ಕೃಷ್ಣಾ ನದಿಗೆ ನೀರು ಹರಿಸುವಂತೆ ಒತ್ತಾಯಿಸಿ ಪ್ರತಿಭಟನೆ

ಶೇಡಬಾಳ 12: ಕನರ್ಾಟಕ ಸಕರ್ಾರ ನಾಲ್ಕು ದಿನಗಳೊಳಗಾಗಿ ಕೃಷ್ಣಾ ನದಿಗೆ ನೀರು ಹರಿಸದೇ ಹೋದಲ್ಲಿ ನದಿ ತೀರದ ಗ್ರಾಮಗಳ ಜನರು ರಸ್ತೆಗಿಳಿದು ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಉಗಾರ ಬುದ್ರುಕ ಗ್ರಾಮದ ವಿಕಾಸ ವೇದಿಕೆಯ ಮುಖಂಡರು ಸಕರ್ಾರವನ್ನು ಎಚ್ಚರಿಸಿದ್ದಾರೆ. 

ರವಿವಾರ ದಿ. 12 ರಂದು ಉಗಾರ ಬುದ್ರುಕ ಗ್ರಾಮದ ಮಹಾವೀರ ಸರ್ಕಲ್ದಲ್ಲಿ ಉಗಾರ ವಿಕಾಸ ವೇದಿಕೆಯ ಆಶ್ರಯದಲ್ಲಿ ಪಕ್ಷಾತೀತವಾಗಿ ಜರುಗಿದ ಕೃಷ್ಣಾ ನದಿಗೆ ನೀರು ಹರಿಸುವಂತೆ ಒತ್ತಾಯಿಸಿ ನಡೆದ ಪ್ರತಿಭಟನೆ ಸಭೆಯನ್ನುದ್ದೇಶಿಸಿ ಅನೇಕ ಮುಖಂಡರು ಮಾತನಾಡಿದರು. 

ಯುವ ಮುಖಂಡ ಶೀತಲ ಪಾಟೀಲ ಮಾತನಾಡಿ ಕಳೆದ 2 ತಿಂಗಳುಗಳಿಂದ ಕೃಷ್ಣಾ ನದಿಯು ಸಂಪೂರ್ಣ ಬತ್ತಿ ಹೋಗಿ ನೀರಿನ ಹಾಹಾಕಾರ ಉಂಟಾಗಿದ್ದರು ಕೂಡ ರಾಜ್ಯ ಸಕರ್ಾರವಾಗಲಿ, ಜಿಲ್ಲಾಡಳಿತವಾಗಲಿ, ಜನ ಪ್ರತಿನಿಧಿಗಳಾಗಿ ಪ್ರಾಮಾಣಿಕವಾಗಿ ಈ ಗಂಭೀರ ಸಮಸ್ಯೆಗೆ ಸ್ಪಂದಿಸದೇ ಇರುವುದು ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆಂದು ಆರೋಪಿಸಿದರು.

ಕೃಷ್ಣಾ ನದಿ ತೀರದ ಗ್ರಾಮಗಳ ಗ್ರಾಮಸ್ಥರು ರಸ್ತೆಗಿಳಿದು ಉಗ್ರ ಸ್ವರೂಪದ ಹೋರಾಟ ಕೈಗೊಳ್ಳುವ ಮುಂಚೆ ಸಕರ್ಾರ ಈ ಭಾಗದ ಜನರ ಜ್ವಲಂತ ಸಮಸ್ಯೆಗೆ ಸ್ಪಂದಿಸಿ ಪರಿಹಾರ ಒದಗಿಸಿಕೊಡುವಂತೆ ವಿನಂತಿಸಿಕೊಂಡರು. 

ತಾಪಂ ಸದಸ್ಯ ವಸಂತ ಖೋತ ಮಾತನಾಡಿ ಬಂದ್, ಮನವಿ, ಪ್ರತಿಭಟನೆಗಳಿಂದ ಸಕರ್ಾರ ಎಚ್ಚೆತ್ತುಕೊಳ್ಳದಿರುವುದು ಖೇಧಕರ ಸಂಗತಿ ಜನರ ತಾಳ್ಮೆಯನ್ನು ಪರೀಕ್ಷಿಸಬೇಡಿ. ಅವರ ಸಹನೆಯ ಕಟ್ಟೆ ಒಡೆಯುವ ಮುಂಚೆ ಕೃಷ್ಣಾ ನದಿಗೆ ನೀರು ಹರಿಸಿ ಜನ-ಜಾನುವಾರಗಳ ಪ್ರಾಣ ರಕ್ಷಿಸುವಂತೆ ಒತ್ತಾಯಿಸಿದರು. 

