ಪುರಸಭೆ ಬಜೆಟ್ ಮಂಡನೆಯ ಸಾರ್ವಜನಿಕ ಪೂರ್ವಭಾವಿ ಸಭೆ
ಮಹಾಲಿಂಗಪುರ 02: ಪುರಸಭೆ ಸಭಾಭವನದಲ್ಲಿ ಯಲ್ಲನಗೌಡ ಪಾಟೀಲ ಅದ್ಯಕ್ಷತೆಯಲ್ಲಿ ಸನ್ 2025-26 ನೇ ಸಾಲೀನ ಪುರಸಭೆ ಆಯದ್ಯೆಯ( ಬಜೆಟ್)ಮಂಡನೆಯ ಸಾರ್ವಜನಿಕರ ಪೂರ್ವಭಾವಿ ಸಭೆಯು ಬುಧವಾರ ಮುಂಜಾನೆ ನಡೆಯಿತು.
ಈ ಸಂದರ್ಭದಲ್ಲಿ ತಾಲೂಕಾ ಹೋರಾಟ ಸಮೀತಿ ಅಧ್ಯಕ್ಷ ಸಂಗಪ್ಪ ಹಲ್ಲಿ ಮುಖಂಡರಾದ ಸಿದ್ದು ಶಿರೋಳ ಮಾತನಾಡಿ, ಒಳಚರಂಡಿ ವ್ಯವಸ್ಥೆ ಹಾಗೂ ನಗರದ ತುಂಬೆಲ್ಲ ಸ್ವಚ್ಛತೆಗೆ ಹಾಗೂ ಸಾರ್ವಜನಿಕರ ಶೌಚಾಲಯಗಳನ್ನು ನಿರ್ಮಿಸಬೇಕು, ಮತ್ತು ಚಿಕ್ಕ ಮಕ್ಕಳು ಈಜು ಕಲಿಯಲು ಪಟ್ಟಣದಲ್ಲಿ ಒಂದು ಈಜುಕೋಳವನ್ನು ನಿರ್ಮಾಣ ಮಾಡಬೇಕು ಎಂದರು.
ಪತ್ರಕರ್ತ ಮೀರಾ ತಟಗಾರ ಮಾತನಾಡಿ ನಗರದ ವಿವಿಧ ವೃತ್ತಗಳ ಪುರಸಭೆ ಜಾಗೆಯಲ್ಲಿ ವಾಣಿಜ್ಯ ಮಳಿಗೆಗಳನ್ನು ಮಳಿಗೆಗಳನ್ನು ಕಟ್ಟಿಸಬೇಕು, ಇದರಿಂದ ಸಾರ್ವಜನಿಕರಿಗೆ ಉಪಯೋಗವು ಆಗುತ್ತದೆ ಮತ್ತು ಪುರಸಭೆಗೆ ಆದಾಯವು ಬರುತ್ತದೆ, ಅಲ್ಲದೆ ಸಾಧುನ ಗುಡಿ ಹತ್ತಿರ ಒಂದು ಶುದ್ದ ಕುಡಿಯುವ ನೀರಿನ ಘಟಕ ತೆರೆದು, ಅಲ್ಲಿನ ಜನರಿಗೆ ಕುಡಿಯುವ ನೀರಿನ ಸಮಸ್ಯೆ ದೂರಮಾಡಿರಿ ಎಂದರು.ನಂತರ ಮಾತನಾಡಿದ ಶಿವು ಹುಣಶ್ಯಾಳ ಮತ್ತು ಬಸಪ್ಪ ಪರೀಟ ನಗರದಲ್ಲಿ ಲೈಬ್ರರಿ ವ್ಯವಸ್ಥೆ ಸರಿಯಾಗಿಲ್ಲ ಅದನ್ನು ಇನ್ನಷ್ಟು ಉನ್ನತಿಕರಿಸಬೇಕು, ಅಲ್ಲಲ್ಲಿ ರಸ್ತೆಗಳು ಹದಗೆಟ್ಟು ಹೋಗಿವೆ ಅವುಗಳನ್ನು ಸುಧಾರಿಸಲು ಹೆಚ್ಚಿನ ಒತ್ತು ನೀಡಬೇಕು ಎಂದರು.
