ವ ಕ್ಷಯ ರೋಗ ದಿನದ ಪ್ರಯುಕ್ತ ತಾಲೂಕಿನ 65 ಕ್ಷಯರೋಗಿಗಳಿಗೆ ರೋಟರಿ ಕ್ಲಬ್ ವತಿಯಿಂದ ಪೌಷ್ಟಿಕಾಂಶಯುಕ್ತ ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಮಾಡಿ ಮಾತನಾಡಿದರು.ಕ್ಷಯ ರೋಗವು ಅಪೌಷ್ಠಿಕ ಆಹಾರ ಸೇವನೆಯಿಂದ ಹುಟ್ಟಿಕೊಳ್ಳುತ್ತದೆ.
ಆ ರೋಗ್ಯವೆಂಬುದು ಹದಗೆಟ್ಟರೆ ಮನುಷ್ಯನಲ್ಲಿ ಕ್ಷೀಣತೆ ಹೆಚ್ಚುತ್ತಾ ಸಾಗುತ್ತದೆ ಅಲ್ಲದೇ ಒಂದು ರೋಗವು ಇನ್ನೊಂದು ರೋಗವನ್ನು ಹುಟ್ಟುವಂತೆ ಮಾಡಿ ಮಾನಸಿಕವಾಗಿ ದೈಹಿಕವಾಗಿ ಶಕ್ತಿ ಕುಂದುತ್ತಾ ಸಾಗುತ್ತದೆ ಆದ್ದರಿಂದ ವಿದ್ಯಾರ್ಥಿಗಳು ದುಶ್ಚಟದಿಂದ ದೂರವಿರುವದರೊಂದಿಗೆ ಉತ್ತಮ ಪೌಷ್ಠಿಕ ಆಹಾರ ಸೇವನೆ ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆಯನ್ನು ನೀಡಿದರು.ಕಾಲೇಜಿನ ಪ್ರಾಚಾರ್ಯ ಡಾ. ಎಸ್ ಜಿ ವೈದ್ಯ ಮಾತನಾಡಿಪ್ರಸ್ತುತ ಕ್ಷಯರೋಗಿಗಳಿಗೆ ಸರಕಾರದ ವತಿಯಿಂದ ಉಚಿತವಾಗಿ ಓಷಧಿ ನೀಡಲಾಗುತ್ತಿದೆ. ವೈದ್ಯರ ಸಲಹೆ ಮೇರೆಗೆ ರೋಗಿಗಳು ಓಷಧಿಯನ್ನು ಪಡೆದರೆ ಸುಲಭವಾಗಿ ಗುಣಮುಖರಾಗ ಬಹುದು.ತಾಲೂಕಿನಲ್ಲಿ ಕ್ಷಯ ರೋಗ ಹೆಚ್ಚಾಗಲು ಅನಕ್ಷರತೆ, ತಪ್ಪು ಕಲ್ಪನೆ, ಮೂಢನಂಬಿಕೆ ಗಳಿಂದ ಚಿಕಿತ್ಸೆ ಪಡೆಯದೆ ದೂರ ಉಳಿದಿರುವುದು, ಕ್ಷಯರೋಗ ವಿರುವುದನ್ನು ಹೇಳಿಕೊಳ್ಳಲು ಹಿಂಜರಿ ಯುತ್ತಿರುವ ರೋಗಿಗಳನ್ನು ಗುರುತಿಸಿ ಅವರಿಗೆ ಅರಿವು ಮೂಡಿಸುವ ಅಗತ್ಯವಿದೆ. ಅವರೆಲ್ಲರನ್ನೂ ಚಿಕಿತ್ಸೆಗೆ ಒಳಪಡಿಸಿ ಗುಣ ಮುಖರನ್ನಾಗಿ ಮಾಡಬೇಕಿದೆ ಎಂದರು.ಕಾರ್ಯಕ್ರಮದಲ್ಲಿ ಡಾ. ನೀಲೇಶ ಎಂ ಎನ್, ಡಾ. ಕಾಂತೇಶ್ ಭಜಂತ್ರಿ,ಡಾ ಎಸ್ ಎನ್ ನಿಡಗುಂದಿ, ವಿನಾಯಕ ಜೆ ಪಿ, ವಿರೇಶ ಬಾಗೋಜಿ, ಕಿರಣ ಮಾಳೇನಹಳ್ಳಿ ಇದ್ದರು.