ವಿಕಾಸ ವೇದಿಕೆಯ ಸದಸ್ಯ ಶೀತಲ ಕುಂಬಾರ ಮಾತನಾಡಿ ಕೃಷ್ಣಾ ನದಿಗೆ ನೀರು ಬಿಡಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡಿಸಿ ನದಿ ತೀರದ ಜನರ ದಿಕ್ಕು ತಪ್ಪಿಸುತ್ತಿರುವುದು ಖೇಧಕರ ಸಂಗತಿ. ಮಹಾರಾಷ್ಟ್ರದ ರಾಜಾಪೂರ ಡ್ಯಾಂ ನಿಂದ ನೀರು ಬಿಡುತ್ತಿರುವುದು ಮಹಾರಾಷ್ಟ್ರದ ಗ್ರಾಮಗಳಿಗೆ ವಿನಹ ಆ ನೀರು ಕನರ್ಾಟಕಕ್ಕೆ ಬಂದು ಸೇರುತ್ತಿಲ್ಲ. ಕೋಯ್ನಾ ಡ್ಯಾಂ ದಿಂದ ನೀರು ಬಿಟ್ಟಾಗ ಮಾತ್ರ ಬಾಗಲಕೋಟ, ಬೆಳಗಾವಿಯ ಜಿಲ್ಲೆಗಳಿಗೆ ಕೃಷ್ಣಾ ನದಿಯ ನೀರು ಬರಲು ಸಾಧ್ಯವೆಂದು ಹೇಳಿದರು.

  ಮಹಾದಾಯಿ ಹೋರಾಟ, ಕಾವೇರಿ ಹೋರಾಟದ ರೀತಿಯಲ್ಲಿ ಈ ಭಾಗದ ರೈತರು ರಸ್ತೆಗಿಳಿದು ಹೋರಾಟ ಮಾಡುವ ಮುಂಚೆ ನೀರು ಹರಿಸುವಂತೆ ಮನವಿ ಮಾಡಿದರು. 

ಉಗಾರ ಬುದ್ರುಕ ಮಹಾವೀರ ಸರ್ಕಲ್ದಲ್ಲಿ ಸಾಂಕೇತಿಕವಾಗಿ ರಸ್ತೆ ತಡೆ ನಡೆಸಿ ವಿಕಾಸ ವೇದಿಕೆ ಸದಸ್ಯರಾದ ಬಂಡು ತಮದಡ್ಡಿ ಬೇಡಿಕೆಯ ಮನವಿ ಪತ್ರ ಓದಿ ಕಾಗವಾಡ ಉಪ ತಹಶೀಲ್ದಾರ ವ್ಹಿ.ಬಿ.ಚೌಗಲಾ, ಕಂದಾಯ ಅಧಿಕಾರಿ ಬಿ.ಬಿ.ಬೋರಗಲ್ ಅವರಿಗೆ ಅಪರ್ಿಸಿದರು. 

ನದಿಗೆ ನೀರು ಹರಿಸುವಂತೆ ಒತ್ತಾಯಿಸಿ ನಡೆದ ಪ್ರತಿಭಟನೆಯಲ್ಲಿ ಗ್ರಾಮದ ವ್ಯಾಪಾರಸ್ಥರು ಸ್ವಯಂ ಪ್ರೇರಿತರಾಗಿ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ಪ್ರತಿಭಟನಾ ಸಭೆಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು. 

ಕಾಗವಾಡ ಪಿಎಸ್ಐ ಹನಮಂತ ಶಿರಹಟ್ಟಿ ಹಾಗೂ ಸಿಬ್ಬಂದಿ ವರ್ಗದವರು ಸೂಕ್ತ ಬಂದೋಬಸ್ತ್ ವ್ಯವಸ್ಥೆಯನ್ನು ಕೈಗೊಂಡಿದ್ದರು.

ಈ ಸಮಯದಲ್ಲಿ ಶೀತಲ ಪಾಟೀಲ, ವಸಂತ ಖೋತ, ಅಪ್ಪಾಸಾಬ ಚೌಗಲಾ, ವಿಕಾಸ ವೇದಿಕೆಯ ಬಂಡು ತಮದಡ್ಡಿ, ಉದಯ ಉಮರಾಣಿ, ಶೀತಲ ಕುಂಬಾರ, ಅಭಿನಂದನ ಸದಲಗೆ, ಅಪ್ಪು ಸಲಗರೆ, ಮುರಗೇಶ ಕುಂಬಾರ, ರಾಹುಲ ಕಬಾಡಗೆ, ಅಣ್ಣಾಸಾಬ ಖೋತ, ವಿಜಯ ಸಿಂಧೆ, ಸುರೇಶ ಸಮಾಜಗೆ, ಶಾಂತಿನಾಥ ವಸವಾಡೆ, ಮನೋಹರ ದೇವಮೂರೆ, ಶೀತಲ ಶಹಾ, ದಾದಾಪೀರ ನೇಜಕರ, ಕಲ್ಲು ಕುರಬರ, ಸಾಗರ ಪೂಜಾರಿ, ಸಚೀನ ಪೂಜಾರಿ, ಶಂಭು ಜೋಶಿ, ಸತೀಶ ಕಾಂಬಳೆ, ಸುಕುಮಾರ ಕಾಂಬಳೆ, ಶೇಖರ ಕಾಟಕರ, ಅಮೀತ ಶೇಖ, ಬಾಳು ಹವಲೆ ಸೇರಿದಂತೆ ಕನ್ನಡ ಬಳಗ, ಗೋಮಟೇಶ ಗೆಳೆಯರ ಬಳಗ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಗ್ರಾಮಸ್ಥರು ಅಪಾರ ಸಂಖ್ಯೆಯಲ್ಲಿ ಇದ್ದರು.