ಗೊಹಿಂಸೆ ವಿರುದ್ಧ ಪ್ರತಿಭಟನೆ, ಬಂಧನ

Protest against violence, arrest

ಗೊಹಿಂಸೆ ವಿರುದ್ಧ ಪ್ರತಿಭಟನೆ, ಬಂಧನ 

ಮುದ್ದೇಬಿಹಾಳ 16: ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಆಕಳ ಕೆಚ್ಚಲು ಕತ್ತರಿಸಿ ಅಮಾನವಿಯವಾಗಿ ವರ್ತಿಸಿರುವ ಘಟನೆಯ ಹಿಂದೆ ಷಡ್ಯಂತ್ರ ನಡೆದಿದೆ, ಕೇವಲ ಬಾಹ್ಯ ಅಪರಾಧಿಯನ್ನು ಬಂಧಿಸುವ ಕಾಟಾಚಾರ ಮಾಡದೆ ದುಷ್ಕೃತದ ಹಿಂದೆ ಇರುವ ನಿಜವಾದ ಅಪರಾಧಿಗಳನ್ನು ಬಂಧಿಸಬೇಕು ಎಂದು ಸ್ಥಳೀಯ ಶಾಸಕರ ಮನೆಯ ಮುಂದೆ ಅನೀರೀಕ್ಷಿತ ಪ್ರತಿಭಟನೆಗೆ ತಾಲೂಕು ರೈತ ಮೋರ್ಚ ಘಟಕದ ಸದಸ್ಯರು ಮುಂದಾಗಿದ್ದರು. 

   ಸ್ಥಳೀಯ ಹುಡುಕೋ ಶಾಸಕರ ನಿವಾಸದ ಕಡೆಗೆ ಧಾವಿಸುತ್ತಿದ್ದ ಪ್ರತಿಭಟನಾಕಾರರನ್ನು ತಡೆದ ಪೊಲೀಸ್ ಸಿಬ್ಬಂದಿ ಶಾಸಕರ ಕುಟುಂಬದೊಂದಿಗೆ ಇರುವ ನಿವಾಸಕ್ಕೆ ಬಂದು ಮನವಿ ಕೊಡಲು ಅವಕಾಶವಿಲ್ಲ ಎಂದು ಮುನ್ನುಗಲು ಅವಕಾಶ ಕೊಡಲಿಲ್ಲ. ಇದಕ್ಕೆ ಉತ್ತರಿಸಿದ ಪ್ರತಿಭಟನಾಕಾರರು ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಪವಿತ್ರ ಗೋವುಗಳನ್ನು ಹಿಂಸೆ ಮಾಡುವುದನ್ನು ಖಂಡಿಸಿ ತಾವು ತಹಸಿಲ್ದಾರ್ ಅವರಿಗೆ ಮನವಿ ಕೊಡಲು ಬಂದಿದ್ದೇವೆ ಆದರೆ ಇಂದು ಸಾರ್ವತ್ರಿಕ ರಜೆ ಇದ್ದದ್ದರಿಂದ ಶಾಸಕರಿಗೆ ಮನವಿ ಕೊಡಲು ತೆರಳುತ್ತಿದ್ದೇವೆ. ರೈತರ ಜೀವನಾಡಿ ಹಸು ಕೊಲ್ಲುವುದು, ಹಿಂಸೆ ಮಾಡುವುದು ಅಮಾನವೀಯ. ಇದು ನಾಡಿನ ಸಂಸ್ಕೃತಿ ಹಾಗೂ ರೈತರ ಮೇಲಿನ ದಾಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ನಿವಾಸದಲ್ಲಿದ್ದ ಶಾಸಕರು ಸಂಕ್ರಾಂತಿಯ ಹಬ್ಬದ ವೇಳೆಯಲ್ಲಿ ರಾಜಕೀಯ ಮಾಡುತ್ತಿದ್ದಾರೆ, ಇದಕ್ಕೆ ಕೆಲವರು ಪ್ರಚೋದನೆ ಕೊಡುತ್ತಿರುವುದು ತಪ್ಪು. ಕಾಂಗ್ರೆಸ್ ಸರ್ಕಾರವೇ ಅಪರಾಧಿಗಳನ್ನು ಬಂಧಿಸಿದೆ ಆದರೆ ಪ್ರತಿಯೊಂದುಕ್ಕೂ ರಾಜಕೀಯ ಮಾಡಿದರೆ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಬಂಧನ, ಧರಣಿ:  

