ಲೋಕದರ್ಶನ ವರದಿ
ಸಿಂದಗಿ 5: ರಾಜ್ಯದಲ್ಲಿ ಎಕ್ಸಿಸ್ ಬ್ಯಾಂಕ್ ರೈತರು ಪಡೆದ ಸಾಲದ ವಸೂಲಾತಿಗೆ ಬ್ಯಾಂಕಿನ ಸಿಬ್ಬಂದಿಗಳು ಪೋಲಿಸ ಅರೆಸ್ಟ ವಾರೆಂಟ್ ಮುಖಾಂತರ ಕ್ರಮಕ್ಕೆ ಮುಂದಾಗಿರುವ ಧೋರಣೆಯನ್ನು ತೀವ್ರವಾಗಿ ಖಂಡಿಸಿ ಕನರ್ಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಸೋಮವಾರ ಪಟ್ಟಣದ ತಹಶೀಲ್ದಾರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನಂತರ ಪ್ರತಿಭಟನಾ ನಿರತ ರೈತರು ಶಿರಸ್ತೆದಾರ ಸುರೇಶ ಮ್ಯಾಗೇರಿ ಅವರಿಗೆ ಮನವಿ ಸಲ್ಲಿಸುವ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ ಕನರ್ಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಚಂದ್ರಗೌಡ ಪಾಟೀಲ ಮಾತನಾಡಿ, ಬರಗಾಲ ತುತ್ತಿಗೆ ಬಲಿಯಾಗುತ್ತಿರುವ ರೈತರ ಸಂಕಷ್ಟಕ್ಕೆ ಸರಕಾರ ಸ್ಪಂಧಿಸಿ ಸಾಲ ಮನ್ನಾ ಮಾಡುವ ಪ್ರಕ್ರೀಯೆಯಲ್ಲಿ ಇದ್ದ ಸಂದರ್ಭದಲ್ಲಿ ಬ್ಯಾಂಕಿನ ಸಾಲ ಮರುಪಾವತಿಸುವಂತೆ ಬೆಳಗಾವಿ, ಬೈಲಹೊಂಗಲ, ರಾಮದುರ್ಗ, ನರಗುಂದ, ನವಲಗುಂದ ತಾಲೂಕುಗಳ ಸುಮಾರು 180 ರೈತರ ಮೇಲೆ ಪೋಲಿಸ್ ಅರೇಸ್ಟ ವಾರೇಂಟ್ ಮಾಡಿರುವ ಎಕ್ಸಿಸ್ ಬ್ಯಾಂಕ ಶಾಖೆ ವರ್ತನೆ ಖಂಡನಿಯವಾಗಿದೆ ಎಂದು ಆಕ್ರೋಷ ವ್ಯಕ್ತ ಪಡೆಸಿದರು.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರೈತರ ಸಾಲವನ್ನು ಮನ್ನಾ ಮಾಡುವುದಾಗಿ ಘೋಷಿಸಿ ಎಲ್ಲ ಬ್ಯಾಂಕ್ ಅಕಾರಿಗಳಿಗೆ ಸೂಚಿಸಿದ್ದರೂ ಕೂಡಾ ಎಕ್ಸಿಸ್ ಬ್ಯಾಂಕ ಮಾತ್ರ ಪೋಲಿಸ್ ಇಲಾಖೆಯ ಮೂಲಕ ರೈತರ ಮೇಲೆ ದಬ್ಬಾಳಿಕೆ ಮಾಡುತ್ತಿದೆ. ಈ ಬ್ಯಾಂಕಿಗೆ ರಾಜ್ಯದಲ್ಲಿ ಮಾನ್ಯತೆ ರದ್ದು ಮಾಡಬೇಕು ಮತ್ತು 180 ರೈತರ ಮೇಲೆ ಆಗಿರು ಅರೆಸ್ಟ ವಾರೆಂಟ್ನ್ನು ಹಿಂದಕ್ಕೆ ಪಡೆದುಕೊಳ್ಳ ಬೇಕು ಎಂದು ಮುಖ್ಯಮಂತ್ರಿ ಅವರಿಗೆ ಒತ್ತಾಯಿಸಿದರು.
ಶಿವಲಿಂಗಪ್ಪ ಡಂಬಳ, ಬಸಲಿಂಗಪ್ಪ ಜಾಲವಾದ, ರಾಜಕುಮಾರ ಮಾಲಗಾರ, ರಾಯಪ್ಪ ಹಳಗೊಂಡ, ಕಂಟೆಪ್ಪ ಚೊರಗಸ್ತಿ, ಧರೆಪ್ಪಗೌಡ ಭಾವಿಕಟ್ಟಿ, ಪರುಶುರಾಮ ಚೊರಗಸ್ತಿ, ರಾಮನಗೌಡ ಬಿರಾದಾರ, ಪರುಶುರಾಮ ದೊಡಮನಿ, ಶಂಕರಗೌಡ ಬಿರಾದಾರ, ಯಲ್ಲಪ್ಪ ಚೊರಗಸ್ತಿ, ಶಂಕರಗೌಡ ಬಿರಾದಾರ, ಪರಶುರಾಮ ದೊಡಮನಿ, ಯಲ್ಲಪ್ಪ ಚೋರಗಸ್ತಿ, ಕೊಟೆಪ್ಪ ಚೊರಗಸ್ತಿ, ಶಂಕ್ರಯ್ಯ ಹಿರೇಮಠ ಸೇರಿದಂತೆ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.