ಅಂಗವಿಕರ ಸಂಘದ ಸದಸ್ಯ ರಾಜು ತೇರದಾಳ ಹಾಗೂ ಬಸವರಾಜ ಮಾವಿನಹಿಂಡಿ ಹಾಗೂ ಇನ್ನಿತರರು ವಿಕಲಚೇತನರಿಗಾಗಿ ಒಂದು ಉದ್ಯಾನವನವನ್ನು ನಿರ್ವಹಣೆಗಾಗಿ ನೀಡಬೇಕು ಎಂದು ಒತ್ತಾಯಿಸಿದರು. ಅಲ್ಲದೆ ವಿವಿಧ ಕಡೆಗಳಲ್ಲಿರುವ ಮೌಂಸದಂಗಡಿಗಳನ್ನು ತೆರವುಗೊಳಿಸಿ ಒಂದೆ ಜಾಗದಲ್ಲಿ ವ್ಯವಹರಿಸುವಂತೆ ಮಾಡಬೇಕು ಇದರಿಂದ ನಗರದ ಅಂದ ಹೆಚ್ಚುತ್ತದೆ, ಅಲ್ಲದೆ ನಗರದಲ್ಲಿ ಇರುವುದು ಒಂದೆ ದೊಡ್ಡದಾದ ಕೆರೆ ಇದನ್ನು ಅಭಿವೃದ್ಧಿ ಪಡಿಸಿ ಸಾರ್ವಜನಿಕರು ಅಲ್ಲಿ ವಾಯುವಿಹಾರ ಮಾಡಲು ಅನುಕೂಲ ಮಾಡಿಕೊಡಬೇಕು, ಮತ್ತು ಅದರ ಸುತ್ತಲು ವಿದ್ಯುತ ದೀಪಗಳನ್ನು ಹಾಕಿ ಅಂದವಾಗಿ ಕಾನುವಂತೆ ಮಾಡಬೇಕು, ಪ್ರತಿಯೊಂದು ಸರ್ಕಲ್ ನಲ್ಲಿಯೂ ಕೂಡ ಒಂದು ಟಾಯಲೇಟ್ ಕಟ್ಟಿಸಬೇಕು, ಓಣಿಗಳಲ್ಲಿ ಅದರಲ್ಲಿಯೂ ಚಿಕ್ಕ ಚಿಕ್ಕ ದಾರಿಯಿರುವ ಕಡೆಗಳಲ್ಲಿ ಸಾರ್ವಜನಿಕರು ಮನೆಮುಂದೆ ಕಟ್ಟೆಗಳನ್ನು ಕಟ್ಟಿ ರಸ್ತೆಗಳನ್ನು ಇಕ್ಕಟ್ಟುಗೊಳಿಸಿದ್ದಾರೆ ಅಂಥವುಗಳನ್ನು ತೆರವುಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದರು.
ಪುರಸಭೆ ಅಧ್ಯಕ್ಷ ಹಾಗೂ ಮುಖ್ಯಾಧಿಕಾರಿ ಈರಣ್ಣ ದಡ್ಡಿ ಮಾತನಾಡಿ ಸರ್ಕಾರ ಅನುದಾನಕ್ಕೆ ತಕ್ಕಂತೆ ಪಟ್ಟಣದ ಅಂದ ಮತ್ತು ಸ್ವಚ್ಚತೆಗಾಗಿ ಎನು ಬೇಕೋ ಎಲ್ಲ ಕೆಲಸಗಳನ್ನು ಮಾಡಿಸಲು ನಾವು ಸಿದ್ಧರಿದ್ದೇವೆ, ಅದರೊಂದಿಗೆ ಈಗ ನೀವು ಚರ್ಚೆ ಮಾಡಿದ ವಿಷಯಗಳನ್ನು ಸಹ ಗಮನದಲ್ಲಿಟ್ಟುಕೊಂಡು ಎಷ್ಟು ಕೆಲಸ ಮಾಡಲು ಸಾಧ್ಯವೋ ಅಷ್ಟೆಲ್ಲ ಕೆಲಸಗಳನ್ನು ನಾವು ಕೂಡಲೆ ಮಾಡಿಸಿ ಸಾರ್ವಜನಿಕರಿಗೆ ಅನುಕೂಲವಾಗುವ ಹಾಗೆ ಮಾಡಲು ಸದಾ ಸಿದ್ಧರಿದ್ದೇವೆ ಎಂದರು.
ಪುರಸಭೆ ಚೇರಮನ್ ಅಬ್ದುಲ ಬಾಗವಾನ, ಸದಸ್ಯರಾದ ಶೇಖರ ಅಂಗಡಿ, ಚನಬಸು ಯರಗಟ್ಟಿ, ರಾಜು ಗೌಡಪ್ಪಗೋಳ, ಮುಖಂಡರಾದ ಸುನೀಲಗೌಡ ಪಾಟೀಲ, ರಾಜೇಶ ಬಾವಿಕಟ್ಟಿ, ಚೇತನ ಕಲಾಲ,ಬಸು ಹೋಳಗಿ, ಪರಸುರಾಮ ಮೇತ್ರಿ, ಇಂಜೀನಿಯರಾದ ಎಸ್.ಎಂ ಕಲಬುರ್ಗಿ, ಪುರಸಭೆ ಸಿಬ್ಬಂದಿ ಎಸ್.ಎನ್ ಪಾಟೀಲ, ಎಂ.ಎಂ ಮುಗಳಖೋಡ, ಸಿ.ಎಸ್.ಮಠಪತಿ, ರವಿ ಹಲಸಪ್ಪಗೋಳ, ಸಿದ್ದು ಅಳ್ಳಿಮಟ್ಟಿ, ಎಂ.ಎಸ್ ಮುಲ್ಲಾ, ಆರ್.ಬಿ. ಸೋರಗಾಂವಿ, ರಾಮು ಮಾಂಗ, ಲಕ್ಷ್ಮೀ ಪರೀಟ ಸೇರಿದಂತೆ ಅನೇಕ ಜನ ಭಾಗಿಯಾಗಿದ್ದರು.