ಲೋಕದರ್ಶನ ವರದಿ
ಕೊಪ್ಪಳ 04: ಕೊಪ್ಪಳದ ಕೇಂದ್ರೀಯ ಬಸ್ ನಿಲ್ದಾಣದಿಂದ ಮುಂದೆ ಎಐಡಿವೈಒ ಸಂಘಟನೆ ನೇತೃತ್ವದಲ್ಲಿ ಐಟಿಐ ವಿದ್ಯಾರ್ಥಿಗಳಿಗೆ "ಅವೈಜ್ಞಾನಿಕ ಆನ್ ಲೈನ್ ಪರೀಕ್ಷಾ ಪದ್ಧತಿ" ವಿರೋಧಿಸಿ ಪ್ರತಿಭಟನೆ ಮಾಡಲಾಯಿತು. ಈ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಎಐಡಿವೈಒ ಸಂಘಟನೆಯ ಜಿಲ್ಲಾ ಸಂಚಾಲಕರಾದ ಶರಣಬಸವ ಪಾಟೀಲ್ ಆಗಸ್ಟ್ 2018 ರಿಂದ ಪ್ರವೇಶ ಪಡೆದ ಐಟಿಐ ವಿದ್ಯಾರ್ಥಿಗಳಿಗೆ ಡಿಜಿಟಿ ಆನ್ ಲೈನ್ ಪರೀಕ್ಷೆಗಳನ್ನು ನಡೆಸುವ ಪ್ರಸ್ತಾಪವನ್ನು ಹೊಂದಿತ್ತು ವಾಸ್ತವದಲ್ಲಿ ಡಿಜಿಟಿ ಮತ್ತು ಎಂಎಸ್ಡಿಇ ಯಾವುದೇ ರೀತಿಯ ಪೂರ್ವತಯಾರಿ ಇಲ್ಲದೆ ಏಕಾಏಕಿ ಆನ್ಲೈನ್ ಪರೀಕ್ಷೆಗಳ ದಿನಾಂಕವನ್ನು ನಿಗದಿಪಡಿಸಿತ್ತು ಡಿಜಿಟಿಯ ಈ ನಿಧರ್ಾರವನ್ನು ನಮ್ಮ ಸಂಘಟನೆ ಎಐಡಿವೈಒ ಮೊದಲಿನಿಂದಲೂ ವಿರೋದಿಸುತ್ತ ಬಂದಿತ್ತು. ದಿ. 21ರಂದು ನಮ್ಮ ಸಂಘಟನೆಯ ಅಖಿಲ ಭಾರತ ಅಧ್ಯಕ್ಷರಾದ ಎ. ರಾಮಾಂಜಿನಪ್ಪ ಆಲ್ದಳ್ಳಿ ಅವರ ನೇತೃತ್ವದಲ್ಲಿ ದೆಹಲಿಯಲ್ಲಿ ಡಿಜಿಟಿ ನಿರ್ದೇಶಕರಾದ ಸುನಿಲ್ ಕುಮಾರ್ ಅವರನ್ನು ಭೇಟಿ ಮಾಡಿ ಆನ್ಲೈನ್ ಪರೀಕ್ಷೆಯನ್ನು ರದ್ದು ಮಾಡಲು ಮನವಿ ಪತ್ರವನ್ನು ಸಲ್ಲಿಸಲಾಯಿತು. ಮುಂದುವರೆದು ಕೊಪ್ಪಳದಲ್ಲಿ ದಿ. 03ರಂದು ಡಿಜಿಟಿ ಯ ಈ ಕ್ರಮವನ್ನು ಖಂಡಿಸಿ ಕೇಂದ್ರೀಯ ಬಸ್ ನಿಲ್ದಾಣದಿಂದ ಜಿಲ್ಲಾಧಿಕಾರಿ ಕಛೇರಿವರೆಗೆ ಐಟಿಐ ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆಯ ಮುಂಚೆಯೇ ತಾತ್ಕಾಲಿಕವಾಗಿ ಬಂದ ಆದೇಶದ ಮೇರೆಗೆ ಈ ಬಾರಿ ಆನ್ ಲೈನ್ ಪರೀಕ್ಷೆಗಳು ಇರುವುದಿಲ್ಲ ಮುಂದಿನ ವರ್ಷದಿಂದ ಜಾರಿಗೆ ತರುತ್ತೇವೆ ಎಂದು ಆದೇಶ ದಲ್ಲಿ ತಿಳಿಸಲಾಗಿತ್ತು.
ಎಐಡಿವೈಓ ಸಂಘಟನೆ ಹಾಗೂ ಐಟಿಐವಿದ್ಯಾರ್ಥಿಗಳು ಈ ಆದೇಶವನ್ನು ಸ್ವಾಗತಿಸುತ್ತದೆ. ಮುಂದುವರೆದು ಡಿಜಿಟಿಗೆ ಈ ಮೂಲಕ ತಿಳಿಸುವುದೇನೆಂದರೆ ಐಟಿಐ ವಿದ್ಯಾರ್ಥಿಗಳಿಗೆ "ಆನ್ ಲೈನ್ ಪರೀಕ್ಷಾ ಪದ್ಧತಿ" ಅವೈಜ್ಞಾನಿಕವಾಗಿದ್ದು, ವಿದ್ಯಾಥರ್ಿಗಳ ವಿದ್ಯಾಭ್ಯಾಸಕ್ಕೆ ಅನಾನುಕೂಲವಾಗುತ್ತದೆ. ಇದರ ಬದಲಾಗಿ ಐಟಿಐ ವಿದ್ಯಾರ್ಥಿಗಳ ನೈಜ ಸಮಸ್ಯೆಗಳಾದ ಹಾಸ್ಟೆಲ್ ಸಮಸ್ಯೆ, ಸ್ಟೇ ಫಂಡ್ ಹೆಚ್ಚಿಸುವುದು, ಉಚಿತ ಬಸ್ ಪಾಸ್, ಮದ್ಯಾನದ ಉಪಹಾರ, ಮುಂತಾದ ಮೂಲಭೂತ ಸೌಕರ್ಯಗಳು ಕಲ್ಪಿಸುವುದು, ಅನಿವಾರ್ಯ ಮತ್ತು ಅನುಕೂಲವಾಗುತ್ತದೆ, ಆದರೆ ಮುಂದಿನ ವರ್ಷದಿಂದ ಜಾರಿಗೆ ತರುವ ಪ್ರಸ್ತಾಪ ಕೂಡ ಕೈ ಬಿಡಬೇಕೆಂದು ಈ ಮೂಲಕ ಡಿಜಿಟಿಗೆ ಎಐಡಿವೈಒ ಸಂಘಟನೆಯಿಂದ ಆಗ್ರಹಿಸುತ್ತೇವೆ ಎಂದು ಹೇಳಿದರು.
ಈ ಪ್ರತಿಭಟನೆಯಲ್ಲಿ ಸಂಘಟನೆಯ ಕಾರ್ಯಕರ್ತರಾದ ರಾಯಣ್ಣ ಗಡ್ಡಿ ರಮೇಶ್,ಶರಣು ಗಡ್ಡಿ ಹಾಗು ವಿವಿಧ ಕಾಲೇಜಿನ ನೂರಾರು ವಿದ್ಯಾರ್ಥಿಗಳಾದ ವೀರೇಂದ್ರ, ವೀರೇಶ, ಸಂಜಯ, ಸೋತೋಷ್ ಸಜ್ಜನ್, ಮಹೇಶ್ ಮಾರುತಿ ಭೀಮನಗೌಡ, ಭಾಗವಯಿಸಿದ್ದರು.