ಯೋಧರು ವೀರ ಮರಣ ಹೊಂದಿರುವದನ್ನು ಖಂಡಿಸಿ ಪ್ರತಿಭಟನೆ

ಲೋಕದರ್ಶನ ವರದಿ

ಇಂಡಿ 19: ಕಾಶ್ಮಿರದ ಪುಲ್ವಾಮ ಗ್ರಾಮದಲ್ಲಿ ಭಯೋತ್ಪಾದಕ ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಭಾರತ ಯೋಧರು ವೀರ ಮರಣ ಅಪ್ಪಿದ್ದಾರೆ. ದೇಶದ ಜನತೆ ಆಕ್ರೋಶಭರಿತರಾಗಿದ್ದಾರೆ ಪಾಕಿಸ್ತಾನ ಪರೋಕ್ಷವಾಗಿ ಮುಗ್ದ ಯುವಕರನ್ನು ತಮ್ಮ ಆತ್ಮಾಹುತಿ ಕಾರ್ಯಕ್ಕೆ ಬಳಸಿ ದಾಳಿನಡೆಸಿ ಭಾರತೀಯರನ್ನು ಬಲಿ ತಗೆದುಕೊಳ್ಳುತ್ತಿದ್ದಾರೆ ಇಂತಹ ವಿಧ್ವಂಸಕ ಕೃತ್ಯಗಳಿಂದ ಭಾರತೀಯ ಯೋಧರು ಸೇರಿದಂತೆ ಮುಗ್ದ ನಾಗರೀಕರು ಬಲಿಯಾಗುತ್ತಿರುವದು ಆತಂಕಕಾರಿ ಬೆಳವಣಿಯಾಗಿದೆ ಎಂದು ಬಸವ ಸಮೀತಿ ಅಧ್ಯಕ್ಷ ಅನೀಲಗೌಡ ಬಿರಾದಾರ ಹೇಳಿದರು.

ಪ್ರತಿಭಟನೆಯು  ಪಟ್ಟಣದ ಬಸವೇಶ್ವರ ವೃತ್ತದಿಂದ ಅಂಬೇಡ್ಕರ ಸರ್ಕಲ್, ಮಹಾವೀರ ವೃತ್ತ ನಂತರ ಬಸವೇಶ್ವರ ವೃತ್ತಕ್ಕೆ ಬಂದು ಮಾನವ ಸರಪಳಿ ನಿಮರ್ಿಸಿ ಪಾಕಿಸ್ಥಾನದ ಧ್ವಜ ದಹಿಸಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು ಭಾರತ ಮಾತೆಯ ವೀರ ಯೋಧರನ್ನು  ಕುತಂತ್ರದಿಂದ ಉಗ್ರವಾದಿ  ಆತ್ಮಾಹುತಿ ಧಾಳಿ ನಡೆಸಿರುವದು ಹೇಡಿತನದ ಕೃತ್ಯವಾಗಿದೆ. ತನ್ನಲ್ಲಿ ಗಂಡಸುತನವಿದ್ದರೆ ನಮ್ಮ ಸೈನಿಕರೊಂದಿಗೆ ನೇರ ಹೋರಾಟ ಮಾಡಿ ನಿಮ್ಮ ಶೌರ್ಯ ಎಷ್ಟು ಎನ್ನುವದು ಜಗತ್ತಿಗೆ ತಿಳಿಯುತ್ತದೆ.ಧಾಳಿಯಲ್ಲಿ ವೀರ ಮರಣ ಹೊಂದಿದ ಸೈನಿಕರ ಕುಟುಂಬಕ್ಕೆ ತಂದೆ ತಾಯಿಗಳಿಗೆ ಹಾಗೂ ಸಹೋದರಿಗೆ ಸೂಕ್ತ ಸಾಮಾಜಿಕ ಭದ್ರತೆ  ನೀಡಿ ಅವರ ಪತ್ನಿ ಅಥವಾ  ಮಕ್ಕಳಲ್ಲಿ  ಒಬ್ಬರಿಗೆ ಸರಕಾರಿ ಹುದ್ದೆ ನೀಡಬೇಕು. 5 ಎಕರೆ ಜಮೀನು, ಮಕ್ಕಳಿಗೆ   ಉಚಿತ ಶಿಕ್ಷಣ ನೀಡಬೇಕು , ಕೇಂದ್ರ ರಾಜ್ಯ ಸರಕಾರಗಳು ಹಣಕಾಸಿನ ನೆರೆವು ನೀಡಬೇಕು.  ಕಾಶ್ಮೀರ ಭಾರತ ಮಾತೆಯ ಮುಕುಟವಾಗಿದ್ದು ಇಂದು ಇದನ್ನು ಕಬಳಿಸಲು ವಿವಿಧ ಸ್ವರೂಪದಲ್ಲಿ  ಆಂತರಿಕವಾಗಿ ಉಗ್ರರನ್ನು ಹುಟ್ಟು ಹಾಕಿ ಧಾಳಿ ಮಾಡಿಸುತ್ತಿದ್ದಾರೆ ಕೂಡಲೆ  ಸರಕಾರಗಳು ಎಚ್ಚೆತ್ತುಕೊಂಡು ಪಾಕಿಸ್ಥಾನ ವಿರುಧ್ಧ ಉಗ್ರರ ನಿಗ್ರಹಕ್ಕೆ ಹೋರಾಟ ಮಾಡಬೇಕು ಎಂದು ಆಗ್ರಹಿಸಿದರು.

ಕಾಸುಗೌಡ ಬಿರಾದಾರ, ಶೀಲವಂತ ಉಮರಾಣಿ, ದಲಿತ ಮುಖಂಡ ಪ್ರಶಾಂತ ಕಾಳೆ, ಮಹಿಬೂಬ ಅರಬ, ಜಬ್ಬರಣ್ಣಾ ಅರಬ, ಪ್ರಕಾಶ ಅಳ್ಳಗಿ, ಶಾಂತುಗೌಡ ಬಿರಾದಾರ, ಮುನ್ನಾ ಡಾಂಗೆ, ಭೀಮು ಪ್ರಚಂಡಿ, ಶ್ರೀಧರ ಕ್ಷತ್ರಿ, ಬಾಳು ಮುಳಜಿ, ಅರುಣ ಕುಸಗಲ್ ,  ರಾಚು ಬಡಿಗೇರ, ಸಂತೋಷ ಪವಾರ, ಪ್ರವೀಣ ಮಠ, ರವಿಗೌಳಿ, ಪ್ರಕಾಶ ಬಿರಾದಾರ,ಮಲ್ಲು ಹಾವಿನಾಳ ಮಠ, ಸಂತೋಷ ಸಂಖ,    ಶಂಕರ ಹಲವಾಯಿ, ಬಸವರಾಜ ಬಂಕೂರ , ಸಚೀನ ನಾವಿ, ಸತೀಶ ಕುಂಬಾರ, ಸಂಜು ದಶವಂತ, ಶಶಿ ರಾಠೋಡ, ಶಾಂತು ಪಾಸೋಡೆ,ರಾಜಗುರು ದೇವರ , ಸೋಮಗೌಡ ಬಿರಾದಾರ, ನಾಮದೇವ ಡಾಂಗೆ, ಗಂಗಾಧರ ಬಡಿಗೇರ, ವಿಜು ಮಹೇಂದ್ರಕರ್,  ಸೇರಿದಂತೆ ಅನೇಕ ವ್ಯಾಪಾರಸ್ಥರು ಪ್ರಗತಿಪರ ಸಂಘಟನೆಯ ಮುಖಂಡರು ಇದ್ದರು.