ಬಸವೇಶ್ವರ ವೃತ್ತದಲ್ಲಿ ನಡೆದ ಹೋರಾಟದಲ್ಲಿ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ

Protest against the state government in the struggle held in Basaveshwar circle

ಬಸವೇಶ್ವರ ವೃತ್ತದಲ್ಲಿ ನಡೆದ ಹೋರಾಟದಲ್ಲಿ  ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ  

ಮುದ್ದೇಬಿಹಾಳ 12: ಪಂಚಮಸಾಲಿ ಸಮಾಜಕ್ಕೆ 2ಎ ಮಿಸಲಾತಿ ಒದಗಿಸಬೇಕೆಂದು ಸಮಾಜದ ಜಗದ್ಗುರುಗಳಾದ  ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಹಮ್ಮಿಕೊಂಡ ಹೋರಾಟದಲ್ಲಿ ಕಾಂಗ್ರೇಸ್ ಸರ್ಕಾರವು ಪೊಲೀಸ್‌ರಿಂದ ಲಾಠಿ ಚಾರ್ಜ ಮಾಡಿಸಿ ಶಾಂತಿಯುತ ಹೋರಾಟಕ್ಕೆ ಭಂಗ ತಂದಿರುವದನ್ನು ಖಂಡಿಸಿ ಮಾಜಿ ಶಾಸಕ ಹಾಗೂ ಕರ್ನಾಟಕ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಎ ಎಸ್ ಪಾಟೀಲ(ನಡಹಳ್ಳಿ)ಯವರ ನೇತೃತ್ವದಲ್ಲಿ  ಗುರುವಾರ ಪಟ್ಟಣದ ಎಪಿಎಂಸಿ ಗಣೇಶ ದೇವ ಸ್ಥಾನದಿಂದೆ ಬೃಹತ್ ಪ್ರತಿಭಟನಾ ಮೆರವಣಿಗೆ  ನಡೆಸಿ ಬಳಿಕ ಬಸವೇಶ್ವರ ವೃತ್ತದಲ್ಲಿ ರಸ್ತಾರೋಖೋ ಚಳುವಳಿಯನ್ನು ನಡೆಸುವ ಮೂಲಕ ರಾಜ್ಯ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. 

ಈ ವೇಳೆ ಮಾಜಿ ಶಾಸಕ ಹಾಗೂ ಕರ್ನಾಟಕ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಎ ಎಸ್ ಪಾಟೀಲ(ನಡಹಳ್ಳಿ)ಯವರು ಮಾತನಾಡಿ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ರಾಮಯ್ಯನವರ ನೇತೃತ್ವದ ಕಾಂಗ್ರೇಸ್ ಸರಕಾರ ಹೋರಾಟಗಾರರ ಮೇಲೆ ಪೋಲಿಸರನ್ನ ಬಿಟ್ಟು ಲಾಠಿ ಚಾರ್ಜ್‌ ಮಾಡಿರುವುದರಿಂದ  ಲಿಂಗಾಯತ ಪಂಚಮಸಾಲಿ ಸಮುದಾಯ ಮತ್ತಷ್ಟು ಕೆರಳುವಂತೆ ಮಾಡಿದ್ದಲ್ಲದೇ ವೀರಶೈವ ಲಿಂಗಾಯತ ಸಮಾಜ ವಿರೋಧಿಯಾಗಿದೆ ಈ ಘಟನೆಯನ್ನು ಬಲವಾಗಿ ಖಂಡಿಸುತ್ತೇನೆ. 

