ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವುದು ಮುಖ್ಯ: ಧಮರ್ಾಯತ್

ಲೋಕದರ್ಶನ ವರದಿ

ಕೊಪ್ಪಳ 25: ಕೊಪ್ಪಳದಲ್ಲಿ ಹೊಸದಾಗಿ ಪ್ರಾರಂಭಗೊಂಡಿರುವ ದಿ ರೇಮಂಡ್ ಶಾಪ್ಗೆ ಬರುವ ಗ್ರಾಹಕ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಿ ನಿಗದಿತ ಶುಲ್ಕದೊಂದಿಗೆ ಎಲ್ಲಾ ಸಂಧರ್ಬಗಳಲ್ಲಿ ಉತ್ತಮ ಗುಣಮಟ್ಟದ ಬಟ್ಟೆ ಸಾಮಾಗ್ರಿಗಳನ್ನು ಕೊಡುವುದರ ಜೊತೆಗೆ ಗ್ರಾಹಕ ಸಾರ್ವಜನಿಕರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಬೇಕು ಎಂದು ಸಟಿ ಅಸೊಸಿಯೇಟ್ಸ್ ಗ್ರೂಪ್ ಆಫ್ ಕಂಪನೀಸ್ನ ಮುಖ್ಯಸ್ಥ ಹೊಸಪೇಟೆಯ ಡಾ|| ಸಾಲೇಹಾ ಧಮರ್ಾಯತ್ ಹೇಳಿದರು.

ಅವರು ಸಿಟಿ ಅಸೊಶಿಯೆಟ್ಸ್ ಗ್ರೂಪ್ ಆಪ್ ಕಂಪನಿಸ್ ಹೊಸಪೇಟೆ ವತಿಯಿಂದ ಕೊಪ್ಪಳ ನಗರದ ಪ್ರಮುಖ ಗಂಜ್ ಸರ್ಕಲ್ ಬಳಿ ನಿಲೋಗಲ್ ಕಾಂಪ್ಲೇಕ್ಸ್ನಲ್ಲಿ ವಿನೂತನ ಮಾದರಿಯ ದಿ ರೈಮಂಡ್ಶಾಪ್ ಶೋ ಮಾಟರ್್ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು ಗವಿಮಠದ ಗವಿಸಿದ್ದೇಶ್ವರ ಮಹಾಸ್ವಾಮಿಗಳು ರಿಬ್ಬನ್ ಕಟ್ಟ ಮಾಡುವುದರ ಮೂಲಕ ಚಾಲನೆ ನೀಡಿದರು.  

ಯೂಸುಫಿಯಾ ಮಸ್ಜೀದ್ನ ಖತೀಬ್-ವ ಇಮಾಮ್ ಮುಫ್ತಿ ಮಹಮ್ಮದ್ ನಜೀರ ಅಹ್ಮದ್ ಖಾದ್ರಿ-ವ ತಸ್ಕೀನಿರವರು ಪ್ರಾರಂಭೋತ್ಸವ ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿ ವಿಶೇಷ ಪ್ರಾರ್ಥನೆ ನೆರವೇರಿಸಿ ಶುಭ ಕೋರಿದರು. ಸಂಸದ ಸಂಗಣ್ಣ ಕರಡಿ ಹಾಗೂ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಜಂಟಿಯಾಗಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು. ನಂತರ ಅವರೆಲ್ಲರಿಗೆ ಕಂಪನಿಸ್ ಪರವಾಗಿ ಸನ್ಮಾನಿಸಲಾಯಿತು.  

ವಿಶೇಷ ಆಮಂತ್ರಿತರಾಗಿ ಮಾಜಿ. ಶಾಸಕ ಕೆ. ಬಸವರಾಜ ಹಿಟ್ನಾಳ, ನಗರಸಭೆಯ ಹಿರಿಯ ಸದಸ್ಯ ಹಾಗೂ ಸಮಾಜದ ಮುಖಂಡ ಅಮಜದ್ ಪಟೀಲ್, ಪ್ರಾಧಿಕಾರದ ಮಾಜಿ ಅಧ್ಯಕ್ಷ ಸೈಯದ್ ಜುಲ್ಲುಖಾದರ ಖಾದ್ರಿ, ಎಂ. ಪಾಶಾ ಕಾಟನ್, ಜೆಡಿಎಸ್ ಮುಖಂಡರಾದ ಕೆ.ಎಂ. ಸೈಯದ್, ಸಿದ್ದಲಿಂಗಯ್ಯ ಸ್ವಾಮಿ ಹಿರೇಮಠ, ಹಿರಿಯ ನ್ಯಾಯವಾದಿ ಹಾಗೂ ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ಎಸ್ ಆಸಿಫ್ ಅಲಿ ಮುತ್ತುರಾಜ ಕುಷ್ಟಗಿ, ಕೃಷ್ಣ ಇಟ್ಟಂಗಿ, ರಾಬಿತೇ ಮಿಲ್ಲತ್ನ ಅಧ್ಯಕ್ಷ ಎಂ. ಲಾಯಕ್ ಅಲಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ. ಸಾಧಿಕ ಅಲಿ, ಯುವ ನಾಯಕ ವಿಜಾರತ್ ಅಲಿ, ಕೊಪ್ಪಳ ರೇಮಂಡ್ ಶಾಪ್ನ ಪ್ರೊ. ಮುಸ್ತಫಾ ಹುಸೇನ್ ಕಂಪ್ಲಿ ಹಾಗೂ ಶೇಖ್ ಬಾಬಾ ಫಕ್ರುದ್ದೀನ್ ಸಾಬ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.