ಬ್ಯಾಡಗಿ ತಹಶೀಲ್ದಾರ ಕಛೇರಿ ಎದುರು ಗ್ರಾಮಾಡಳಿತಾಧಿಕಾರಿಗಳಿಂದ ಪ್ರತಿಭಟನೆ
ಬ್ಯಾಡಗಿ 11: ಕಳೆದ ವರ್ಷ ಸೆಪ್ಟೆಂಬರ 26 ರಿಂದ 10 ದಿನಗಳ ಕಾಲ ನಮ್ಮ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪಟ್ಟಣದ ತಹಶೀಲ್ದಾರರ ಕಾರ್ಯಾಲಯದ ಎದುರು ಮುಷ್ಕರ ನಡೆಸಿದಾಗ ಬೇಡಿಕೆ ಈಡೇರಿಸುವುದಾಗಿ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಭರವಸೆ ನೀಡಿದ್ದರು. ಆದರೆ ಈವರೆಗೂ ಬೇಡಿಕೆ ಈಡೇರಿಸದೇ ಇರುವುದರಿಂದ ನಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮತ್ತೆ ಶಾಂತಿಯುತ ಪ್ರತಿಭಟನೆಯನ್ನು ಸೋಮವಾರದಿಂದ ಹಮ್ಮಿಕೊಂಡಿದ್ದೇವೆ ಎಂದು ತಾಲೂಕಾ ಗ್ರಾಮಾಡಳಿತಾಧಿಕಾರಿಗಳ ಸಂಘದ ಅಧ್ಯಕ್ಷ ಃ ಓ ಕವಾಸ್ಕ ಸರ್ಕಾರಕ್ಕೆ ಒತ್ತಾಯಿಸಿದರು.ಪಟ್ಟಣದಲ್ಲಿ ಸೋಮವಾರ ಅವರು ತಹಶೀಲ್ದಾರ ಫಿರೋಜಾಷಾ ಸೋಮನಕಟ್ಟಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.ಸರ್ಕಾರಕ್ಕೆ ಈಗಾಗಲೇ ಹತ್ತು ಹಲವು ಬಾರಿ ನಮ್ಮಬೇಡಿಕೆಗಳ ಬಗ್ಗೆ ಪ್ರತಿಭಟನೆ ಮಾಡಿ ತಿಳಿಸಿದಾಗ್ಯೂ ಯಾವುದೇ ಪರಿಹಾರ ದೊರೆಯದ ಹಿನ್ನೆಲೆಯಲ್ಲಿ ಇಂದು ಮತ್ತೆ ಅನಿರ್ದಿಷ್ಟಾವಧಿ ಶಾಂತಿಯುತ ಮೌನ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ನಾವುಗಳು ಒಂದೆಡೆ ಕುಳಿತು ಕೆಲಸ ಮಾಡಲು ಸರಿಯಾದ ವ್ಯವಸ್ಥೆಯಿಲ್ಲ. ಸೂಕ್ತವಾದ ಸಾಮಗ್ರಿಗಳಿಲ್ಲ, ಇದರಿಂದಾಗಿ ಸಾಕಷ್ಟು ಒತ್ತಡದಲ್ಲಿ ಕೆಲಸ ಮಾಡಬೇಕಿದೆ. ಇನ್ನೂ ಹಲವಾರು ಬೇಡಿಕೆಗಳ ಬಗ್ಗೆ ಸರ್ಕಾರ ಗಮನ ಹರಿಸುವವರೆಗೆ ಪ್ರತಿಭಟನೆ ಮುಂದುವರೆಯಲಿದೆ ಎಂದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುಂಡಪ್ಪ ಹುಬ್ಬಳ್ಳಿ ಮಾತನಾಡಿ ಹತ್ತು ಹಲವಾರು ವರ್ಷಗಳಿಂದ ಅಂತರ್ ಜಿಲ್ಲಾ ವರ್ಗಾವಣೆಯಿಲ್ಲ,ಗ್ರಾಮಾಡಳಿತಗಾರರಿಗೂ ಕುಟುಂಬಗಳಿವೆ.
ಕುಟುಂಬದ ಜೊತೆ ಬೆರೆಯುವ ಆಸೆಯಿದೆ. ಹೀಗಾಗಿ ಸರ್ಕಾರ ನಮ್ಮ ಬೇಡಿಕೆಯನ್ನು ಈಡೇರಿಸುವ ನಿರ್ಧಾರ ಮಾಡುವಂತೆ ಆಗ್ರಹಿಸಿದರು.ತಾಲೂಕಾ ಗ್ರಾಮಾಡಳಿತಾಧಿಕಾರಿಗಳ ಶಾಂತಿಯುತ ಪ್ರತಿಭಟನೆಯಲ್ಲಿ ತಾಲೂಕಾ ಉಪಾಧ್ಯಕ್ಷ ಹೇಮಾ ಗಳಗನಾಥ ಖಜಾಂಚಿ ಸಂತೋಷ ವಿಭೂತಿ,ಗೌರವಾಧ್ಯಕ್ಷ ಶಬ್ಬೀರ ಬಾಗೇವಾಡಿ, ಜಿಲ್ಲಾ ಉಪಾಧ್ಯಕ್ಷ- ಪ್ರಭಾವತಿ ಬಡಿಗೇರ, ಶಶಿಧರ ಹಿರೇಮಠ, ಲಕ್ಷ್ಮಿ, ಶೋಭಾ, ರೇಖಾ, ಹೇಮಾ, ಸೇರಿದಂತೆ ತಾಲೂಕಿನ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಎಲ್ಲ ಪದಾಧಿಕಾರಿಗಳು ಭಾಗವಹಿಸಿದ್ದರು.