  ಈ ಹಿಂದೆ ರಾಜ್ಯದಲ್ಲಿ ಬಾಜಪ ಸರಕಾರದ ಅವಧಿಯಲ್ಲಿ ಇದೇ ರೀತಿ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು 2ಎ ಮಿಸಲಾತಿ ನೀಡುವಂತೆ ಆಗ್ರಹಿಸಿ ಕೂಡಲಸಂಗಮದಿಂದ ಬೆಂಗಳೂರಿನವರೆಗೇ ಒಂದು ತಿಂಗಳು ಪರ್ಯಂತ ಪಾದಯಾತ್ರೆ ಮೂಲಕ ಲಕ್ಷಾಂತತರ ಜನ ಸಮಾಜ ಬಾಂಧವರು ಸೇರಿಕೊಂಡು ಹೋರಾಟ ಕೈಗೊಂಡಿದ್ದರು ಈ ವೇಳೆ ನಮ್ಮ ಸರಕಾರ ಪಂಚಮಸಾಲಿ ಸಮೂದಾಯ ಹೋರಾಟಕ್ಕೆ ಯಾವೂದೇ ತೊಂದರೆಯಾಗದಂತೆ ನೋಡಿಕೊಳ್ಳುವ ಮೂಲಕ 2ಡಿ ಮೀಸಲಾತಿ ನೀಡಿ ಆದೇಶಿಸಿತು. ಮುಂದೆ ರಾಜ್ಯದಲ್ಲಿ ಕಾಂಗ್ರೇಸ್ ಸರಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಕೆಲ ಕಾಂಗ್ರೇಸ ಛ ಏಲಾ ಗಳಿಂದ ನ್ಯಾಯಾಲದಯಲ್ಲಿ ತಡೆಯಾಜ್ಞೇ ತರುವ ಮೂಲಕ ಪಂಚಮಸಾಲಿ ಸಮಾಜಕ್ಕೆ ಅನ್ಯಾಯ ಮಾಡಿದೆ.ಈಗಾಗಲೇ ನಮ್ಮ ಬಾಜಪ ಸರಕಾರ ಮೀಸಲಾತಿ ನೀಡಿ ಆದೇಶಿಸಿದ ಮಾತ್ರವಲ್ಲದೇ ಆ ಸಮಾಜಕ್ಕೆ ಸೂಕ್ತ ನ್ಯಾಯ ನೀಡುವ ಮಹತ್ತರ ಕಾರ್ಯ ಮಾಡಿದೆೆ. ಆದರೇ ಪ್ರಸ್ತುತ ಮುಖ್ಯಮಂತ್ರಿ ಸಿದ್ರಾಮಯ್ಯನವರ ನೇತೃತ್ವದ ಕಾಂಗ್ರೇಸ್ ಕೇವಲ ಅನುಷ್ಠಾನಗೊಳಿಸಬೇಕಾಗಿದೆ ಆದರೇ ಅದನ್ನು ಈ ಸರಕಾರದ ಮಾಡಲು ಸಾಧ್ಯವಿಲ್ಲದೇ ಪೂಜ್ಯ ಶ್ರೀಗಳ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಮೀಸಲಾತಿಗಾಗಿ ನಡೆಸುತ್ತಿರುವ ಪ್ರತಿಭಟನೆ ಹತ್ತಿಕ್ಕಲು  ನೀವು ಎಡಿಜಿಪಿ ಹಾಗು ಪೊಲೀಸ್ ಕಮಿಷ್ನರನ್ನು ಮುಂದೆ ಮಾಡಿ ಇಡಿ ಪೋಲಿಸ್ ತಂಡದವರು ಸೇರಿಕೊಂಡು ನಮ್ಮ ಸಮುದಾಯದ ರೈತರು, ವಕೀಲರು, ಮಹಿಳೆಯರ ಮೇಲೆ ಲಾಠಿ ಪ್ರಹಾರ ಮಾಡಿ ಹಲ್ಲೆ ಮಾಡಲಾಗಿದೆ. 

