ಲೋಕದರ್ಶನ ವರದಿ
ಶಿರಹಟ್ಟಿ 03: ಸ್ವಚ್ಛ ಭಾರತಕ್ಕಾಗಿ ಹಸಿರು ನ್ಯಾಯಾಧೀಕರಣ ಯೋಜನೆಯಡಿಯಲ್ಲಿ ಪಟ್ಟಣದ ಅಭಿವೃದ್ದಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಸಾರ್ವಜನಿಕರು ಪಟ್ಟಣದ ಸ್ವಚ್ಛತೆ ಹಾಗೂ ಅಭಿವೃದ್ಧಿಗೆ ಸಹಕಾರ ನೀಡಿ ಪಟ್ಟಣದ ಅಭಿವೃದ್ದಿಯಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂದು ಪಪಂ ಮುಖ್ಯಾಧಿಕಾರಿ ಶೋಭಾ ಬೆಳ್ಳಿಕೊಪ್ಪ ಹೇಳಿದರು.
ಅವರು ಸ್ಥಳೀಯ ಮ್ಯಾಗೇರಿ ಓಣಿಯ 3ನೇ ವಾಡರ್್ನಲ್ಲಿ ಮಂಗಳವಾರ ಹಸಿರು ನ್ಯಾಯಾಧೀಕರಣದ ಆದೇಶದ ಹಿನ್ನೆಲೆ ಸ್ವಚ್ಚತಾ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡುತ್ತಾ, ಪಟ್ಟಣದ ಅಭಿವೃದ್ಧಿ ದೃಷ್ಠಿಯಿಂದ ಸಚ್ಛತೆ ಕಾಪಾಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದ್ದು, ಪಟ್ಟಣದ ಎಲ್ಲ ನಾಗರಿಕರು ಕಾಳಜಿಯಿಂದಾ ಹಸಿ-ಕಸ ಹಾಗೂ ಒಣ-ಕಸವನ್ನು ಬೇರೆ ಬೇರೆ ಮಾಡಿ ಪಟ್ಟಣ ಪಂಂಚಾಯಿತಿ ಕಸ ವಿಲೇವಾರಿ ಮಾಡುವ ಗಾಡಿಗೆ ನೀಡಬೇಕು. ನೀವು ನೀಡಿದ ಹಸಿಕಸವನ್ನು ಗೊಬ್ಬರವನ್ನಾಗಿ ಹಾಗೂ ಒಣ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತದೆ. ಈ ಮೂಲಕ ಪಟ್ಟಣದ ಸೌಂದರ್ಯದ ಜೊತೆಗೆ ಸವರ್ಾಂಗೀಣ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಹೇಳಿದರು.
ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ವಸತಿ ರಹಿತ ಹಾಗೂ ಬಡ ಕುಟುಂಬಗಳಿಗೆ ವಸತಿ ಸೌಲಭ್ಯಗಳನ್ನು ಕಲ್ಪಿಸಲು ಈಗಾಗಲೇ ಸೂಕ್ತ ಕ್ರಮ ಕೈಗೊಳ್ಳಲಾಗಿದ್ದು, ನಿವೇಶನ ಹೊಂದಿರದ ಕುಟುಂಬಗಳಿಗೆ ನಿವೇಶನ ಕಲ್ಪಿಸಿಲಾಗುತ್ತಿದೆ ಅಲ್ಲದೇ ಬೆಳೆಯುತ್ತಿರುವ ಪಟ್ಟಣದ ಹಿತದೃಷ್ಠಿಯಿಂದ ನೂರು ಎಕರೆ ಜಮೀನು ಮಂಜೂರಾತಿಗೂ ಪ್ರಸ್ಥಾವನೆ ಸಲ್ಲಿಸಲಾಗಿದೆ. ಆದ್ದರಿಂದ ಪಟ್ಟಣದ ಜನತೆ ಅಭಿವೃದ್ಧಿಗೆ ಸಹಕಾರ ನೀಡಬೇಕು. ಒಂದು ವೇಳೆ ಪ್ರತೀ ವಾರ್ಡಗಳಲ್ಲಿ ಪ್ರಾರಂಭವಾದ ಕಾಮಗಾರಿ ಹಾಗೂ ಸ್ವಚ್ಚತಾ ಕಾರ್ಯಗಳ ಬಗ್ಗೆ ಸಮಸ್ಯೆಯಾದರೆ ಕೂಡಲೇ ಭೇಟಿಯಾಗಿ ಸಮಸ್ಯೆ ನಿವಾರಣೆ ಮಾಡಿಕೊಳ್ಳಬೇಕೆಂದು ಹೇಳಿದರು.
ಈ ಸಂಧರ್ಭದಲ್ಲಿ ಪಪಂ ಸದಸ್ಯ ಫಕ್ಕೀರೇಶ ರಟ್ಟಿಹಳ್ಳಿ, ಚನ್ನವೀರಪ್ಪ ಕಲ್ಯಾಣಿ, ಬಸವಣ್ಣೆಪ್ಪ ತುಳಿ, ಮಹೇಶ ಕಲ್ಲಪ್ಪನವರ, ಲಕ್ಷ್ಮಣ ಬಾರಬಾರ, ಪರಶುರಾಮ ಡೊಂಕಬಳ್ಳಿ, ಫಕ್ಕೀರೇಶ ಇಂಗಳಗಿ, ಶಂಕ್ರಪ್ಪ ವರವಿ, ಮಾರ್ತಂಡಪ್ಪ ಗೊರವರ, ಉಮೇಶ ಬಕ್ಸದ, ಮಹಾದೇವಪ್ಪ ವರವಿ, ದೇವಪ್ಪ ಕಳ್ಳಿಮನಿ, ಗುರುನಾಥ ಪಾತಾಳಿ, ಕೆ. ಗುರುಪ್ರಸಾದ, ನಾಗೇಶ ಕುಲಕಣರ್ಿ, ಮಂಜುನಾಥ ಹರಿಜನ, ಚನ್ನಪ್ಪ ಸ್ವಾಮಿ, ಜಯಂ, ಜಯಶ್ರೀ, ಮರಿಯಪ್ಪ ಸೇರಿದಂತೆ ಪಟ್ಟಣದ ಮುಖಂಡರು ಹಾಗೂ ಪಪಂ ಸಿಬ್ಬಂದಿಗಳು ಉಪಸ್ಥಿತರಿದ್ದರು.