ನಂತರ ಪೊಲೀಸರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಆರು ಜನರ ವಿರುದ್ಧ ನಾಗರಾಜ ತಂಗಡಗಿ ಅವರು ಸಲ್ಲಿಸಿದ ದೂರಿನ ಅನ್ವಯ ಬಂದನ ಮಾಡಿ ಪೊಲೀಸ್ ಠಾಣೆಗೆ ಕರೆತಂದು ದೂರ ದಾಖಲಿಸಲು ಮುಂದಾದಾಗ, ಮಾಜಿ ಶಾಸಕ ಎ ಎಸ್ ಪಾಟೀಲ್ ಗೋ ಹಿಂಸೆಯನ್ನು ಪ್ರತಿಪಟಿಸಿ ರಾಜ್ಯದಾದ್ಯಂತ ಪ್ರತಿಭಟನೆಯನ್ನು ಮಾಡಲಾಗುತ್ತಿದೆ. ಪ್ರಜಾಪ್ರಭುತ್ವದಲ್ಲಿ ಶಾಂತಿಯುತವಾಗಿ ಕೇಳುವ ಹಕ್ಕು ಎಲ್ಲರಿಗೂ ಇದೆ. ಪ್ರತಿಭಟನಾಕಾರರು ಮನವಿ ಸಲ್ಲಿಸಲು ಹೋಗಿದ್ದರು, ಮನೆಯ ಮುಂದೆ  ಪವಿತ್ರ ಗೋವಿನ ಸಗಣಿಯನ್ನು ಸಾರಿಸಿ ಶಾಂತಿಯುತ ಪ್ರತಿಭಟನೆ ಮಾಡಿದ್ದರು ಆದ್ದರಿಂದ ಅವರನ್ನು ಬಿಡುಗಡೆ ಮಾಡಬೇಕು ಎಂದು ಪೊಲೀಸ್ ಠಾಣೆಯಲ್ಲಿ ಧರಣಿ ಮಾಡಿದರು. ಪ್ರತಿಭಟನೆಯ ಸಂದರ್ಭದಲ್ಲಿ ಮಹಾಂತಗೌಡ ಪಾಟೀಲ್ ಮುನ್ನಾದನಿ ನಾಡಗೌಡ ಕೆಂಚಪ್ಪ ಬಿರಾದಾರ ಮಲಕೇಂದ್ರಗೌಡ ಪಾಟೀಲ್  ಸಂಗಮ್ಮ ದೇವರಹಳ್ಳಿ  ಮುಂತಾದವರು ಇದ್ದರು. ನಂತರ ಪೊಲೀಸರು ಬಿಗಿ ಬಂದೋಬಸ್ ನಲ್ಲಿ ಹೋರಾಟಗಾರರಾದ ಗೀರೀಶಗೌಡ ಪಾಟೀಲ ಜಗದೀಶ ಪಂಪಣ್ಣವರ ಏಕನಾಥ, ಅಶೋಕ ರಾಥೋಡ್ ಪ್ರೇಮಸಿಂಗ್ ಚೌವಾನ ನಾಗೇಶ ಕವಡಿಮಟ್ಟಿ ಸಂಜು ಬಾಗೇವಾಡಿ ಇತರರ ಮೇಲೆ ದೂರನ್ನು ದಾಖಲಿಸಿದ್ದಾರೆ.