 ಕೆಲವರಿಗೆ ಕೈ ಕಾಲು ಸೇರಿದಂತೆ ತಲೆಗೆ ಗಂಭೀರ ಗಾಯಗಳಾಗಿ ರಕ್ತಸ್ರಾವವಾಗಿದೆ ಕಾರಣ ಈ ಕೂಡಲೇ ಪಂಚಮಸಾಲಿ ಸಮಾಜಕ್ಕೆ ಹಾಗೂ ಪೂಜ್ಯ ಶ್ರೀಗಳಿಗೆ ಕ್ಷಮೇಯಾಚಿಸಬೇಕು ಎಂದು ಸರಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು. ನಾಲತವಾಡದ ಮುತ್ತು ಅಂಗಡಿ ಸಾಹುಕಾರ ಮಾತನಾಡಿ, ನಮ್ಮ ಪಂಚಮಸಾಲಿ ಗುರುಪೀಠದ ಶ್ರೀಗಳು ಕರೆದ ಹೋರಾಟಕ್ಕೆ ಬೆಂಬಲವನ್ನ ಸೂಚಿಸಿ ನಮ್ಮ ಕಡೆಯಿಂದ ಸಾಕಷ್ಟು ಜನರು ಹೋರಾಟಕ್ಕೆ ಬೆಂಬಲ ನೀಡಿದ್ದೇವು. ಆದರೆ ಹೋರಾಟದ ಸಮಯದಲ್ಲಿ ರಾಜ್ಯ ಕಾಂಗ್ರೇಸ್ ಸರಕಾರ ಲಾಠಿ ಚಾರ್ಜ ಮಾಡುವ ಮೂಲಕ ನಮ್ಮ ಹೋರಾಟಗಾರರನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಾಯಿತು. ನಮ್ಮ ಸಮಾಜದವರು ಚನ್ನಮ್ಮನವರ ಆರ್ಶಿವಾದ ಪಡೆದಿದ್ದು ಯಾವುದೇ ಗೊಡ್ಡ ಬೆದರಿಕೆಗೆ ಹಾಗೂ ಇಂದಿನ ಕಾಂಗ್ರೇಸ್ ಸರಕಾರದ ಯಾವುದೇ ಗುಂಡಾಗಿರಿಗೆ ಹೇದರುವುದಿಲ್ಲ. ಬೆಳಗಾವಿಯಲ್ಲಿ ನಮ್ಮ ಶ್ರೀಗಳ ಮಾತಿಗೆ ನಮ್ಮ ಸಮಾಜದ ಭಾಂದವರು ಸುಮ್ಮನಿದ್ದರು ಇಲ್ಲವಾದಲ್ಲಿ ಸುವರ್ಣಸೌದದೊಳಗೆ ನಗ್ಗುವ ತಯ್ಯಾರಿಯಲ್ಲಿದ್ದೇವು. ಕೂಡಲೇ ರಾಜ್ಯ ಸರಕಾರ ನಮ್ಮ ಸಮಾಜದಕ್ಕೆ ಕ್ಷಮಾಚನೆ ಮಾಡಿ ನಮ್ಮ ಹೋರಾಟಗಾರರ ವಿರುದ್ಧ ಹಾಕಿದ ಎಲ್ಲಾ ಕೇಸ್‌ಗಳನ್ನು ಹಿಂಪಡೆದು ಸಮಾಜಕ್ಕೆ 2ಎ ಮೀಸಲಾಯಿತಿಯನ್ನು ನೀಡಬೇಕು ಎಂದು ಹೇಳಿದರು. 

ಇದಕ್ಕೂ ಮುನ್ನ ಬಸವೇಶ್ವರ ವೃತ್ತದಲ್ಲಿ ಮಾನವಸರಪಳಿ ನಿರ್ಮಿಸಿ ಒಂದು ಗಂಟೆಯವರಿಗೆ ರಸ್ತೆ ತಡೆದು ಮುಖ್ಯಮಂತ್ರಿ ಸಿದ್ರಾಮಯ್ಯನವರ ಪ್ರಕೃತಿ ಧಹಿಸಿ ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಲಾಯಿತು.ಈ ಸಂದರ್ಭದಲ್ಲಿ ಬಿಜೆಪಿ ತಾಲೂಕಾ ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ, ಗುರುನಾಥಗೌಡ ಬಿರಾದರ,  ರವಿಕುಮಾರ ಕಮತ, ಸುಭಾಸ ಮಾದರ, ಸೋಮನಗೌಡ ಬಿರಾದಾರ(ಕವಡಿಮಟ್ಟಿ), ಯಮನಪ್ಪ ಹಡಲಗೇರಿ, ಶಿವನಗೌಡ ಶಿವಣಗಿ, ಬಸವರಾಜ ಗುಳಬಾಳ, ಅಶೋಕ ತಂಗಡಗಿ, ಗುರುನಾಥ ಬಿರಾದರ, ಸಿದ್ದರಾಜ ಹೊಳಿ, ಸಂಗಣ್ಣ ಹತ್ತಿ, ಗುರುಲಿಂಗಪ್ಪಗೌಡ ಪಾಟೀಲ, ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ, ಯುವ ನಾಯಕಿ ಗೌರಮ್ಮ ಹುನಗುಂದ ಸೇರಿದಂತೆ ಇತರರಿದ್ದರು.